ಲಕ್ಷ ನುಂಗಿ ನೀರು ಕುಡಿದ ಆಟದ ಮೈದಾನ: ಅಧಿಕಾರಿಗಳ ಕೈಚಳಕದಿಂದ ಕಡತದಲ್ಲಿ ಮಾತ್ರ ನಿರ್ಮಾಣವಾದ ಹೊನಲು ಬೆಳಕಿನ ಗ್ಯಾಲರಿ…!
ಪಂಚಾಯತ್ ಮಟ್ಟದಲ್ಲಿಯೇ ಇಂತಹ ಭ್ರಷ್ಟಾಚಾರ ನಡೆದರೆ ಇನ್ನು ದೇಶದಲ್ಲಿ ಅದೆಂತಹ ಅಕ್ರಮಗಳು ನಡೆಯಲ್ಲ ಹೇಳಿ. ಇದು ನಡೆಯುತ್ತಿರುವ ಅಕ್ರಮಗಳ ಒಂದು ಸ್ಯಾಂಪಲ್ ಅಷ್ಟೇ. ಸುಳ್ಯ ವಿಧಾನಸಭಾ ಕ್ಷೇತ್ರದ ಸುಳ್ಯ ತಾಲೂಕಿನ ಕಲ್ಮಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಆಟದ ಮೈದಾನದ ಹೆಸರಿನಲ್ಲಿ ನಡೆದಿರುವ ಬ್ರಹ್ಮಾಂಡ ಭ್ರಷ್ಟಾಚಾರದ ಚಿತ್ರಣವಿದು. ಮಾಮೂಲಿನಂತೆ ಸರಕಾರಿ ಕಡತಗಳಲ್ಲಿ ಕಾಮಗಾರಿ ನಡೆದಿದೆ. ಎಂ.ಬಿ ಪುಸ್ತಕದಲ್ಲೂ ದಾಖಲಾಗಿದೆ. ಬಿಲ್ ಪಾವತಿಯೂ ಆಗಿದೆ. ಆದರೆ ಅಲ್ಲಿ ಕಾಮಗಾರಿಯೇ ನಡೆದಿಲ್ಲ. ಸಾಮಾಜಿಕ ಕಾರ್ಯಕರ್ತ ರಾಜಾರಾಂ ಎಂಬವರು […]