ನವವಿವಾಹಿತೆ ಮತ್ತು ಮಾಜಿ ಪ್ರಿಯಕರ ಆತ್ಮಹತ್ಯೆ,
ಬೆಳಗಾವಿ: ಇವರಿಬ್ಬರು ಒಂದಲ್ಲ, ಎರಡಲ್ಲ ಬರೋಬ್ಬರಿ ಐದು ವರ್ಷದಿಂದ ಪರಸ್ಪರ ಇವರಿಬ್ಬರೂ ಪ್ರೀತಿ ಮಾಡುತ್ತಿದ್ದರು. ಒಬ್ಬರನ್ನೊಬ್ಬರು ಬಿಟ್ಟಿ ಬದುಕಲಾರದಷ್ಟು ಹತ್ತಿರವಾಗಿದ್ದರು. ಆದರೂ ಒಂದು ತಿಂಗಳ ಹಿಂದಷ್ಟೇ ಯುವತಿಯನ್ನ ಕುಟುಂಬಸ್ಥರು ಬೇರೊಬ್ಬನೊಂದಿಗೆ ಮದುವೆ ಮಾಡಿಬಿಟ್ಟರು. ಇದೀಗ ಗಂಡನ ಮನೆಯಲ್ಲಿರಬೇಕಿದ್ದ ನವವಿವಾಹಿತೆ, ಪ್ರಿಯಕರನೊಟ್ಟಿಗೆ ದುರಂತ ಅಂತ್ಯ ಕಂಡಿದ್ದಾಳೆ. ಇಂತಹ ದುರಂತ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಸಿಂಧೋಗಿಯಲ್ಲಿ ನಡೆದಿದೆ. ಪಂಚಪ್ಪ ಕಣವಿ(25) ಮತ್ತು ಸಕ್ಕುಬಾಯಿ ಕರಿಗಾರ(23) ಮೃತ ಪ್ರೇಮಿಗಳು.ಆದರೂ ಮತ್ತೊಬ್ಬನೊಂದಿಗೆ ಕುಟುಂಬಸ್ಥರು ಸಕ್ಕುಬಾಯಿಗೆ ಒಂದು ತಿಂಗಳ ಹಿಂದೆ ಮದುವೆ ಮಾಡಿದ್ದರು. […]
ನವವಿವಾಹಿತೆ ಮತ್ತು ಮಾಜಿ ಪ್ರಿಯಕರ ಆತ್ಮಹತ್ಯೆ, Read More »