Editor

ಶಾಸಕರು ಸಚಿವರಾದ್ರೂ ಹೊಳೆ ಈಜೋದು ತಪ್ಪಲಿಲ್ಲ | ಅಂಗಾರರ ಊರಲ್ಲಿ ಜೀವ ಅಂಗೈಯಲ್ಲಿ….! | ಮರಸಂಕದಲ್ಲಿ ಸೇತುವೆ ನಿರ್ಮಾಣ ಯಾವಾಗ…?

ಸುಳ್ಯ: ಈ ಊರಿನ ಹೆಸರು ಮರಸಂಕ. ತಾಲೂಕಿನ ಜಾಲ್ಸೂರು ಗ್ರಾಮಕ್ಕೆ ಒಳಪಡುವ ಈ ಊರಿಗೆ ಅಗತ್ಯ ಮೂಲ ಸೌಕರ್ಯವಾದ ರಸ್ತೆ ಸಂಪರ್ಕವೇ ಇಲ್ಲ. ಇದಕ್ಕೆ ಕಾರಣ ಊರಿಗೆ ಸಂಪರ್ಕಿಸುವ ರಸ್ತೆಗೆ ಅಡ್ಡಲಾಗಿರುವ ಹಳ್ಳ. ಊರಿನಿಂದ ಜಾಲ್ಸೂರು ಸಂಪರ್ಕಿಸುವ ದಾರಿಯಲ್ಲಿ ಹಳ್ಳವೊಂದಿದೆ. ಬೇಸಿಗೆಯಲ್ಲಿ ಕಷ್ಟವಿಲ್ಲದೆ ಇದನ್ನು ದಾಟಿ ಊರ ಜನ ಸಾಗುತ್ತಾರೆ. ಆದರೆ ಮಳೆಗಾಲದಲ್ಲೂ ಉಕ್ಕಿ ಬರುವ ನೀರಿನಲ್ಲೇ ಜೀವಭಯದಲ್ಲಿ ನದಿ ದಾಟುವ ಅನಿವಾರ್ಯತೆ ಇಲ್ಲಿನ ನಿವಾಸಿಗಳದ್ದು. ಇತ್ತೀಚೆಗೆ ಸ್ಥಳೀಯ ನಿವಾಸಿ ಮಹಿಳೆಯೊಬ್ಬರಿಗೆ ಆರೋಗ್ಯ ಸಮಸ್ಯೆ ಎದುರಾಗಿದೆ. ಊರಿನ […]

ಶಾಸಕರು ಸಚಿವರಾದ್ರೂ ಹೊಳೆ ಈಜೋದು ತಪ್ಪಲಿಲ್ಲ | ಅಂಗಾರರ ಊರಲ್ಲಿ ಜೀವ ಅಂಗೈಯಲ್ಲಿ….! | ಮರಸಂಕದಲ್ಲಿ ಸೇತುವೆ ನಿರ್ಮಾಣ ಯಾವಾಗ…? Read More »

ಸುಂದರ ಉದ್ಯಾನವನ ಬೆಳ್ಳಾರೆಯ ತಿರುಮಲೇಶ್ವರ ಭಟ್’ರ ಮನೆಯಂಗಳ | ಇಲ್ಲಿವೆ ನೂರಾರು ಕ್ಯಾಕ್ಟಸ್ ಗಿಡಗಳು ಹಣ್ಣಿನ ಮರಗಳು

ಸುಳ್ಯ: ಹೆಸರು ತಿರುಮಲೇಶ್ವರ ಭಟ್. ಇವರ ಮನೆಯ ಗೇಟಿನ ಒಳಹೊಕ್ಕರೆ ಸಾಕು ಮೈಮನ ಅರಳುತ್ತದೆ. ಮನಸ್ಸು ರೋಮಾಂಚನಗೊಳ್ಳುತ್ತದೆ. ಇದಕ್ಕೆ ಕಾರಣ ಮನೆಯ ಅಂಗಳದಲ್ಲಿರುವ ಬಣ್ಣ ಬಣ್ಣದ ಹೂಗಿಡ-ಬಳ್ಳಿಗಳ, ಕ್ಯಾಕ್ಟಸ್ ಗಿಡಗಳ ಸುಂದರ ದೃಶ್ಯ. ಹೌದು ತಿರುಮಲೇಶ್ವರ ಅವರ ಮನೆ ಇರುವುದು ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಕುರಿಯಾಜೆಯಲ್ಲಿ. ವೃತ್ತಿಯಲ್ಲಿ ಕೃಷಿಕರಾಗಿರುವ ಇವರು ಮನೆಯಂಗಳವನ್ನು ಉದ್ಯಾನವನವನ್ನಾಗಿ ಮಾಡಿದ್ದಾರೆ. ಪ್ರಗತಿಪರ ಕೃಷಿಕರಾಗಿರುವ ಕಾರಣ ಇವರು ಆಗಾಗ ಕೃಷಿ ಅಧ್ಯಯನಕ್ಕಾಗಿ ಅಂತರರಾಜ್ಯ ಹಾಗೂ ಅಂತರಾಷ್ಟ್ರೀಯ ಪ್ರವಾಸ ಮಾಡುತ್ತಾರೆ. ಆ ಸಮಯದಲ್ಲಿ ಅಲ್ಲಲ್ಲಿ

ಸುಂದರ ಉದ್ಯಾನವನ ಬೆಳ್ಳಾರೆಯ ತಿರುಮಲೇಶ್ವರ ಭಟ್’ರ ಮನೆಯಂಗಳ | ಇಲ್ಲಿವೆ ನೂರಾರು ಕ್ಯಾಕ್ಟಸ್ ಗಿಡಗಳು ಹಣ್ಣಿನ ಮರಗಳು Read More »

ಮಡಿಕೇರಿ: ಭಾರಿ ಮಳೆ | ತಾಳತ್’ಮನೆಯಲ್ಲಿ ಗುಡ್ಡ ಕುಸಿತ | ಅಪಾಯದಲ್ಲಿ ಮನೆಗಳು | ಜನರ ಸ್ಥಳಾಂತರಕ್ಕೆ ಸೂಚನೆ

ಮಡಿಕೇರಿ: ಕೊಡಗಿನಲ್ಲಿ ಭಾರಿ ಮಳೆ ಸುರಿಯುತ್ತಿದ್ದು ತಾಳತ್ ಮನೆ ಗ್ರಾಮದಲ್ಲಿ ಗುಡ್ಡ ಕುಸಿತ ಉಂಟಾಗಿದೆ. ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿದ್ದು ಜನರ ಸ್ಥಳಾಂತರಕ್ಕೆ ಸೂಚನೆ ನೀಡಿದ್ದಾರೆ. ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಭಾರಿ ಮಳೆಯಾಗುತ್ತಿದೆ. ಪ್ರತಿವರ್ಷದಂತೆ ಅಪಾಯ ಎದುರಾಗುವ ಭೀತಿ ಜನರನ್ನು ಕಾಡುತ್ತಿದೆ. ಇಂದು ಮಂಗಳೂರು ರಸ್ತೆಯ ತಾಳತ್ ಮನೆ ಎಂಬಲ್ಲಿ ಗುಡ್ಡ ಕುಸಿದಿದ್ದು ಸುಮಾರು ಆರು ಮನೆಯ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದೆ. ಯಾವುದೇ ಅಪಾಯ ಸಂಭವಿಸಿಲ್ಲ. ಆದರೆ ಮೊನ್ನೆಎಚ್ಚರಿಕೆ ಕ್ರಮವಾಗಿ ಊರಿನ ಜನರನ್ನು ಬೇರೆಡೆಗೆ

ಮಡಿಕೇರಿ: ಭಾರಿ ಮಳೆ | ತಾಳತ್’ಮನೆಯಲ್ಲಿ ಗುಡ್ಡ ಕುಸಿತ | ಅಪಾಯದಲ್ಲಿ ಮನೆಗಳು | ಜನರ ಸ್ಥಳಾಂತರಕ್ಕೆ ಸೂಚನೆ Read More »

ಮುಳುಗಿದ್ದ ಸೇತುವೆ ಮೇಲೆ ಬಸ್ ಚಲಾಯಿಸಿದ ಚಾಲಕ ಅಮಾನತು

ಮಹಾರಾಷ್ಟ್ರ: ಪ್ರವಾಹದಿಂದ ಸಂಪೂರ್ಣವಾಗಿ ಮುಳುಗಿದ್ದು ಸೇತುವೆ ಮೇಲೆ ಚಾಲಕನೊಬ್ಬ ಬಸ್ ಚಲಾಯಿಸಿದ ಘಟನೆ ರಾಯಗಡ ಜಿಲ್ಲೆಯಲ್ಲಿ ನಡೆದಿದೆ. ಜನರ ಜೀವದ ಜೊತೆ ಚೆಲ್ಲಾಟವಾಡಿದ ಚಾಲಕರನ್ನು ಎಂಎಸ್ಆರ್’ಟಿಸಿ ಅಮಾನತು ಮಾಡಿದೆ. ರಾಯಗಡದ ಮಹಾಡ ತಾಲೂಕಿನ ನದಿಯ ಸೇತುವೆ ಭಾರಿ ಮಳೆ ಹಿನ್ನೆಲೆಯಲ್ಲಿ ಮುಳುಗಡೆಯಾಗಿತ್ತು. ಮುಳುಗಿದೆ ಸೇತುವೆ ಮೇಲೆ ಇತರೆ ಯಾವುದೇ ವಾಹನಗಳು ಸಂಚರಿಸಿಲ್ಲ. ಆದರೆ ದುಸ್ಸಾಹಸಕ್ಕೆ ಕೈಹಾಕಿದ ಎಂಎಸ್ಆರ್’ಟಿಸಿ ಬಸ್ ಚಾಲಕ ಬಸ್ಸನ್ನು ನೀರಿನ ಮೇಲೆಯೇ ನದಿಯ ಇನ್ನೊಂದು ಬದಿಗೆ ಕೊಂಡೊಯ್ದಿದ್ದಾನೆ. ನದಿ ದಾಟುತ್ತಿದ್ದಂತೆ ಬಸ್ ಹಡಗಿನಂತೆ ಕಂಡುಬಂದಿದೆ.

ಮುಳುಗಿದ್ದ ಸೇತುವೆ ಮೇಲೆ ಬಸ್ ಚಲಾಯಿಸಿದ ಚಾಲಕ ಅಮಾನತು Read More »

KRS ಬಿರುಕು ಬಿಟ್ಟಿದೆ ಎಂದು ನಾನು ಹೇಳೇ ಇಲ್ಲ : ಸಂಸದೆ ಸುಮಕ್ಕ ಯೂಟರ್ನ್

ಮಂಡ್ಯ : ಕೆಆರ್ ಎಸ್ ಜಲಾಶಯದ ಗೋಡೆಗಳು ಬಿರುಕು ಬಿಟ್ಟಿದೆ ಎಂದು ಹೇಳಿದ್ದ ಸಂಸದೆ ಸುಮಲತಾ ತಮ್ಮ ಹೇಳಿಕೆಯಿಂದ ಯೂಟರ್ನ್ ತೆಗೆದುಕೊಂಡಿದ್ದು ನಾನು ಹಾಗೆ ಹೇಳೇ ಇಲ್ಲ ನನ್ನ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದಿದ್ದಾರೆ. ಕೆಲ ಸಮಯದ ಹಿಂದೆ ಕೆಆರ್ ಎಸ್ ಡ್ಯಾಮ್ ಸುತ್ತಲೂ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯಿಂದ ಬಿರುಕು ಬಿಟ್ಟಿದೆ. ಸೂಕ್ತ ತನಿಖೆ ಕೈಗೊಳ್ಳಬೇಕು. ಆದರೆ ಅದಕ್ಕೆ ಸ್ಥಳೀಯ ರಾಜಕಾರಣ ಅಡ್ಡಿ ಪಡಿಸುತ್ತಿದೆ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಹೇಳಿದ್ದರು. ಇದೀಗ ಅದನ್ನು ತಿರುಚಿ

KRS ಬಿರುಕು ಬಿಟ್ಟಿದೆ ಎಂದು ನಾನು ಹೇಳೇ ಇಲ್ಲ : ಸಂಸದೆ ಸುಮಕ್ಕ ಯೂಟರ್ನ್ Read More »

RBI ಮುದ್ರಣಾಲಯದಿಂದಲೇ ಬಂಡಲ್ ಬಂಡಲ್ ಬಿಸಿ ಬಿಸಿ ನೋಟು ಮಾಯ…..!

ಮುಂಬೈ: ಮುಂಬೈನಲ್ಲಿರುವ ನೋಟು ಮುದ್ರಾಣಾಲಯದಿಂದ ಐದು ಬಂಡಲ್ 500 ರೂ ನೋಟು ನಾಪತ್ತೆಯಾಗಿದೆ. ಈ ಬಗ್ಗೆ ನಾಸಿಕ್ ಪೊಲೀಸ್ ಠಾಣೆಯಲ್ಲಿ ಮುದ್ರಣಾಲಯದ ಅಧಿಕಾರಿಗಳು ದೂರು ನೀಡಿದ್ದಾರೆ. ಝೆಡ್ ಪ್ಲಸ್ ಸೆಕ್ಯೂರಿಟಿ ನಡುವೆಯೂ 5 ಲಕ್ಷ ಮೌಲ್ಯದ ನೋಟು ನಾಪತ್ತೆಯಾಗಿರುವುದು ಅಚ್ಚರಿ ಮೂಡಿಸಿದೆ ಮತ್ತು ಅನುಮಾನಕ್ಕೆ ಕಾರಣವಾಗಿದೆ. ವರ್ಷಕ್ಕೆ ಎರಡರಿಂದ ಎರಡೂವರೆ ಸಾವಿರ ಮಿಲಿಯನ್ ರೂಪಾಯಿ ಮೌಲ್ಯದ ನೋಟುಗಳನ್ನು ಇಲ್ಲಿ ಮುದ್ರಿಸಲಾಗುತ್ತದೆ. ಆದರೆ ಇಲ್ಲಿಯ ವರೆಗೆ ಇಂತಹ ಪ್ರಕರಣಗಳು ವರದಿಯಾಗಿಲ್ಲ. ನೋಟು ಅಮಾನ್ಯೀಕರಣ ಸಂದರ್ಭದಲ್ಲಿ ದಿನಕ್ಕೆ ಕೋಟಿ-ಕೋಟಿ ಮೌಲ್ಯದ

RBI ಮುದ್ರಣಾಲಯದಿಂದಲೇ ಬಂಡಲ್ ಬಂಡಲ್ ಬಿಸಿ ಬಿಸಿ ನೋಟು ಮಾಯ…..! Read More »

ಮಂಗಳೂರು: ಮುಂಬೈಯಿಂದ ಬಂದಿದ್ದ ಮಹಿಳೆ ನಿಗೂಢ ನಾಪತ್ತೆ

ಮಂಗಳೂರು: ಮುಂಬೈಯಿಂದ ಬಂದ ಮಹಿಳೆಯೊಬ್ಬರು ನಿಗೂಢವಾಗಿ ನಾಪತ್ತೆಯಾಗಿರುವ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಪತ್ತೆಯಾಗಿರುವ ಮಹಿಳೆಯನ್ನು ಸೂರಿಂಜೆ ಬಳಿಯ ಪುಚ್ಚಾಡಿ ನಿವಾಸಿ ಪುಷ್ಪ (40) ಎಂದು ಗುರುತಿಸಲಾಗಿದೆ. ಇವರು ಮುಂಬೈಯಿಂದ ಆಗಮಿಸಿದ್ದು ಜು. 13 ರ ಸೋಮವಾರ ಮಧ್ಯಾಹ್ನದಿಂದ ನಾಪತ್ತೆಯಾಗಿದ್ದರು. ಸಂಬಂಧಿಕರು ಹುಡುಕಾಡಿದಾಗ ಇವರ ಪಾದರಕ್ಷೆಗಳು ಮನೆಯ ಬಳಿ ಇರುವ ಶಿಬರೂರು ಹೊಳೆಯ ಪಕ್ಕದಲ್ಲಿ ಪತ್ತೆಯಾಗಿದೆ. ಯಾವುದೋ ಕಾರಣಕ್ಕೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಸಂಶಯದಿಂದ ಅಗ್ನಿಶಾಮಕ ದಳದವರು ನದಿಯಲ್ಲಿ ಶೋಧ ಕಾರ್ಯ

ಮಂಗಳೂರು: ಮುಂಬೈಯಿಂದ ಬಂದಿದ್ದ ಮಹಿಳೆ ನಿಗೂಢ ನಾಪತ್ತೆ Read More »

ಬಾಲಕನ ಅಪಹರಣ ಪ್ರಕರಣ : ಆರೋಪಿಗೆ ನ್ಯಾಯಾಂಗ ಬಂಧನ

ಉಡುಪಿ: ಬಾಲಕನ ಅಪಹರಣದ ಪ್ರಕರಣದಲ್ಲಿ ಬಂಧಿತ ಆರೋಪಿಯನ್ನು ಪೊಲೀಸರು ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಆರೋಪಿ ದಾಂಡೇಲಿಯ ಪರಶುರಾಮ‌ ಭೀಮಪ್ಪನನ್ನು ಭಾನುವಾರ ಕುಮಟಾದಲ್ಲಿ ಬಂಧಿಸಿದ್ದರು. ಸೋಮವಾರ ಉಡುಪಿಗೆ ಕರೆತರಲಾದ ಪರಶುರಾಮನನ್ನು ಮೂರ್ಚೆ ರೋಗದ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಮಂಗಳವಾರ ವೈದ್ಯರ ಸಲಹೆಯಂತೆ ಆತನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ನ್ಯಾಯಾಂಗ ಬಂಧನಕ್ಕೆ ಒಳಗಾದ ಈತನನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿದ್ದು, ಈತನಿಗೆ ಸೋಂಕು ಇರುವುದು ದೃಢಪಟ್ಟಿತ್ತು. ಅದರಂತೆ ಆತನನ್ನು ಮತ್ತೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು

ಬಾಲಕನ ಅಪಹರಣ ಪ್ರಕರಣ : ಆರೋಪಿಗೆ ನ್ಯಾಯಾಂಗ ಬಂಧನ Read More »

ಗೋಲಿ ನುಂಗಿ ಒಂದು ವರ್ಷದ ಮಗು ಮೃತ್ಯು

ದಾವಣಗೆರೆ: ಆಟವಾಡುತ್ತಿದ್ದ ವೇಳೆ ಮಗು ಆಕಸ್ಮಿಕವಾಗಿ ಗೋಲಿ ನಂಗಿ ಸಾವನಪ್ಪಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಹರೀಶ್ ಎಂಬುವರ ಪುತ್ರ ಮನವೀರ್ (1) ಮೃತಪಟ್ಟ ದುರ್ದೈವಿ ಮಗು. ಮನವೀರ್ ನಿತ್ಯ ಮನೆಯಂಗಳದಲ್ಲಿ ಗಾಜಿನ ಗೋಲಿಯಿಂದ ಅಕ್ಕ ಪಕ್ಕದ ಮನೆ ಮಕ್ಕಳೊಂದಿಗೆ ಆಟವಾಡುತ್ತಿದ್ದನು. ಇದೇ ವೇಳೆ ಗೋಲಿ ಬಾಯಲ್ಲಿ ಹಾಕಿಕೊಂಡು ಕ್ಷಣದಲ್ಲಿ ನುಂಗಿ ಬಿಟ್ಟಿದ್ದಾನೆ. ಮಗು ಗೋಲಿ ನುಂಗಿದನ್ನ ಗಮನಿಸಿದ ಜೊತೆಗಿದ್ದ ಬಾಲಕ ಪಾಲಕರಿಗೆ ಹೇಳಿದ್ದು, ಪಾಲಕರು ಆಸ್ಪತ್ರೆಗೆ ಹೋಗುವಷ್ಟರಲ್ಲಿ 10 ರಿಂದ 15 ನಿಮಿಷದಲ್ಲಿ ಮಗು ಮನವೀರ್ ಸಾವನ್ನಪ್ಪಿದೆ.

ಗೋಲಿ ನುಂಗಿ ಒಂದು ವರ್ಷದ ಮಗು ಮೃತ್ಯು Read More »

ಪುಲ್ವಾಮದಲ್ಲಿ ಬೆಳ್ಳಂಬೆಳಗ್ಗೆ ಮೂವರು LET ಉಗ್ರರು ಫಿನಿಷ್

ಪುಲ್ವಾಮ: ಜಮ್ಮು ಕಾಶ್ಮೀರದ ಪುಲ್ವಾಮ ದಲ್ಲಿ ಉಗ್ರರಿರುವ ಖಚಿತ ಮಾಹಿತಿ ಪಡೆದ ಸೇನೆ ಕಾರ್ಯಾಚರಣೆ ನಡೆಸಿ ಮೂವರು ಉಗ್ರರನ್ನು ಹೊಡೆದುರುಳಿಸಿದೆ . ಇಂದು ಮುಂಜಾನೆ ಪುಲ್ವಾಮ ನಗರದಲ್ಲಿ ಉಗ್ರರಿರುವ ಬಗ್ಗೆ ಸೇನಾಧಿಕಾರಿಗಳಿಗೆ ಖಚಿತ ಮಾಹಿತಿ ದೊರೆತಿತ್ತು. ತಕ್ಷಣ ಕಾರ್ಯಪ್ರವೃತವಾದ ಭಾರತೀಯ ಭೂ ಸೇನೆ ಉಗ್ರರಿರುವ ಸ್ಥಳವನ್ನು ಸುತ್ತುವರೆದಿದೆ. ಅದಾಗಲೇ ಉಗ್ರರು ಯೋಧರ ಮೇಲೆ ಗುಂಡಿನ ದಾಳಿ ಆರಂಭಿಸಿದ್ದಾರೆ. ತಕ್ಷಣ ಪ್ರತಿದಾಳಿ ನಡೆಸಿದ ಯೋಧರು ಲಷ್ಕರ್-ಇ-ತಾಯ್ಬಾ ಉಗ್ರ ಸಂಘಟನೆಯ ಓರ್ವ ಕಾಮಾಂಡರ್ ಸೇರಿದಂತೆ ಮೂವರು ಉಗ್ರರನ್ನು ಸದೆಬಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಪುಲ್ವಾಮದಲ್ಲಿ ಬೆಳ್ಳಂಬೆಳಗ್ಗೆ ಮೂವರು LET ಉಗ್ರರು ಫಿನಿಷ್ Read More »