Editor

ವಿಟ್ಲ: ತೋಟಕ್ಕೆ ಬಂದಿದ್ದ ಬಾಲಕಿಯನ್ನು ಗುಡ್ಡಕ್ಕೆ ಕರೆದ ಮಾಲೀಕ| ಫೋಕ್ಸೋ ಪ್ರಕರಣ ದಾಖಲು

ಸಮಗ್ರ ನ್ಯೂಸ್: ‘ನೀನು ಚನ್ನಾಗಿದ್ದೀಯಾ. ಗುಡ್ಡೆಗೆ ಬರುತ್ತೀಯ?’ ಎಂದು ಅಪ್ರಾಪ್ತೆ ವಯಸ್ಸಿನ ಬಾಲಕಿ ಜೊತೆ ಅನುಚಿತ ವರ್ತನೆ ಮಾಡಿದವನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ. 15 ವರ್ಷದ ಬಾಲಕಿ ಜೊತೆ ಅನುಚಿತ ವರ್ತಿಸಿದ ಮಹೇಶ್ ಭಟ್ ಎನ್ನುವಾತನ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ವಿಟ್ಲ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಹಾಗೂ ಜಾತಿನಿಂದನೆ ದೂರು ದಾಖಲಾಗಿದೆ. ಜನವರಿ 12ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಿಕಿಗೆ ಬಂದಿದೆ. ಜನವರಿ 12ರಂದು ತಂದೆ ಕೆಲಸ ಮಾಡುವ ತೋಟಕ್ಕೆ […]

ವಿಟ್ಲ: ತೋಟಕ್ಕೆ ಬಂದಿದ್ದ ಬಾಲಕಿಯನ್ನು ಗುಡ್ಡಕ್ಕೆ ಕರೆದ ಮಾಲೀಕ| ಫೋಕ್ಸೋ ಪ್ರಕರಣ ದಾಖಲು Read More »

ಮಾ.29ರಂದು ಸೂರ್ಯಗ್ರಹಣ| ಎಲ್ಲೆಲ್ಲಿ ಗೋಚರಿಸುತ್ತದೆ? ಇಲ್ಲಿದೆ‌ ಮಾಹಿತಿ…

ಸಮಗ್ರ ನ್ಯೂಸ್: ಈ ವರ್ಷದ ಮೊದಲ ಗ್ರಹಣ ಹೋಳಿ ಹಬ್ಬದ ದಿನದಂದು, ಅಂದರೆ ಮಾರ್ಚ್ 14 ರಂದು ಸಂಭವಿಸಿತು. ಇದು ಚಂದ್ರ ಗ್ರಹಣ. ಈಗ, ವರ್ಷದ ಎರಡನೇ ಗ್ರಹಣ ಮಾರ್ಚ್‌ನಲ್ಲಿ ಸಂಭವಿಸಲಿದೆ. ಈ ಗ್ರಹಣವು 2025 ರ ಮೊದಲ ಸೂರ್ಯಗ್ರಹಣವಾಗಲಿದೆ. ಇದು ಮಾರ್ಚ್ 29 ರಂದು, ಚೈತ್ರ ಮಾಸದ ಆರಂಭದ ಒಂದು ದಿನ ಮೊದಲು ಸಂಭವಿಸುತ್ತದೆ. ಈ ಸೂರ್ಯಗ್ರಹಣದ ಸಮಯದಲ್ಲಿ, ಭೂಮಿಯ ಕೆಲವು ಪ್ರದೇಶಗಳು ಹಗಲು ಬೆಳಕಿನಿಂದ ಆವೃತವಾಗಿರುತ್ತವೆ ಮತ್ತು ಕೆಲವು ಪ್ರದೇಶಗಳು ಕತ್ತಲೆಯಲ್ಲಿ ಆವರಿಸಲ್ಪಡುತ್ತವೆ. ಜನರು

ಮಾ.29ರಂದು ಸೂರ್ಯಗ್ರಹಣ| ಎಲ್ಲೆಲ್ಲಿ ಗೋಚರಿಸುತ್ತದೆ? ಇಲ್ಲಿದೆ‌ ಮಾಹಿತಿ… Read More »

‘ಸತ್ಯವಂತರಿಗಿದು ಕಾಲವಲ್ಲ’| ಉಚ್ಛಾಟನೆ ಬೆನ್ನಲ್ಲೇ ಯತ್ನಾಳ್ ಆಕ್ರೋಶ ಭರಿತ ಟ್ವೀಟ್

ಸಮಗ್ರ ನ್ಯೂಸ್: ಬಿಜೆಪಿಯಿಂದ ಆರು ವರ್ಷಗಳ ಕಾಲ ಉಚ್ಛಾಟನೆಯಾಗಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಮಾರ್ಮಿಕ ಟ್ವೀಟ್‌ ಮಾಡಿ ಬಿಜೆಪಿ ನಾಯಕರನ್ನು ಕುಟುಕಿದ್ದಾರೆ. ಕುಟುಂಬ ರಾಜಕಾರಣ, ಭ್ರಷ್ಟಾಚಾರ, ಪಕ್ಷದಲ್ಲಿ ಬದಲಾವಣೆ, ಏಕವ್ಯಕ್ತಿ ನಾಯಕತ್ವವನ್ನು ಬದಲಾವಣೆ ಮಾಡಿ ಎಂದು ಹೇಳಿದ್ದಕ್ಕೆ ಪಕ್ಷ ನನ್ನನ್ನು ಉಚ್ಛಾಟನೆ ಮಾಡಿದೆ. ಈ ಕುರಿತು ಅವರು ಸಾಮಾಜಿಕ ಮಾಧ್ಯಮದಲ್ಲಿ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ‘ಸತ್ಯವಂತರಿಗಿದು ಕಾಲವಲ್ಲ, ದುಷ್ಟಜನರಿಗೆ ಸುಭಿಕ್ಷಕಾಲ’. ಉಪಕಾರ ಮಾಡಿದರೆ ಅಪಕರಿಸುವ ಕಾಲ. ಸಕಲವು ತಿಳಿದವಗೆ ದುರ್ಭಿಕ್ಷ ಕಾಲ. ಧರ್ಮ ಮಾಡುವಗೆ

‘ಸತ್ಯವಂತರಿಗಿದು ಕಾಲವಲ್ಲ’| ಉಚ್ಛಾಟನೆ ಬೆನ್ನಲ್ಲೇ ಯತ್ನಾಳ್ ಆಕ್ರೋಶ ಭರಿತ ಟ್ವೀಟ್ Read More »

ಯತ್ನಾಳ್ ಗೆ ಬಿಗ್ ಶಾಕ್ ನೀಡಿದ ಬಿಜೆಪಿ| 6 ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟನೆ

ಸಮಗ್ರ ನ್ಯೂಸ್: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿಯಿಂದ 6 ವರ್ಷಗಳ ಕಾಲ ಉಚ್ಛಾಟನೆ ಮಾಡಲಾಗಿದೆ. ನಿನ್ನೆಯಷ್ಟೇ ರಾಜ್ಯದ ಐವರು ಬಿಜೆಪಿ ನಾಯಕರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿ ಶಾಕ್ ಕೊಟ್ಟಿದ್ದ ಬಿಜೆಪಿ ಹೈಕಮಾಂಡ್ ಇಂದು ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಚಾಟಿಸಿ ಆದೇಶ ಹೊರಡಿಸಿದೆ. ಪದೇ ಪದೇ ರಾಜ್ಯದ ಬಿಜೆಪಿ ನಾಯಕರ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದ ಕಾರಣಕ್ಕೆ ಈ ಬೃಹತ್ ನಿರ್ಧಾರವನ್ನು ಬಿಜೆಪಿ ಹೈಕಮಾಂಡ್ ಕೈಗೊಂಡಿದೆ.

ಯತ್ನಾಳ್ ಗೆ ಬಿಗ್ ಶಾಕ್ ನೀಡಿದ ಬಿಜೆಪಿ| 6 ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟನೆ Read More »

‘ಸ್ತನ ಹಿಡಿಯುವುದು ಅತ್ಯಾಚಾರ ಯತ್ನವಲ್ಲ’| ಅಲಹಾಬಾದ್ ಹೈಕೋರ್ಟ್ ನ‌ ವಿವಾದಿತ ‌ಆದೇಶಕ್ಕೆ ಸುಪ್ರೀಂ ತಡೆ

ಸಮಗ್ರ ನ್ಯೂಸ್: ಸಂತ್ರಸ್ತ ಬಾಲಕಿಯ ಸ್ತನಗಳನ್ನು ಹಿಡಿದುಕೊಳ್ಳುವುದು, ಆಕೆಯ ಪೈಜಾಮಾದ ದಾರವನ್ನು ಹಿಡಿದು ಎಳೆಯುವುದಷ್ಟೇ ಅತ್ಯಾಚಾರ ಆಗುವುದಿಲ್ಲ ಎಂಬ ಅಲಹಾಬಾದ್‌ ಹೈಕೋರ್ಟ್‌ನ ವಿವಾದಿತ ಆದೇಶಕ್ಕೆ ಸುಪ್ರೀಂ ಕೋರ್ಟ್‌ ಇಂದು (ಬುಧವಾರ) ತಡೆ ನೀಡಿದೆ. ನ್ಯಾಯಮೂರ್ತಿಗಳಾದ ಬಿ.ಆರ್ ಗವಾಯಿ ಮತ್ತು ಆಗಸ್ಟೀನ್ ಜಾರ್ಜ್‌ ಮಸೀಹ್ ನೇತೃತ್ವದ ಪೀಠವು ಈ ಕುರಿತು ಪ್ರತಿಕ್ರಿಯಿಸಿದ್ದು, ‘ಇದು ಗಂಭೀರ ವಿಷಯವಾಗಿದೆ. ಇಂತಹ ಆದೇಶಗಳು ಸಂವೇದನಾರಹಿತ, ಅಮಾನವೀಯ ವಿಧಾನವನ್ನು ಪ್ರತಿನಿಧಿಸುತ್ತವೆ’ ಎಂದು ಹೇಳಿದೆ. ಈ ಪ್ರಕರಣ ಕುರಿತಂತೆ ಆದೇಶ ಹೊರಡಿಸಿದ ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶರ

‘ಸ್ತನ ಹಿಡಿಯುವುದು ಅತ್ಯಾಚಾರ ಯತ್ನವಲ್ಲ’| ಅಲಹಾಬಾದ್ ಹೈಕೋರ್ಟ್ ನ‌ ವಿವಾದಿತ ‌ಆದೇಶಕ್ಕೆ ಸುಪ್ರೀಂ ತಡೆ Read More »

ದೇಶದ 32ಲಕ್ಷ ಬಡ ಮುಸ್ಲಿಮರಿಗೆ ಬಿಜೆಪಿಯಿಂದ ‘ರಂಜಾನ್ ಕಿಟ್’| ‘ಸೌಗತ್ ಎ ಮೋದಿ’ ಯೋಜನೆಯಡಿ ಅಭಿಯಾನ

ಸಮಗ್ರ ನ್ಯೂಸ್: 32 ಲಕ್ಷ ಬಡ ಮುಸ್ಲಿಂ ಕುಟುಂಬಗಳಿಗೆ ಬಿಜೆಪಿ ದೇಶಾದ್ಯಂತ ರಂಜಾನ್ ಕಿಟ್ ನೀಡಲು ಆರಂಭಿಸಿದೆ. ಈ ಯೋಜನೆಗೆ ಸೌಗತ್ ಎ ಮೋದಿ ಎಂದು ಅಭಿಯಾನಕ್ಕೆ ಹೆಸರಿಡಲಾಗಿದೆ. ಈದ್ ಸಂದರ್ಭದಲ್ಲಿ ಬಿಜೆಪಿ ಐತಿಹಾಸಿಕ ಹೆಜ್ಜೆ ಇಟ್ಟಿದೆ. ಹೌದು, ಈದ್ ಸಂದರ್ಭದಲ್ಲಿ ಬಿಜೆಪಿ ದೇಶಾದ್ಯಂತ ಬಡ ಮುಸ್ಲಿಮರಿಗೆ ದೊಡ್ಡ ಉಡುಗೊರೆಯನ್ನು ನೀಡಲಿದೆ. ಈದ್ ಹಬ್ಬದ ಸಂದರ್ಭದಲ್ಲಿ ದೇಶಾದ್ಯಂತ 32 ಲಕ್ಷ ಬಡ ಮುಸ್ಲಿಮರಿಗೆ ‘ಸೌಗತ್-ಎ-ಮೋದಿ’ ಕಿಟ್ ನೀಡುವುದಾಗಿ ಬಿಜೆಪಿ ಅಂದರೆ ಭಾರತೀಯ ಜನತಾ ಪಕ್ಷ ಘೋಷಿಸಿದೆ. ಈ

ದೇಶದ 32ಲಕ್ಷ ಬಡ ಮುಸ್ಲಿಮರಿಗೆ ಬಿಜೆಪಿಯಿಂದ ‘ರಂಜಾನ್ ಕಿಟ್’| ‘ಸೌಗತ್ ಎ ಮೋದಿ’ ಯೋಜನೆಯಡಿ ಅಭಿಯಾನ Read More »

ರೀಲ್ಸ್ ಗಾಗಿ ಮಾರಕಾಸ್ತ್ರ ಬಳಕೆ ಪ್ರಕರಣ| ವಿನಯ್ ಗೌಡ, ರಜತ್ ಕಿಶನ್ ಗೆ ಜೈಲು

ಸಮಗ್ರ ನ್ಯೂಸ್: ಬಿಗ್ ಬಾಸ್ ಮಾಜಿ ಸ್ಪರ್ಧಿಗಳು ವಿನಯ್ ಗೌಡ ಹಾಗೂ ರಜತ್ ಕಿಶನ್ ಇಬ್ಬರು ರೀಲ್ಸ್ ಮಾಡಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆಲವು ದಿನಗಳ ಹಿಂದೆ ಲಾಂಗ್ ಹಿಡಿದು ರೀಲ್ಸ್ ಮಾಡಿದ್ದರು. ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿದ್ದಂತೆ ಬೆಂಗಳೂರಿನ ಬಸವೇಶ್ವರನಗರ ಪೊಲೀಸರು ಬಂಧಿಸಿ, ವಿಚಾರಣೆ ನಡೆಸಿದ್ದರು.ಬಳಿಕ ಇಬ್ಬರನ್ನು ರಿಲೀಸ್ ಮಾಡಿದ್ದರು. ಆದ್ರೀಗ ಮತ್ತೆ ಬಂಧಿಸಿ, ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ. ವಿನಯ್ ಗೌಡ ಹಾಗೂ ರಜತ್ ಕಿಶನ್ ಇಬ್ಬರನ್ನೂ ಪೊಲೀಸರು ಮತ್ತೆ ಬಂಧಿಸಿದ್ದರು. ವಿಚಾರಣೆ

ರೀಲ್ಸ್ ಗಾಗಿ ಮಾರಕಾಸ್ತ್ರ ಬಳಕೆ ಪ್ರಕರಣ| ವಿನಯ್ ಗೌಡ, ರಜತ್ ಕಿಶನ್ ಗೆ ಜೈಲು Read More »

ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಆಲಿಕಲ್ಲು ಸಹಿತ ಉತ್ತಮ ಮಳೆ| ಮಾ.26ರಂದು ಮತ್ತೆ ಮಳೆಯಾಗುವ ಸಾಧ್ಯತೆ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಸುಳ್ಯ, ಬಂಟ್ವಾಳ, ಬೆಳ್ತಂಗಡಿ ತಾಲೂಕಿನ ವಿವಿಧೆಡೆ ಮಂಗಳವಾರ ಸಂಜೆ ಮಳೆಯಾಗಿದೆ. ಕಲ್ಮಡ್ಕದಲ್ಲಿ ಆಲಿಕಲ್ಲು ಮಳೆಯಾಗಿದೆ. ಪುತ್ತೂರಿನಲ್ಲೂ ಉತ್ತಮ ಮಳೆಯಾಗಿದೆ. ಸಂಜೆ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆ ಸುರಿಯಿತು. ಮಂಗಳೂರಿನಲ್ಲಿ ಗರಿಷ್ಠ 33.1 ಡಿಗ್ರಿ ಸೆಲ್ಸಿಯಸ್‌ ಮತ್ತು ಕನಿಷ್ಠ 24.6 ಡಿ.ಸೆ. ದಾಖಲಾಗಿದೆ. ಬುಧವಾರವೂ ಕರಾವಳಿಗೆ ಎಲ್ಲೋ ಅಲರ್ಟ್‌ ನೀಡಲಾಗಿದ್ದು, ಕೆಲವು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೆಳ್ತಂಗಡಿ ತಾಲೂಕಿನ

ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಆಲಿಕಲ್ಲು ಸಹಿತ ಉತ್ತಮ ಮಳೆ| ಮಾ.26ರಂದು ಮತ್ತೆ ಮಳೆಯಾಗುವ ಸಾಧ್ಯತೆ Read More »

ವಾರ್ಷಿಕ ಹಣಕಾಸು ವರ್ಷಾಂತ್ಯದ ಹಿನ್ನಲೆ| ಮಾ. 31ರ ಬ್ಯಾಂಕ್ ರಜಾದಿನ ರದ್ದುಗೊಳಿಸಿದ RBI

ಸಮಗ್ರ ನ್ಯೂಸ್: ದೇಶದ ಹೆಚ್ಚಿನ ಭಾಗಗಳಲ್ಲಿ ಸಾರ್ವಜನಿಕ ರಜಾದಿನವಾಗಿದ್ದರೂ, ಸರ್ಕಾರಿ ವಹಿವಾಟುಗಳನ್ನು ನಿರ್ವಹಿಸುವ ಎಲ್ಲಾ ಏಜೆನ್ಸಿ ಬ್ಯಾಂಕುಗಳು ಮಾರ್ಚ್ 31, 2025 ರಂದು ತೆರೆದಿರಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ಘೋಷಿಸಿದೆ. ಈ ನಿರ್ಧಾರವು 2024-25ರ ಹಣಕಾಸು ವರ್ಷಕ್ಕೆ ಸಂಬಂಧಿಸಿದ ಎಲ್ಲಾ ಹಣಕಾಸು ವಹಿವಾಟುಗಳು ಅದೇ ಹಣಕಾಸು ಅವಧಿಯಲ್ಲಿ ಪೂರ್ಣಗೊಳ್ಳುವುದನ್ನು ಖಚಿತಪಡಿಸುತ್ತದೆ. ಆರ್‌ಬಿಐ ಪ್ರಕಾರ, ಸರ್ಕಾರಕ್ಕೆ ಸಂಬಂಧಿಸಿದ ಪಾವತಿಗಳು ಮತ್ತು ರಶೀದಿಗಳನ್ನು ಸುಗಮಗೊಳಿಸಲು ಭಾರತ ಸರ್ಕಾರ ಮಾರ್ಚ್ 31 ರಂದು ಬ್ಯಾಂಕುಗಳು ತೆರೆದಿರಬೇಕೆಂದು ವಿನಂತಿಸಿದೆ. ಇದರಲ್ಲಿ

ವಾರ್ಷಿಕ ಹಣಕಾಸು ವರ್ಷಾಂತ್ಯದ ಹಿನ್ನಲೆ| ಮಾ. 31ರ ಬ್ಯಾಂಕ್ ರಜಾದಿನ ರದ್ದುಗೊಳಿಸಿದ RBI Read More »

ಧರ್ಮಸ್ಥಳ ಕ್ಷೇತ್ರದ ವಿರುದ್ಧ ಅವಹೇಳನಕಾರಿ ಹೇಳಿಕೆ, ಪ್ರಚಾರ ವಿರುದ್ಧ ‘ಜಾನ್ ಡೋ’ ಆದೇಶ| ನ್ಯಾಯಾಲಯದಿಂದ ಮತ್ತೆ ನಿರ್ಬಂಧ ಜಾರಿ

ಸಮಗ್ರ ನ್ಯೂಸ್: ಧರ್ಮಸ್ಥಳ ಕ್ಷೇತ್ರ ಹಾಗೂ ಕ್ಷೇತ್ರದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ವಿರುದ್ಧ ಅವಹೇಳನ-ಅಪಪ್ರಚಾರ ಮಾಡುವವರ ವಿರುದ್ಧ ಬೆಂಗಳೂರು ನಗರ ಸಿವಿಲ್‌ ನ್ಯಾಯಾಲಯವು ಜಾನ್ ಡೋ (ಅಶೋಕ ಕುಮಾರ್) ಆದೇಶ ನೀಡಿದೆ. ಒಎಸ್ 2145/2025 ಪ್ರಕರಣದಲ್ಲಿ ನ್ಯಾಯಾಲಯ ಆದೇಶ ನೀಡಿದೆ. ಈ ಆದೇಶದನ್ವಯ ಯಾರೇ ಆಗಲಿ ಧರ್ಮಸ್ಥಳ ಕ್ಷೇತ್ರ, ಕ್ಷೇತ್ರದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ, ಅವರ ಕುಟುಂಬದ ಸದಸ್ಯರು ಮತ್ತು ಧರ್ಮಸ್ಥಳ ಕ್ಷೇತ್ರಕ್ಕೆ ಸಂಬಂಧಿತ ಸಂಸ್ಥೆಗಳ ವಿರುದ್ಧ ಅವಹೇಳನಾಕಾರಿ ಮತ್ತು ಅಪಪ್ರಚಾರ ಮಾಡುವ ಮಾಹಿತಿಯನ್ನು ಪ್ರಕಟಿಸಲು ಅಥವಾ

ಧರ್ಮಸ್ಥಳ ಕ್ಷೇತ್ರದ ವಿರುದ್ಧ ಅವಹೇಳನಕಾರಿ ಹೇಳಿಕೆ, ಪ್ರಚಾರ ವಿರುದ್ಧ ‘ಜಾನ್ ಡೋ’ ಆದೇಶ| ನ್ಯಾಯಾಲಯದಿಂದ ಮತ್ತೆ ನಿರ್ಬಂಧ ಜಾರಿ Read More »

ನಮ್ಮ ವಾಟ್ಸಪ್‌ ಗ್ರೂಪ್‌ಗೆ ಸೇರಿ