ಮಣಪ್ಪುರಂ ಗೋಲ್ಡ್ ಲೋನ್ ಕಚೇರಿಗೆ ನುಗ್ಗಿದ ಮುಸುಕುಧಾರಿಗಳು 15 ಕೆಜಿ ಚಿನ್ನ ಹೊತ್ತೊಯ್ದರು | ಪೊಲೀಸರ ಮಿಂಚಿನ ಎನ್ ಕೌಂಟರ್ ಗೆ ಇಬ್ಬರು ದರೋಡೆಕೋರರು ಬಲಿ
ಆಗ್ರ: ಮಣಪುರಂ ಗೋಲ್ಡ್ ಲೋನ್ ಕಚೇರಿಗೆ ನುಗ್ಗಿದ ಮುಸುಕುಧಾರಿ ದರೋಡೆಕೋರರು 15 ಕೆಜಿ ಚಿನ್ನ ಮತ್ತು ಐದು ಲಕ್ಷ ನಗದು ಹೊತ್ತೊಯ್ದ ಘಟನೆ ಆಗ್ರಾದ ಕಮಲಾ ನಗರದಲ್ಲಿ ನಡೆದಿದೆ. ಘಟನೆ ಬೆನ್ನಲ್ಲೇ ಮಿಂಚಿನ ಕಾರ್ಯಾಚರಣೆ ನಡೆಸಿದ ಪೊಲೀಸರು ಇಬ್ಬರು ದರೋಡೆಕೋರರನ್ನು ಎನ್ಕೌಂಟರ್ ಮಾಡಿದ್ದಾರೆ. ಗೋಲ್ಡ್ ಲೋನ್ ಕಚೇರಿಗೆ ನುಗ್ಗಿದ 6 ಜನ ಮುಸುಕುದಾರಿ ದರೋಡೆಕೋರರು ಕಚೇರಿ ಸಿಬ್ಬಂದಿಗಳನ್ನು ಬಂದೂಕು ತೋರಿಸಿ ಬೆದರಿಸಿದ್ದಾರೆ. ಕೆಲವೇ ನಿಮಿಷಗಳಲ್ಲಿ ಕಚೇರಿಯಲ್ಲಿದ್ದ ನಗ-ನಗದನ್ನು ತಮ್ಮ ಬ್ಯಾಗ್ ನಲ್ಲಿ ತುಂಬಿಸಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಅದರ […]










