Editor

ಸಿಡಿಲು ಬಡಿದು 20 ಮಂದಿ ದುರ್ಮರಣ, 17 ಮಂದಿ ಗಂಭೀರ

ಜೈಪುರ: ರಾಜಸ್ಥಾನದಲ್ಲಿ ಭಾನುವಾರ ಸಿಡಿಲಿನ ಹೊಡೆತಕ್ಕೆ ಸಿಲುಕಿ ಸುಮಾರು 20 ಜನ ಸಾವಿಗೀಡಾದ್ದಾರೆ. ರಾಜ್ಯದ ಜೈಪುರ, ಝಲವಾರ್, ಧೋಲ್‌ಪುರ ಜಿಲ್ಲೆಗಳಲ್ಲಿ‌ ದುರ್ಘಟನೆ ಸಂಭವಿಸಿದ್ದು, ಘಟನೆಯಲ್ಲಿ ಮೂವರು ಮಕ್ಕಳು ಸೇರಿದಂತೆ ಸುಮಾರು 20 ಜನ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಸುಮಾರು 20 ಸಾವಿನ ಪೈಕಿ ಜೈಪುರದ ಹೊರವಲಯದಲ್ಲಿರುವ ಅಮೆರ್ ಕೋಟೆ (Amer Fort) ವೀಕ್ಷಣೆಗಾಗಿ ಸಂಜೆ ವೇಳೆ ಪ್ರವಾಸಿಗರು ಬಂದಿದ್ದಾಗ ವೇಳೆ ಸಂಭವಿಸಿದೆ ಎನ್ನಲಾಗಿದೆ. ಅಮೆರ್​ ಕೋಟೆಯ ವೀಕ್ಷಣಾಗೋಪುರದ ಬಳಿ ನಿಂತು ಪ್ರಕೃತಿ ವೀಕ್ಷಣೆಯಲ್ಲಿ ತೊಡಗಿದ್ದ ವೇಳೆ ಏಕಾಏಕಿ […]

ಸಿಡಿಲು ಬಡಿದು 20 ಮಂದಿ ದುರ್ಮರಣ, 17 ಮಂದಿ ಗಂಭೀರ Read More »

53 ವರ್ಷಗಳ ಬಳಿಕ ಯೂರೋಕಪ್ ಗೆ ಮುತ್ತಿಕ್ಕಿದ ಇಟಲಿ, ಜಿದ್ದಾಜಿದ್ದಿನ ಹೋರಾಟದಲ್ಲಿ ಇಂಗ್ಲೆಂಡ್ ಗೆ ಸೋಲು

ಲಂಡನ್: ಭಾರೀ ಜಿದ್ದಾಜಿದ್ದಿನಿಂದ ಕೂಡಿದ್ದ ಯೂರೊ ಕಪ್ ನ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಇಟಲಿ ಗೆದ್ದು ಬೀಗಿದೆ. ಅಂತಿಮ ಸೆಣಸಾಟದಲ್ಲಿ 3-2 ರ ಅಂತರದಿಂದ ಗೆದ್ದ ಇಟಲಿ 53 ವರ್ಷಗಳ ಬಳಿಕ ಯುರೊ ಕಪ್ ಗೆದ್ದು ಸಂಭ್ರಮಿಸಿತು. ವೆಂಬ್ಲೇ ಸ್ಟೇಡಿಯಂ ನಲ್ಲಿ ನಡೆದ ಪಂದ್ಯದಲ್ಲಿ ಎಕ್ಸಟ್ರಾ ಅವಧಿ ಮುಗಿಯುವಾಗ ಇತ್ತಂಡಗಳು 1-1 ಗೋಲು ಬಾರಿಸಿದ್ದರು. ಆದರೆ ಪೆನಾಲ್ಟಿ ಶೂಟ್ ಔಟ್ ನಲ್ಲಿ ಇಟಲಿ ಗೆಲುವು ಸಾಧಿಸಿತು. ಇಂಗ್ಲೆಂಡ್ ಆಟವನ್ನು ಉನ್ನತ ಮಟ್ಟದಲ್ಲಿ ಪ್ರಾರಂಭಿಸಿತು. 1.57 ನೇ

53 ವರ್ಷಗಳ ಬಳಿಕ ಯೂರೋಕಪ್ ಗೆ ಮುತ್ತಿಕ್ಕಿದ ಇಟಲಿ, ಜಿದ್ದಾಜಿದ್ದಿನ ಹೋರಾಟದಲ್ಲಿ ಇಂಗ್ಲೆಂಡ್ ಗೆ ಸೋಲು Read More »

‘ಲವ್ ಜಿಹಾದ್’ ಅಂದ್ರೆ ಮುಸ್ಲಿಂಗೆ ಮಾತ್ರ‌ ಸೀಮಿತ ಅಲ್ಲವೆಂದ ಅಸ್ಸಾಂ ಸಿಎಂ

ಗುವಾಹಟಿ: ಮುಸ್ಲಿಂ ಯುವಕನೊಬ್ಬ ಹಿಂದೂ ಯುವತಿಗೆ ಪ್ರೀತಿ ಹೆಸರಲ್ಲಿ ‌ಮೋಸ ಮಾಡಿದ್ರೆ ಮಾತ್ರ ಲವ್ ಜಿಹಾದ್ ಅಲ್ಲ, ಹಿಂದೂ ಹುಡುಗ ಹಿಂದೂ ಹುಡುಗಿಗೆ ಮೋಸ ಮಾಡಿದ್ರೂ ಅದು ಲವ್ ಜಿಹಾದ್ ಎನಿಸಿಕೊಳ್ಳುತ್ತೆ ಎಂದು ಅಸ್ಸಾಂ ಸರ್ಕಾರ ಅಭಿಪ್ರಾಯಪಟ್ಟಿದೆ. ನಾವು ಲವ್‌ಜಿಹಾದ್ ಪದವನ್ನು ಬಳಸಲು ಬಯಸುವುದಿಲ್ಲ. ಏಕೆಂದರೆ ಹಿಂದೂವೊಬ್ಬ ಹಿಂದೂ ಯುವತಿಗೆ ಮೋಸ ಮಾಡಬಾರದು ಎಂದು ನಾವು ಭಾವಿಸುತ್ತೇವೆ. ಮುಸ್ಲಿಂ ಯುವಕನೊಬ್ಬ ಹಿಂದೂ ಯುವತಿಗೆ ಮೋಸ ಮಾಡುವುದು ಮಾತ್ರ ಲವ್‌ ಜಿಹಾದ್ ಅಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಕಾನೂನು

‘ಲವ್ ಜಿಹಾದ್’ ಅಂದ್ರೆ ಮುಸ್ಲಿಂಗೆ ಮಾತ್ರ‌ ಸೀಮಿತ ಅಲ್ಲವೆಂದ ಅಸ್ಸಾಂ ಸಿಎಂ Read More »

ತಲಪಾಡಿ: ಹಠಾತ್ ಬ್ರೇಕ್ ಹಾಕಿದ ಬಸ್ ಚಾಲಕ | ಸಂಪೂರ್ಣ ಬಸ್ಸಿನಡಿ ನುಗ್ಗಿದ ಬೈಕ್ | ಸವಾರ ಗಂಭೀರ

ಮಂಗಳೂರು: ಬಸ್ ಚಾಲಕ ಹಠಾತ್ ಬ್ರೇಕ್ ಹಾಕಿದ ಪರಿಣಾಮ ಹಿಂಬದಿಯಿಂದ ಬರುತ್ತಿದ್ದ ಬೈಕ್ ಬಸ್ಸಿಗೆ ಡಿಕ್ಕಿ ಹೊಡೆದು ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ನಗರ ಹೊರವಲಯದ ಉಚ್ಚಿಲ ಎಂಬಲ್ಲಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅಪಘಾತ ಸಂಭವಿಸಿದೆ. ಮಂಗಳೂರು ತಲಪಾಡಿ ನಡುವೆ ಸಂಚರಿಸುತ್ತಿದ್ದ ಸಿಟಿ ಬಸ್ ಚಾಲಕ ಹೆದ್ದಾರಿಯಲ್ಲಿ ಒಮ್ಮೆಗೆ ಬಸ್ಸನ್ನು ನಿಲ್ಲಿಸಿದ್ದಾನೆ. ಪರಿಣಾಮ ಹಿಂಬದಿಯಿಂದ ಬರುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ಬಸ್ಸಿನ ಹಿಂಬದಿ ಯಿಂದ ಸಂಪೂರ್ಣವಾಗಿ ಒಳಗೆ ನುಗ್ಗಿದೆ. ಬೈಕ್ ಸವಾರರಾದ, ಆಂಧ್ರ ಮೂಲದ

ತಲಪಾಡಿ: ಹಠಾತ್ ಬ್ರೇಕ್ ಹಾಕಿದ ಬಸ್ ಚಾಲಕ | ಸಂಪೂರ್ಣ ಬಸ್ಸಿನಡಿ ನುಗ್ಗಿದ ಬೈಕ್ | ಸವಾರ ಗಂಭೀರ Read More »

ಮಡಿಕೇರಿ: ಬೀಟೆ ಮರ ಕಳವು | ಆರೋಪಿಗಳ ಬಂಧನ

ಮಡಿಕೇರಿ: ತೋಟದಲ್ಲಿ ಬೆಳೆದು ನಿಂತಿದ್ದ ಬೀಟೆ ಮರ ಕಡಿದು ಸಾಗಾಟ ಮಾಡಿದ ಆರೋಪಿಗಳನ್ನು ಬಂಧಿಸುವಲ್ಲಿ ಮಡಿಕೇರಿ ಗ್ರಾಮಾಂತರ ಹಾಗೂ ಡಿಸಿಐಬಿ ಘಟಕ ಪೊಲೀಸರು ಯಶಸ್ವಿಯಾಗಿದ್ದಾರೆ. ವಾಲ್ನೂರು-ತ್ಯಾಗತ್ತೂರಿನ ಇಬ್ರಾಹಿಂ(27), ಎಂ.ಕೆ.ಉಮ್ಮರ್(33), ವಾಸಿಂ ಅಕ್ರಂ(25) ಬಂಧಿತ ಆರೋಪಿಗಳು. ಚೇರಳ ಶ್ರೀಮಂಗಲ ಗ್ರಾಮದ ಬಿ.ಎಂ.ಬೋಪಯ್ಯ ಅವರ ತೋಟದಲ್ಲಿ ಕಳೆದ ವರ್ಷ 80 ಅಡಿ ಉದ್ದದ 5 ಅಡಿ ದಪ್ಪದ ಬೀಟೆ ಮರವನ್ನು ಕಳವು ಮಾಡಿದ್ದರು ಎಂದು ಗ್ರಾಮಾಂತರ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಈ ಸಂಬಂಧ ಪ್ರಕರಣ ದಾಖಲಾಗಿತ್ತು. ಕಾರ್ಯಾಚರಣೆ ಕೈಗೊಂಡ ಪೊಲೀಸರು

ಮಡಿಕೇರಿ: ಬೀಟೆ ಮರ ಕಳವು | ಆರೋಪಿಗಳ ಬಂಧನ Read More »

ಮಂಗಳೂರು: ಅಪಘಾತ ಕಂಡು ಸಹಾಯಕ್ಕೆ ಧಾವಿಸಿದಾಗ ಬಂದೆರಗಿದ ಟ್ಯಾಂಕರ್ | ಸುಳ್ಯ ಮೂಲದ ಯುವಕ ಸಾವು

ಮಂಗಳೂರು: ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದವರನ್ನು ಉಪಚರಿಸುತ್ತಿದ್ದ ವೇಳೆ ಯುವಕನೊಬ್ಬನಿಗೆ ಟ್ಯಾಂಕರ್ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ ಯುವಕ ಮೃತಪಟ್ಟ ಘಟನೆ ಇಂದು ನಡೆದಿದೆ. ಮೃತಪಟ್ಟವರನ್ನು ಸುಳ್ಯ ತಾಲೂಕಿನ ಮೇರ್ಕಜೆ ಪುರುಷೋತ್ತಮ ಎಂಬವರ ಮಗ ತೇಜಸ್ (28) ಎಂದು ಗುರುತಿಸಲಾಗಿದೆ. ನಗರದಲ್ಲಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡಿಕೊಂಡಿದ್ದ ತೇಜಸ್ ನಿನ್ನೆ ಸಂಜೆ ಕೆಲಸ ಮುಗಿಸಿ ರೂಮ್ ಕಡೆ ತೆರಳುತ್ತಿದ್ದರು. ಈ ಸಂದರ್ಭ ನಗರದ ಬೈಕಂಪಾಡಿ ಬಳಿ ತೇಜಸ್ ಗೆ ಬೇರೊಂದು ಬೈಕ್ ಅಪಘಾತ ಗೊಂಡಿರುವುದು ಕಂಡುಬಂದಿದೆ. ತಕ್ಷಣ ಸಹಾಯಕ್ಕೆ

ಮಂಗಳೂರು: ಅಪಘಾತ ಕಂಡು ಸಹಾಯಕ್ಕೆ ಧಾವಿಸಿದಾಗ ಬಂದೆರಗಿದ ಟ್ಯಾಂಕರ್ | ಸುಳ್ಯ ಮೂಲದ ಯುವಕ ಸಾವು Read More »

ಕರ್ನಾಟಕದ 19ನೇ ರಾಜ್ಯಪಾಲರಾಗಿ ಪ್ರಮಾಣ ವಚನ ಸ್ವೀಕರಿಸಿದ ತಾವರ್ ಚಂದ್ ಗೆಹ್ಲೋಟ್

ಬೆಂಗಳೂರು: ರಾಜ್ಯದ 19ನೇ ರಾಜ್ಯಪಾಲರಾಗಿ ಇಂದು ತಾವರ್ ಚಂದ್ ಗೆಹ್ಲೋಟ್ ರಾಜಭವನದ ಗಾಜಿನ ಮನೆಯಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಈಶ್ವರನ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದ ನೂತನ ರಾಜ್ಯಪಾಲರಿಗೆ ಅಧಿಕಾರ ಹಾಗೂ ಗೌಪ್ಯತೆಯ ಪ್ರಮಾಣವಚನವನ್ನು ಹೈಕೋರ್ಟ್ ಮುಖ್ಯ ನ್ಯಾ. ಅಭಯ್ ಶ್ರೀನಿವಾಸ್ ಓಕಾ ಬೋಧಿಸಿದ್ದಾರೆ. ಆ ಬಳಿಕ ಸಿ.ಎಂ ಬಿ.ಎಸ್ ಯಡಿಯೂರಪ್ಪ ಅವರು ಪುಷ್ಪಗುಚ್ಛ ನೀಡಿ ಸ್ವಾಗತಿಸಿದ್ದಾರೆ. ನಾನು ಶ್ರದ್ಧಾಪೂರ್ವಕವಾಗಿ ಕರ್ನಾಟಕ ರಾಜ್ಯಪಾಲ ಹುದ್ದೆಯ ಜವಾಬ್ದಾರಿಗಳನ್ನು ನಿಭಾಯಿಸುತ್ತೇನೆಂದು ಭರವಸೆ ಕೊಡುತ್ತೇನೆ. ವಿಧಿಬದ್ಧ ನಿಯಮಗಳ ಪಾಲನೆ ಮೂಲಕ

ಕರ್ನಾಟಕದ 19ನೇ ರಾಜ್ಯಪಾಲರಾಗಿ ಪ್ರಮಾಣ ವಚನ ಸ್ವೀಕರಿಸಿದ ತಾವರ್ ಚಂದ್ ಗೆಹ್ಲೋಟ್ Read More »

5 ನೇ ತರಗತಿ ಮಕ್ಕಳಿಗೆ ಶಾಲೆಯಿಂದಲೇ ಉಚಿತ ಕಾಂಡೋಮ್…! | ಅಚ್ಚರಿಯ ಹಿಂದಿನ ಅಸಲಿಯತ್ತೇನು…?

ವಾಷಿಂಗ್ಟನ್: ಇಲ್ಲಿನ ಪಬ್ಲಿಕ್ ಸ್ಕೂಲ್ಸ್ ಬೋರ್ಡ್ ತನ್ನ ಅಧೀನದ ಶಾಲೆಗಳಲ್ಲಿ ಉಚಿತ ಕಾಂಡೋಮ್ ಯೋಜನೆ ಜಾರಿಗೊಳಿಸಿ ಐದನೇ ತರಗತಿ ವಿದ್ಯಾರ್ಥಿಗಳಿಗೆ ಶಾಲಾ ಆವರಣದಲ್ಲಿಯೇ ಕಾಂಡೋಮ್ ನೀಡಿ ಪ್ರೋ ತ್ಸಾಹಿಸಲಾಗುತ್ತಿದೆ. ಇಂತಾಹದೊಂದು ಅಚ್ಚರಿ ಘಟನೆ ಚಿಕಾಗೊದಲ್ಲಿ ನಡೆದಿದೆ. ಐದನೇ ತರಗತಿ ಮೇಲ್ಪಟ್ಟ ಎಲ್ಲಾ ವಿದ್ಯಾರ್ಥಿಗಳಿಗೆ ಕಾಂಡೋಮ್ ಒದಗಿಸಲಾಗುತ್ತಿದೆ. ಆದರೆ ಐದನೇ ತರಗತಿಯಿಂದ ಕೆಳಗಿನ ಮಕ್ಕಳಿಗೆ ಈ ಯೋಜನೆ ಅನ್ವಯಿಸುವುದಿಲ್ಲ. ಇದಕ್ಕೆ ಸಮಜಾಯಿಸಿ ನೀಡಿರುವ ಸಿಪಿಎಸ್, ಉತ್ತಮ ಲೈಂಗಿಕ ಶಿಕ್ಷಣವು ಆರಂಭದಲ್ಲಿಯೇ ದೊರೆಯಬೇಕು. ಅದರಿಂದ ಅಕಾಲಿಕ ಸಂತಾನ ಮತ್ತು ಲೈಂಗಿಕ

5 ನೇ ತರಗತಿ ಮಕ್ಕಳಿಗೆ ಶಾಲೆಯಿಂದಲೇ ಉಚಿತ ಕಾಂಡೋಮ್…! | ಅಚ್ಚರಿಯ ಹಿಂದಿನ ಅಸಲಿಯತ್ತೇನು…? Read More »

ಉದ್ಯಮಿ ರಿಚರ್ಡ್ ಬ್ರಾನ್ಸನ್ ಜೊತೆ ಭಾರತೀಯ ಮೂಲದ ಸಿರಿಶಾ ಬಾಂದ್ಲಾ ಬಾಹ್ಯಾಕಾಶಕ್ಕೆ

ವಾಷಿಂಗ್ಟನ್: ಹೆಸರಾಂತ ಉದ್ಯಮಿ ರಿಚರ್ಡ್ ಬ್ರಾನ್ಸನ್ ಅವರ ಜೊತೆ ಭಾರತೀಯ ಮೂಲದ ಏರೋನಾಟಿಕಲ್ ಎಂಜಿನಿಯರ್ ಸಿರಿಶಾ ಬಾಂದ್ಲಾ ಇಂದು ಬಾಹ್ಯಕಾಶಕ್ಕೆ ಹಾರಲಿದ್ದಾರೆ. Join us July 11th for our first fully crewed rocket powered test flight, and the beginning of a new space age. The countdown begins. #Unity22 https://t.co/5UalYT7Hjb. @RichardBranson pic.twitter.com/ZL9xbCeWQX — Virgin Galactic (@virgingalactic) July 1, 2021 ಈ ಮೂಲಕ ಸ್ಪೇಸ್ ಟೂರಿಸಮ್

ಉದ್ಯಮಿ ರಿಚರ್ಡ್ ಬ್ರಾನ್ಸನ್ ಜೊತೆ ಭಾರತೀಯ ಮೂಲದ ಸಿರಿಶಾ ಬಾಂದ್ಲಾ ಬಾಹ್ಯಾಕಾಶಕ್ಕೆ Read More »

ಇಂಡೋನೇಷ್ಯದಲ್ಲಿ ಕೋವಿಡ್ ಸ್ಫೋಟ | ಆಪತ್ತಿನಲ್ಲಿ ಆಮ್ಲಜನಕ ಆಪತ್ಭಾಂದವ

ಜಕಾರ್ತಾ: ಜನಸಂಖ್ಯೆಯಲ್ಲಿ ಪ್ರಪಂಚದ ನಾಲ್ಕನೇ ದೊಡ್ಡ ರಾಷ್ಟ್ರ ಇಂಡೋನೇಷಿಯಾದಲ್ಲಿ ಇದೀಗ ಕೋವಿಡ್ ಸ್ಫೋಟ ಸಂಭವಿಸಿದ್ದು ಆಮ್ಲಜನಕದ ಕೊರತೆ ಎದುರಾಗಿದೆ. ಕೋರಿಕೆಗೆ ತಕ್ಷಣ ಸ್ಪಂದಿಸಿರುವ ಸಿಂಗಾಪುರ ಮತ್ತು ಆಸ್ಟ್ರೇಲಿಯಾ ಇಂಡೋನೇಷಿಯಾದ ನೆರವಿಗೆ ನಿಂತಿದೆ. ಸಿಂಗಾಪುರ 1,000 ಆಮ್ಲಜನಕ ಸಿಲಿಂಡರ್‌ಗಳು, ಕಾನ್ಸೆಂಟ್ರೇಟರ್‌ಗಳು, ವೆಂಟಿಲೇಟರ್‌ಗಳು ಮತ್ತು ಇತರ ವೈದ್ಯಕೀಯ ಉಪಕರಣಗಳನ್ನು ಇಂಡೋನೇಷ್ಯಾಗೆ ಕಳುಹಿಸಿಕೊಟ್ಟಿದೆ. ಜೊತೆಗೆ ಅಷ್ಟೇ ಪ್ರಮಾಣದ ನೆರವನ್ನು ಆಸ್ಟ್ರೇಲಿಯಾ ಇಂಡೋನೇಷ್ಯಾಕ್ಕೆ ತಲುಪಿಸಿದೆ. ಈ ನಡುವೆ ಸಿಂಗಾಪುರದಿಂದ 36,000 ಟನ್‌ ಆಮ್ಲಜನಕ ಮತ್ತು ಆಮ್ಲಜನಕ ಉತ್ಪಾದಿಸುವ 10,000 ಕಾನ್ಸೆಂಟ್ರೇಟರ್‌ ಉಪಕರಣಗಳನ್ನು ಖರೀದಿಸಲು

ಇಂಡೋನೇಷ್ಯದಲ್ಲಿ ಕೋವಿಡ್ ಸ್ಫೋಟ | ಆಪತ್ತಿನಲ್ಲಿ ಆಮ್ಲಜನಕ ಆಪತ್ಭಾಂದವ Read More »