Editor

ಕುಕ್ಕೆ ಸುಬ್ರಹ್ಮಣ್ಯ ಕಿರುಷಷ್ಠಿ ಮಹೋತ್ಸವಕ್ಕೆ ಅನ್ಯಧರ್ಮೀಯರಿಗೆ ಆಹ್ವಾನ| ಕ್ಷೇತ್ರ ಸಂರಕ್ಷಣಾ ವೇದಿಕೆಯಿಂದ ವಿರೋಧ

ಸಮಗ್ರ ನ್ಯೂಸ್: ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಇಂದಿನಿಂದ ಕಿರುಷಷ್ಠಿ ಮಹೋತ್ಸವ ನಡೆಯುತ್ತಿದೆ. ಆದರೆ, ಈ ಮಹೋತ್ಸವಕ್ಕೆ ಸ್ಪೀಕರ್‌ ಯುಟಿ ಖಾದರ್‌ ಸೇರಿದಂತೆ ಅನ್ಯಧರ್ಮೀಯ ನಾಯಕರನ್ನು ಆಹ್ವಾನಿಸಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕ್ಷೇತ್ರ ಸಂರಕ್ಷಣಾ ವೇದಿಕೆಯು ಇದನ್ನು ವಿರೋಧಿಸಿ ಇಂದು ಪ್ರತಿಭಟನೆಗೆ ಮುಂದಾಗಿದ್ದು, ಅನ್ಯಧರ್ಮೀಯ ನಾಯಕರಿಗೆ ಕೊಟ್ಟಿರುವ ಆಹ್ವಾನಗಳನ್ನು ತಕ್ಷಣವೇ ವಾಪಸ್ ಪಡೆಯುವಂತೆ ಆಗ್ರಹಿಸಿದೆ. ಸ್ಪೀಕರ್ ಯು.ಟಿ. ಖಾದರ್, ಐವಾನ್ ಡಿಸೋಜ, ಬ್ಯಾ​ರಿ ಅಕಾಡೆಮಿ ಅಧ್ಯಕ್ಷ ಉಮರ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಗಫೂರ್, ಕನಿಷ್ಠ ವೇತನ ಸಲಹಾ […]

ಕುಕ್ಕೆ ಸುಬ್ರಹ್ಮಣ್ಯ ಕಿರುಷಷ್ಠಿ ಮಹೋತ್ಸವಕ್ಕೆ ಅನ್ಯಧರ್ಮೀಯರಿಗೆ ಆಹ್ವಾನ| ಕ್ಷೇತ್ರ ಸಂರಕ್ಷಣಾ ವೇದಿಕೆಯಿಂದ ವಿರೋಧ Read More »

ಡಿ.21ರಿಂದ 24ರವರೆಗೆ ರಾಜ್ಯಾದ್ಯಂತ ಪಲ್ಸ್ ಪೋಲಿಯೊ ಲಸಿಕಾ ಅಭಿಯಾನ

ಸಮಗ್ರ ನ್ಯೂಸ್: ಡಿ.21ರ ಇಂದಿನಿಂದ ನಾಲ್ಕು ದಿನ ರಾಜ್ಯಾದ್ಯಂತ ಪಲ್ಸ್ ಪೋಲಿಯೋ ಕಾರ್ಯಕ್ರಮ ಆರಂಭವಾಗಲಿದ್ದು, ಎಲ್ಲ ಜಿಲ್ಲೆಗಳ 33,258 ಬೂತ್‍ಗಳಲ್ಲಿ ಐದು ವರ್ಷದೊಳಗಿನ ಎಲ್ಲ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಲು ರಾಜ್ಯ ಸರಕಾರ ಕ್ರಮ ವಹಿಸಿದೆ. ಡಿ.21ರಂದು ಪೋಲಿಯೋ ಬೂತ್‍ಗಳಲ್ಲಿ ಹಾಗೂ ನಂತರದ 3 ದಿನಗಳಲ್ಲಿ ಮನೆ-ಮನೆ ಭೇಟಿಯ ಮೂಲಕ 5 ವರ್ಷದೊಳಗಿನ ಎಲ್ಲ ಮಕ್ಕಳಿಗೆ ವಿಶೇಷವಾಗಿ ಗ್ರಾಮೀಣ ಪ್ರದೇಶ, ನಗರ ಪ್ರದೇಶದ ವಲಸಿಗ ಸಮುದಾಯದ ಮತ್ತು ಸ್ಲಂಗಳಲ್ಲಿ ವಾಸಿಸುವ ಮಕ್ಕಳಿಗೆ ಪೋಲಿಯೋ ಲಸಿಕೆ ನೀಡುವ ವ್ಯವಸ್ಥೆ

ಡಿ.21ರಿಂದ 24ರವರೆಗೆ ರಾಜ್ಯಾದ್ಯಂತ ಪಲ್ಸ್ ಪೋಲಿಯೊ ಲಸಿಕಾ ಅಭಿಯಾನ Read More »

ವಿಟ್ಲ: ಕೋಳಿ ಅಂಕಕ್ಕೆ ದಾಳಿ ನಡೆಸಿದ ಪೊಲೀಸರನ್ನು ತಡೆದ ಶಾಸಕ‌ ಅಶೋಕ್ ರೈ ಗರಂ

ಸಮಗ್ರ ನ್ಯೂಸ್: ಸಾಂಪ್ರದಾಯಿಕವಾಗಿ ನಡೆಯುವ ಕೋಳಿ ಅಂಕಕ್ಕೆ ದಾಳಿ ಮಾಡಿದ ಪೊಲೀಸರ ವಿರುದ್ದ ಪುತ್ತೂರು ಶಾಸಕ ಅಶೋಕ್ ರೈ ಗರಂ ಆದ ಘಟನೆ ನಡೆದಿದೆ. ವಿಟ್ಲದ ಕೇಪು ಉಳ್ಳಾಲ್ತಿ ಕ್ಷೇತ್ರದ ಪಕ್ಕದಲ್ಲಿ ಕೋಳಿ ಅಂಕ ನಡೆಯುತ್ತಿತ್ತು, ಈ ವೇಳೆ ಪೊಲೀಸರು ದಾಳಿ ನಡೆಸಿ ಕೋಳಿ ಅಂಕ ನಡೆಯದಂತೆ ತಡೆದಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪುತ್ತೂರು ಶಾಸಕ ಅಶೋಕ್ ರೈ ದಾಳಿ ಮಾಡಿದ ಪೋಲೀಸರ ವಿರುದ್ಧ ಆಕ್ರೋಶ ಹೊರಹಾಕಿದರು. ಈ ಕ್ಷೇತ್ರದ ಸಂಪ್ರದಾಯದಂತೆ ಕೋಳಿ ಅಂಕ ನಡೆಯುತ್ತಿದ್ದು,

ವಿಟ್ಲ: ಕೋಳಿ ಅಂಕಕ್ಕೆ ದಾಳಿ ನಡೆಸಿದ ಪೊಲೀಸರನ್ನು ತಡೆದ ಶಾಸಕ‌ ಅಶೋಕ್ ರೈ ಗರಂ Read More »

ಮಕ್ಕಳನ್ನು ದೇವರಿಗೆ ಹರಕೆಯೊಪ್ಪಿಸುವ ಭಕ್ತರು| ವಿಟ್ಲದಲ್ಲೊಂದು ಅಪರೂಪದ ಸಂಪ್ರದಾಯ

ಸಮಗ್ರ ನ್ಯೂಸ್: ಮಕ್ಕಳನ್ನುಸಾಂಕೇತಿಕವಾಗಿ ದೇವರಿಗೆ ಹರಕೆ ರೂಪದಲ್ಲಿ ಸಮರ್ಪಿಸುವ ವಿಶಿಷ್ಟ ನಂಬಿಕೆ, ಸಂಪ್ರದಾಯವಿರುವ ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸ ಪ್ರಸಿದ್ಧ ಕೇಪು ಕಜಂಬು ಉತ್ಸವ ಶ್ರೀ ಉಳ್ಳಾಲ್ತಿ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಮಂಗಳವಾರ ರಾತ್ರಿ ನಡೆಯಿತು. ವಿಟ್ಲ ಡೊಂಬ ಹೆಗ್ಗಡೆ ಅರಮನೆಯ ಬಂಗಾರು ಅರಸರು ಕ್ಷೇತ್ರಕ್ಕೆ ಬಂದು ಪೂಜೆ ಸಲ್ಲಿಸಿದ ಬಳಿಕ, ದೇವಿಗೆ ಐದು ಸುತ್ತು ಪಲ್ಲಕ್ಕಿ ಬಲಿ ಉತ್ಸವ ನಡೆಯಿತು. ಬಲಿ ಉತ್ಸವದ ಬಳಿಕ ಪ್ರಧಾನ ದೇವಿ ಹಾಗೂ ಪರಿವಾರ ಶಕ್ತಿಗಳಿಗೆ ಪೂಜೆ ನೆರವೇರಿಸಿದ ನಂತರ ಕಜಂಬು

ಮಕ್ಕಳನ್ನು ದೇವರಿಗೆ ಹರಕೆಯೊಪ್ಪಿಸುವ ಭಕ್ತರು| ವಿಟ್ಲದಲ್ಲೊಂದು ಅಪರೂಪದ ಸಂಪ್ರದಾಯ Read More »

ವಿಮೆ ಹಣಕ್ಕಾಗಿ ತಂದೆಯನ್ನೇ ಹಾವು ಕಚ್ಚಿಸಿ ಕೊಂದ ಮಕ್ಕಳು

ಸಮಗ್ರ ನ್ಯೂಸ್: ಮೂರು ಕೋಟಿ ಇನ್ಶೂರೆನ್ಸ್ ಹಣಕ್ಕಾಗಿ ಮಕ್ಕಳು ಹಾವು ಕಚ್ಚಿಸಿ ತಂದೆಯನ್ನೇ ಕೊಲೆಗೈದಿರುವ ಘಟನೆ ತಮಿಳುನಾಡು ಜಿಲ್ಲೆಯ ತಿರುವಳ್ಳೂರು ಜಿಲ್ಲೆಯಲ್ಲಿ ನಡೆದಿದೆ. ಎಸ್ ಐಟಿ ತನಿಖೆ ವೇಳೆ ಕೊಲೆ ರಹಸ್ಯ ಬಯಲಾಗಿದೆ. ತಂದೆಯ ಇನ್ಶೂರೆನ್ಸ್ ಹಣಕ್ಕಾಗಿ ಮಕ್ಕಳಿಬ್ಬರು ತಂದೆಯನ್ನು ಹಾವು ಕಚ್ಚಿಸಿ ಕೊಲೆಗೈದಿದ್ದಾರೆ. ಹಾವು ಕಡಿತದಿಂದ ಸಾವು ಎಂದು ಆರಂಭದಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಇನ್ಶೂರೆನ್ಸ್ ಕಂಪನಿ ಈ ಬಗ್ಗೆ ಅನುಮಾನಗೊಂಡಿದೆ. ಈ ವೇಳೆ ವಿಶೇಷ ತನಿಖಾ ತಂಡ ಪ್ರಕರಣ ಕೈಗೆತ್ತಿಕೊಂಡಿದೆ. ಇ.ಪಿ.ಗಣೇಶನ್ (56) ಇಪರ್ತಿಪೇಟೆ

ವಿಮೆ ಹಣಕ್ಕಾಗಿ ತಂದೆಯನ್ನೇ ಹಾವು ಕಚ್ಚಿಸಿ ಕೊಂದ ಮಕ್ಕಳು Read More »

ಲೀಟರ್ ಹಾಲಿಗೆ ಪ್ರೋತ್ಸಾಹ ಧನ ₹7 ಕ್ಕೆ ಏರಿಕೆ – ಸಿಎಂ

ಸಮಗ್ರ ನ್ಯೂಸ್: ರೈತರಿಗೆ 1 ಲೀಟರ್ ಹಾಲಿಗೆ ಸಹಾಯಧನವನ್ನು 7 ರೂಪಾಯಿಗೆ ಏರಿಕೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಇಂದು ಬೆಳಗಾವಿ ಅಧಿವೇಶನದ ಕೊನೆಯ ದಿನ ಮಾತನಾಡಿದ ಅವರು ರೈತರಿಗೆ ಹಸುಗಳನ್ನು ಸಾಕಿ ಮೇವು ನೀಡಲು ಹೆಚ್ಚು ಖರ್ಚುಗಳು ಆಗುತ್ತವೆ. ಮೇವು ಸಾಕಾಣಿಕೆಗೆ ರೈತರಿಗೆ ನೆರವಾಗಲು, ಮೇವಿನ ಹಿಂಡಿ ದರ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ನಮ್ಮ ಸರ್ಕಾರ ಪ್ರತಿಲೀಟರ್ ಹಾಲಿನ ಮೇಲೆ 5 ರೂಪಾಯಿ ಸಹಾಯಧನವನ್ನು ಹಿಂದೆ ನೀಡಲಾಗುತ್ತಿತ್ತು. ಅದನ್ನೀಗ ಈ ವರ್ಷದ ಅವಧಿಯಲ್ಲೇ 7 ರೂಪಾಯಿಗೆ

ಲೀಟರ್ ಹಾಲಿಗೆ ಪ್ರೋತ್ಸಾಹ ಧನ ₹7 ಕ್ಕೆ ಏರಿಕೆ – ಸಿಎಂ Read More »

15 ವರ್ಷ ಮೀರಿದ ವಾಹನಗಳು ಜಪ್ತಿ – ರಾಮಲಿಂಗಾರೆಡ್ಡಿ

ಸಮಗ್ರ ನ್ಯೂಸ್: ರಾಜ್ಯದಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಏರಿಕೆಯಾಗುತ್ತಲೇ ಇದ್ದರೂ, ಹಳೆಯ ವಾಹನಗಳು ಮಾತ್ರ ಇನ್ನೂ ಸಂಚಾರ ನಿಲ್ಲಿಸಿಲ್ಲ. ಇವುಗಳಿಂದಲೇ ವಾಯುಮಾಲಿನ್ಯ ಹೆಚ್ಚಳವಾಗ್ತಿದೆ ಎಂಬ ಆರೋಪದ ನಡುವೆಯೂ ಕೋಟ್ಯಾಂತರ ವಾಹನಗಳು ರಸ್ತೆಯಲ್ಲಿ ಓಡಾಡುತ್ತಲೇ ಇವೆ. ಇಂತಹ ವಾಹನಗಳ ಮಾಲಿಕರಿಗೆ ರಾಜ್ಯ ಸಾರಿಗೆ ಸಚಿವರು ಶಾಕ್​​ ಕೊಟ್ಟಿದ್ದಾರೆ. 15 ವರ್ಷ ಮೀರಿದ ವಾಹನಗಳ ಜಪ್ತಿಗೆ ಸರ್ಕಾರ ಮುಂದಾಗಲಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ವಿಧಾನ ಪರಿಷತ್​​ನಲ್ಲಿ ತಿಳಿಸಿದ್ದಾರೆ. ವಾಹನವೊಂದನ್ನು 15 ವರ್ಷಗಳವರೆಗೆ ಸುಸ್ಥಿತಿಯಲ್ಲಿ ಇಟ್ಟುಕೊಂಡು ಓಡಿಸಬಹುದು. ಕೇಂದ್ರ ಸರ್ಕಾರದ

15 ವರ್ಷ ಮೀರಿದ ವಾಹನಗಳು ಜಪ್ತಿ – ರಾಮಲಿಂಗಾರೆಡ್ಡಿ Read More »

ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕ ಅಂಶಗಳಿಲ್ಲ – ಸಚಿವ ದಿನೇಶ್ ಗುಂಡೂರಾವ್

ಸಮಗ್ರ ನ್ಯೂಸ್: ಮೊಟ್ಟೆಯಿಂದ ಅನಾರೋಗ್ಯ ಉಂಟಾಗುತ್ತದೆ ಎಂಬುದು ಸುಳ್ಳು. ಮೊಟ್ಟೆ ಪೌಷ್ಟಿಕಾಂಶಯುಕ್ತವಾಗಿದ್ದು, ಇದು ಆರೋಗ್ಯಕ್ಕೆ ಒಳ್ಳೆಯದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂ ರಾವ್ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಮಾಹಿತಿ ಹಂಚಿಕೊಂಡಿರುವ ಸಚಿವ ದಿನೇಶ್ ಗುಂಡೂರಾವ್, ನಾಡಿನ ಸಮಸ್ತ ಜನರೇ, ಕಳೆದ ನಾಲ್ಕೈದು ದಿನಗಳ ಹಿಂದಿದ್ದ ನಿಮ್ಮೆಲ್ಲರ ಆತಂಕವನ್ನು ದೂರ ಮಾಡುವಂತಹ ವರದಿ ಬಂದಿದೆ. ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕ ಅಂಶಗಳಿಲ್ಲ ಎಂಬುದು ದೃಢಪಟ್ಟಿದೆ ಎಂದು ತಿಳಿಸಿದ್ದಾರೆ. ಮೊಟ್ಟೆಯಲ್ಲಿ ಕ್ಯಾನ್ಸರ್‌ ಉಂಟುಮಾಡುವ ಅಂಶಗಳಿವೆ ಎಂಬ ಚರ್ಚೆ-ವದಂತಿ ಬಂದ ಹಿನ್ನೆಲೆಯಲ್ಲಿ

ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕ ಅಂಶಗಳಿಲ್ಲ – ಸಚಿವ ದಿನೇಶ್ ಗುಂಡೂರಾವ್ Read More »

ಹವಾಮಾನ ವರದಿ| ಕರ್ನಾಟಕದಲ್ಲಿ ಮುಂದಿನ 5 ದಿನ ತಾಪಮಾನ ಇಳಿಕೆ

ಸಮಗ್ರ ನ್ಯೂಸ್: ಕರ್ನಾಟಕದ ಉತ್ತರ ಒಳನಾಡಿನಲ್ಲಿ ಈಶಾನ್ಯ ದಿಕ್ಕಿನ ಮಾರುತಗಳು ಮತ್ತು ದಕ್ಷಿಣ ಒಳನಾಡು ಮತ್ತು ಕರಾವಳಿ ಕರ್ನಾಟಕದ ಮೇಲೆ ಪೂರ್ವ ದಿಕ್ಕಿನ ಮಾರುತಗಳು ರಾಜ್ಯದ ಮೇಲೆ ಕೆಳ ಉಷ್ಣವಲಯದ ಮಟ್ಟದಲ್ಲಿ ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ಈ ಹಿನ್ನೆಲೆ ರಾಜ್ಯದಲ್ಲಿ ತಾಪಮಾನ ಮತ್ತಷ್ಟು ಕಡಿಮೆಯಾಗುವ ಸಾಧ್ಯತೆ ಇದೆ. ಡಿಸೆಂಬರ್‌ 22ರವರೆಗೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದೆ. ಈ ವೇಳೆ ಚಳಿಯು ತೀವ್ರಗೊಳ್ಳಲಿದ್ದು, ಈ ಬಗ್ಗೆ ಎಚ್ಚರ ವಹಿಸುವಂತೆ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಬೆಂಗಳೂರು ಭಾಗದಲ್ಲಿ

ಹವಾಮಾನ ವರದಿ| ಕರ್ನಾಟಕದಲ್ಲಿ ಮುಂದಿನ 5 ದಿನ ತಾಪಮಾನ ಇಳಿಕೆ Read More »

ಸಕಲಿ ಚಿನ್ನ ಅಡವಿಟ್ಟು ಸಿಕ್ಕಿಬಿದ್ದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥ್ ಗೌಡ

ಸಮಗ್ರ ನ್ಯೂಸ್: ನಕಲಿ ಚಿನ್ನ ಅಡವಿಟ್ಟು 62 ಕೋಟಿ ರೂ. ಸಾಲ ಕೊಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಬುಧವಾರ ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಮಂಜುನಾಥ್ ಗೌಡ ಅವರನ್ನು ಅರೆಸ್ಟ್​ ಮಾಡಿದ್ದಾರೆ. ಡಿಸಿಸಿ ಬ್ಯಾಂಕ್ ಹಗರಣ ಸಂಬಂಧ ಇಡಿ ಅಧಿಕಾರಿಗಳು ನಿನ್ನೆ ಶಿವಮೊಗ್ಗದಲ್ಲಿ ಮಂಜುನಾಥ್ ಗೌಡ ಮನೆ, ಕಚೇರಿ ಸೇರಿದಂತೆ 8 ಕಡೆ ದಾಳಿ ನಡೆಸಿದ್ದರು. ಅಲ್ಲದೇ ಮಂಜುನಾಥ್ ಅವರನ್ನು ವಶಕ್ಕೆ ಪಡೆದುಕೊಂಡು ಬೆಂಗಳೂರಿನ ಚಾಮರಾಜಪೇಟೆಯ ಅಪೆಕ್ಸ್ ಬ್ಯಾಂಕ್ ಅತಿಥಿಗೃಹದಲ್ಲಿ ವಿಚಾರಣೆ ನಡೆಸಿದ್ದರು.

ಸಕಲಿ ಚಿನ್ನ ಅಡವಿಟ್ಟು ಸಿಕ್ಕಿಬಿದ್ದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥ್ ಗೌಡ Read More »