ಮಂಗಳೂರು: ಪಾಲಿಕೆ ಹೆಸರಿನಲ್ಲಿ ಅಂಗಡಿಗೆ 50,000 ದಂಡ | ಮಾನವ ಹಕ್ಕು ಕಾರ್ಯಕರ್ತನ ಬಂಧನ | ಮತ್ತಿಬ್ಬರು ಪರಾರಿ
ಮಂಗಳೂರು: ಮಹಾನಗರ ಪಾಲಿಕೆಯ ಅಧಿಕಾರಿಗಳೆಂದು ಹೇಳಿಕೊಂಡು ಕೆಲವು ಅಂಗಡಿಗಳಿಗೆ ತೆರಳಿದ ತಂಡವೊಂದು 50 ಸಾವಿರ ಹಣ ಕೇಳಿ ಸಿಕ್ಕಿ ಬಿದ್ದಿದ್ದು, ಓರ್ವ ಹ್ಯೂಮನ್ ರೈಟ್ಸ್ ಕಾರ್ಯಕರ್ತನನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಬಂಧಿತನನ್ನು ದೀಪಕ್ ರಾಜೇಶ್ ಕುವೆಲ್ಲೋ(೪೫) ಎಂದು ಗುರುತಿಸಲಾಗಿದೆ. ಮೂವರು ಯುವಕರ ತಂಡವೊಂದು ಹಂಪನಕಟ್ಟೆಯ ಟೋಕಿಯೋ ಮಾರ್ಕೆಟ್ ಬಿಲ್ಡಿಂಗಿನ ಸಾಗರ್ ಕಲೆಕ್ಷನ್ ಅಂಗಡಿಗೆ ನುಗ್ಗಿ ನಾವು ಮಹಾನಗರ ಪಾಲಿಕೆಯ ಅಧಿಕಾರಿಗಳೆಂದು ಹೇಳಿಕೊಂಡಿದ್ದಾರೆ. ಅಲ್ಲದೆ ಲಾಕ್‌ಡೌನ್ ವೇಳೆ ಬಟ್ಟೆ ಅಂಗಡಿ ತೆರೆದು ವ್ಯಾಪಾರ ನಡೆಸಿರುವುದು ಕಾನೂನಿಗೆ ವಿರುದ್ಧವಾಗಿದ್ದು, […]