Editor

ಜೆಸಿಬಿ‌ ಹರಿದು ಎರಡು ವರ್ಷದ ಮಗು ಸಾವು

ಸಮಗ್ರ ನ್ಯೂಸ್: ಜೆಸಿಬಿ ಹರಿದು ಆಟವಾಡುತ್ತಿದ್ದ 2 ವರ್ಷದ ಮಗು ದುರ್ಮರಣ ಹೊಂದಿರುವ ಘಟನೆ ಬೆಂಗಳೂರಿನ ಕಾಡುಗೋಡಿ ಬಳಿಯ ಸಿಟಿ ಲೇಔಟ್​ನಲ್ಲಿ ನಡೆದಿದೆ. ಥನವ್ ರೆಡ್ಡಿ ಮೃತ ಮಗು. ಜೆಸಿಬಿ ಚಾಲಕನ ಅತಿವೇಗ, ಅಜಾಗರೂಕತೆಯಿಂದ ಘಟನೆ ಸಂಭವಿಸಿದೆ. ಮನೆ ಮುಂದೆ ಥನವ್ ರೆಡ್ಡಿ ಆಟವಾಡುತ್ತಿದ್ದ. ಈ ವೇಳೆ ಆತನ ಮೇಲೆ ಜೆಸಿಬಿ ಹರಿದಿದೆ. ಘಟನೆಯಲ್ಲಿ ಗಾಯಗೊಂಡಿದ್ದ ಮಗುವನ್ನು ವೈದೇಹಿ ಆಸ್ಪತ್ರೆಗೆ ಪೋಷಕರು ಕರೆದುಕೊಂಡು ಹೋಗಿದ್ದು, ಆದರೆ ಮಾರ್ಗಮಧ್ಯೆಯೇ ಮಗು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ವೈದೇಹಿ ಆಸ್ಪತ್ರೆಯಲ್ಲಿ ಥನವ್ […]

ಜೆಸಿಬಿ‌ ಹರಿದು ಎರಡು ವರ್ಷದ ಮಗು ಸಾವು Read More »

ಮಹಾಕುಂಭಮೇಳ ಅವಧಿ ವಿಸ್ತರಣೆಯಾಗುತ್ತಾ? ಇಲ್ಲಿದೆ ಫುಲ್ ಡೀಟೈಲ್ಸ್

ಸಮಗ್ರ ನ್ಯೂಸ್: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದ ಅವಧಿಯನ್ನು ವಿಸ್ತರಿಸುವುದಿಲ್ಲ ಎಂದು ಜಿಲ್ಲಾಧಿಕಾರಿ ರವೀಂದ್ರ ಮಾಂದಡ್ ಮಂಗಳವಾರ ಸ್ಪಷ್ಟಪಡಿಸಿದ್ದಾರೆ. ಮಹಾ ಕುಂಭಮೇಳಕ್ಕೆ ಭಾರಿ ಪ್ರಮಾಣದಲ್ಲಿ ಜನರು ಬರುತ್ತಿರುವುದರಿಂದ ಕುಂಭಮೇಳದ ಅವಧಿಯನ್ನು ವಿಸ್ತರಿಸಲಾಗುವುದು ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವದಂತಿ ಹರಿದಾಡುತ್ತಿದೆ. ಈ ಹಿನ್ನೆಲೆಯಲ್ಲಿ ಅವರು ಸ್ಪಷ್ಟನೆ ನೀಡಿದ್ದಾರೆ. ಮಹಾಕುಂಭಮೇಳದ ಅವಧಿಯಲ್ಲಿ ಯಾವುದೇ ಬದಲಾವಣೆಗಳಿಲ್ಲ. ಫೆಬ್ರವರಿ 26ಕ್ಕೆ ಮಹಾ ಕುಂಭಮೇಳ ಮುಕ್ತಾಯವಾಗಲಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಈ ಮೂಲಕ ಮಹಾ ಕುಂಭಮೇಳದ ಅವಧಿ ವಿಸ್ತರಣೆ

ಮಹಾಕುಂಭಮೇಳ ಅವಧಿ ವಿಸ್ತರಣೆಯಾಗುತ್ತಾ? ಇಲ್ಲಿದೆ ಫುಲ್ ಡೀಟೈಲ್ಸ್ Read More »

‘ಅತ್ತೆ ಸಾಯಿಸಲು ಮಾತ್ರೆ ಕೊಡಿ’| ವೈದ್ಯರಿಗೆ ಮೆಸೇಜ್ ಮಾಡಿದ ಸೊಸೆ!!

ಸಮಗ್ರ ನ್ಯೂಸ್: ಸೊಸೆಯೊಬ್ಬಳು ಅತ್ತೆಯನ್ನು ಕೊಲ್ಲಲು ವೈದ್ಯರ ಬಳಿಯೇ ಮಾತ್ರೆ ಕೇಳಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಅತ್ತೆಯನ್ನು ಸಾಯಿಸಬೇಕು ಎಂದು ಬೆಂಗಳೂರಿನ ಡಾಕ್ಟರ್ ಸುನೀಲ್ ಕುಮಾರ್ ಎಂಬುವವರ ಬಳಿ ಸಹಾಯ ಕೇಳಿದ್ದಾಳೆ. ನನ್ನ ಅತ್ತೆ ದಿನ ನನಗೆ ಹಿಂಸೆ ನೀಡುತ್ತಿದ್ದಾರೆ, ಅವರಿಗೆ ತುಂಬಾ ವಯಸ್ಸಾಗಿದೆ ಹೀಗಾಗಿ ಏನಾದ್ರೂ ಹೇಳುತ್ತೀರಾ ಅವರನ್ನು ಹೇಗೆ ಸಾಯಿಸೋದು ಅಂತ ಎಂದು ವೈದ್ಯರಿಗೆ ಮೆಸೇಜ್ ಮಾಡಿದ್ದಾರೆ. ಜೊತೆಗೆ ಒಂದೆರಡು ಮಾತ್ರೆ ತಗೊಂಡ್ರೆ ಸಾಯುತ್ತಾರೆ ಅಲ್ವಾ ಅದು ಹೇಳಿ ಎಂದು ಕೇಳಿಕೊಂಡಿದ್ದಾಳೆ. ಇದಕ್ಕೆ ವೈದ್ಯರು

‘ಅತ್ತೆ ಸಾಯಿಸಲು ಮಾತ್ರೆ ಕೊಡಿ’| ವೈದ್ಯರಿಗೆ ಮೆಸೇಜ್ ಮಾಡಿದ ಸೊಸೆ!! Read More »

ಅನ್ನಭಾಗ್ಯ ಯೋಜನೆಯಲ್ಲಿ ‌ಇನ್ಮುಂದೆ ಹಣದ ಬದಲು ಅಕ್ಕಿ ಸಿಗುತ್ತೆ!!

ಸಮಗ್ರ ನ್ಯೂಸ್: ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯಡಿ ಕೆಲ ಅಂತ್ಯೋದಯ, ಬಿಪಿಎಲ್ ಕಾರ್ಡ್ ದಾರರಿಗೆ ಹೆಚ್ಚುವರಿ 5 ಕೆಜಿ ಅಕ್ಕಿಯ ಹಣ ಬ್ಯಾಂಕ್ ಖಾತೆಗಳಿಗೆ ಕಳೆದ 3 ತಿಂಗಳಿಂದ ಜಮೆಯಾಗಿಲ್ಲ. ಹೀಗಾಗಿ ಫಲಾನುಭವಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಕೆಲವು ತಿಂಗಳು ತಾಂತ್ರಿಕತೆಯ ಸಮಸ್ಯೆ ನೆಪವೊಡ್ಡಿ ವಿಳಂಬ ಆಗಿದೆ. ಇದೀಗ ಹಣದ ಬದಲಿಗೆ ಅಕ್ಕಿ ಕೊಡಲು ಚಿಂತನೆ ನಡೆದಿದೆ. ಆದರೆ ಅಕ್ಕಿ, ಹಣ ಎರಡು ಕೂಡ ಫಲಾನುಭವಿಗಳಿಗೆ ಸಿಗದೇ ತೊಂದರೆಯಾಗಿದೆ. ಇದನ್ನು ಮನಗಂಡು ಹೆಚ್ಚುವರಿ ಐದು ಕೆಜಿ ಅಕ್ಕಿಯನ್ನೇ ನೀಡಲು

ಅನ್ನಭಾಗ್ಯ ಯೋಜನೆಯಲ್ಲಿ ‌ಇನ್ಮುಂದೆ ಹಣದ ಬದಲು ಅಕ್ಕಿ ಸಿಗುತ್ತೆ!! Read More »

ಪ್ರಯಾಗ್ ರಾಜ್: ತ್ರಿವೇಣಿ ಸಂಗಮದ ನೀರು ಸ್ನಾನಕ್ಕೆ ಯೋಗ್ಯವಲ್ಲ| ಅಚ್ಚರಿಯ ವರದಿ ನೀಡಿದ ಎನ್ ಜಿಟಿ

ಸಮಗ್ರ ನ್ಯೂಸ್: ಪ್ರಯಾಗರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಕೋಟ್ಯಂತರ ಭಕ್ತರು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದು, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ನೀರು ಕಲುಷಿತವಾಗಿದೆ ಎಂದು ವರದಿ ಮಾಡಿತ್ತು. ಇದೀಗ ಇದರ ಬೆನ್ನಲ್ಲೇ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಅಚ್ಚರಿಯ ವರದಿಯನ್ನು ಮಾಡಿದೆ. ಫೆಬ್ರವರಿ 3 ರಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ಮಾಡಿದಂತೆ ಮಹಾ ಕುಂಭಮೇಳದ ಸಮಯದಲ್ಲಿ ಮಲ ಕೋಲಿಫಾರ್ಮ್ ಬ್ಯಾಕ್ಟೀರಿಯಾದಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ ಎಂದು ಹೇಳಿತ್ತು. ಆದರೆ ಇದೀಗ ಗಂಗಾ

ಪ್ರಯಾಗ್ ರಾಜ್: ತ್ರಿವೇಣಿ ಸಂಗಮದ ನೀರು ಸ್ನಾನಕ್ಕೆ ಯೋಗ್ಯವಲ್ಲ| ಅಚ್ಚರಿಯ ವರದಿ ನೀಡಿದ ಎನ್ ಜಿಟಿ Read More »

ಬೆಳ್ತಂಗಡಿ: ಪ್ರಾರ್ಥನೆ ವೇಳೆ ಹೆಜ್ಜೇನು ದಾಳಿ| ಮೂವರು ವಿದ್ಯಾರ್ಥಿಗಳು ಗಂಭೀರ

ಸಮಗ್ರ ನ್ಯೂಸ್: ಶಾಲೆಯಲ್ಲಿ ಪ್ರಾರ್ಥನೆ ಮಾಡುತ್ತಿದ್ದ ಮಕ್ಕಳ ಮೇಲೆ ಹೆಜ್ಜೇನು ದಾಳಿ ನಡೆಸಿದ್ದು, 15 ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಕ್ಕಿಂಜೆ ಗ್ರಾಮದಲ್ಲಿ ನಡೆದಿದೆ. ವಿದ್ಯಾರ್ಥಿಗಳು ಪ್ರಾರ್ಥನೆ ಮುಗಿಸಿ ಶಾಲೆಯ ಒಳಗೆ ತೆರಳುತ್ತಿದ್ದರು. ಈ ವೇಳೆ ಏಕಾಏಕಿ ಹೆಜ್ಜೇನುಗಳು ದಾಳಿ ನಡೆಸಿವೆ. 15 ವಿದ್ಯಾರ್ಥಿಗಳು ಗಾಯಗೊಂಡಿದ್ದು, ಅವರಲ್ಲಿ ಮೂವರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ವಿದ್ಯಾರ್ಥಿಗಳಾದ ಅವಸಿನಾ (6), ಅಫೀಜ್‌ (12), ಶಾಬಿತ್‌ (11), ರಫಾ (7), ನಿಧಾ (13), ಶಾಬೆಲ್‌ (13),

ಬೆಳ್ತಂಗಡಿ: ಪ್ರಾರ್ಥನೆ ವೇಳೆ ಹೆಜ್ಜೇನು ದಾಳಿ| ಮೂವರು ವಿದ್ಯಾರ್ಥಿಗಳು ಗಂಭೀರ Read More »

ಚಿಕ್ಕಿಯಲ್ಲಿ ಹಾನಿಕಾರಕ ಅಂಶ ಪತ್ತೆ ಹಿನ್ನೆಲೆ| ಸರ್ಕಾರಿ ಶಾಲೆಗಳಲ್ಲಿ ಇನ್ಮುಂದೆ ಚಿಕ್ಕಿ ವಿತರಣೆ ಇಲ್ಲ

ಸಮಗ್ರ ನ್ಯೂಸ್: ಚಿಕ್ಕಿಯಲ್ಲಿ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುವ ಅಂಶಗಳು ಪತ್ತೆಯಾಗಿದ್ದರ ಹಿನ್ನೆಲೆಯಲ್ಲಿ ಇದೀಗ ಶಿಕ್ಷಣ ಇಲಾಖೆಯ ಇನ್ನು ಮುಂದೆ ಸರಕಾರಿ ಶಾಲೆಗಳಲ್ಲಿ ಚಿಕ್ಕಿ ವಿತರಣೆ ಇಲ್ಲ ಎಂದು ತಿಳಿಸಿದೆ. ಕಲ್ಬುರ್ಗಿಯಲ್ಲಿ ಮಕ್ಕಳಿಗೆ ಕೊಟ್ಟ ಚಿಕ್ಕಿ ತಿನ್ನಲು ಯೋಗ್ಯವಾಗಿರಲಿಲ್ಲ. ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುವ ಅಂಶ ಇದೀಗ ಚಿಕ್ಕಿಯಲ್ಲಿ ಪತ್ತೆಯಾಗಿದೆ. ಸಕ್ಕರೆ ಅಂಶ ಹೆಚ್ಚಿನ ಮಟ್ಟದಲ್ಲಿದೆ ಎನ್ನುವ ಮಾಹಿತಿ ತಿಳಿದು ಬಂದಿದೆ. ಈ ಸಂಬಂಧ ಇಲಾಖೆ ಹೆಚ್ಚುವರಿ ಆಯುಕ್ತರು ಪತ್ರ ಬರೆದಿದ್ದರು. ಹಾಗಾಗಿ ಮಕ್ಕಳಿಗೆ

ಚಿಕ್ಕಿಯಲ್ಲಿ ಹಾನಿಕಾರಕ ಅಂಶ ಪತ್ತೆ ಹಿನ್ನೆಲೆ| ಸರ್ಕಾರಿ ಶಾಲೆಗಳಲ್ಲಿ ಇನ್ಮುಂದೆ ಚಿಕ್ಕಿ ವಿತರಣೆ ಇಲ್ಲ Read More »

ಸ್ಕೀಂ‌ ಹೆಸರಲ್ಲಿ ವಂಚನೆ; ಐವರು ಅರೆಸ್ಟ್

ಸಮಗ್ರ ನ್ಯೂಸ್: ವಂಚನೆ ಮಾಡುವ ಉದ್ದೇಶದಿಂದ ಗ್ರಾಹಕರಿಂದ ಹಣವನ್ನು ಸಂಗ್ರಹಿಸುತ್ತಿದ್ದ ಆರೋಪದಡಿ ಎಸ್‌.ವಿ. ಸ್ಮಾರ್ಟ್‌ ವಿಷನ್‌ ಎಂಬ ಸ್ಕೀಂನ ಮಾಲಕ ಸಹಿತ ಐವರನ್ನು ಮಡಿಕೇರಿ ನಗರ ಪೊಲೀಸರು ಬಂಧಿಸಿದ್ದಾರೆ. ಸ್ಕೀಂ ಮಾಲಕ ಮಂಗಳೂರು ಸುರತ್ಕಲ್‌ ಮೂಲದ ಮಹಮದ್‌ ಅಶ್ರಫ್(37), ಮಡಿಕೇರಿಯ ಮಲ್ಲಿಕಾರ್ಜುನ ನಗರದ ನಿವಾಸಿ ಎಂ.ವೈ.ಸುಲೈಮಾನ್‌(37), ತ್ಯಾಗರಾಜ ಕಾಲನಿಯ ಅಬ್ದುಲ್‌ ಗಫ‌ೂರ್‌(34), ಮೊಹಮದ್‌ ಅಕ್ರಮ್‌ (34) ಹಾಗೂ ಕುಂಬಳಕೇರಿ ನಿವಾಸಿ ಎಚ್‌.ಎನ್‌.ಕಿಶೋರ್‌(41) ಬಂಧಿತರು. ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಎಸ್‌ಪಿ ಕೆ.ರಾಮರಾಜನ್‌, ನಗರ ಪೊಲೀಸ್‌ ಠಾಣೆ ವ್ಯಾಪ್ತಿಯ ರಾಣಿಪೇಟೆಯಲ್ಲಿ

ಸ್ಕೀಂ‌ ಹೆಸರಲ್ಲಿ ವಂಚನೆ; ಐವರು ಅರೆಸ್ಟ್ Read More »

ಕೊಟ್ಟಿಗೆಹಾರ: ಸಹೋದರನ ಅತ್ತೆಯನ್ನು ಕೊಲೆ ಮಾಡಿ ಶಶಿಧರ್ ಆತ್ಮಹತ್ಯೆ

ಸಮಗ್ರ ನ್ಯೂಸ್: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಭಾರತೀಬೈಲ್ ಗ್ರಾಮದಲ್ಲಿ ಅತ್ತೆ ಯಮುನಾ ಕುಡಿದ ಮತ್ತಿನಲ್ಲಿದ್ದ ಅಳಿಯನಿಗೆ ಬುದ್ದಿ ಹೇಳಿದ ಕಾರಣಕ್ಕೆ ಅವನ ಸಹೋದರ ಶಶಿಧರ್ ಸುತ್ತಿಗೆಯಿಂದ ತಲೆಗೆ ಹೊಡೆದು ಕೊಲೆ ಮಾಡಿದ ಘಟನೆ ನಡೆದಿದೆ. ಕೊಲೆ ಮಾಡಿದ ಬಳಿಕ ಶಶಿಧರ್ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಬಗ್ಗೆ ಬಣಕಲ್ ಪೊಲೀಸರು ನಿನ್ನೆ ಮೊದಲು ತನಿಖೆ ಆರಂಭಿಸಿದ್ದರು. ಶಶಿಧರ್ ನನ್ನು ಪತ್ತೆ ಹಚ್ಚಲು ಪೊಲೀಸರು ತೀವ್ರ ಶೋಧ ಕಾರ್ಯ ನಡೆಸುತ್ತಿದ್ದರು. ಫೆ.18 ರಂದು ಭಾರತೀಬೈಲು ಕಾಫಿತೋಟದಲ್ಲಿ ಶಶಿಧರ್ ನೇಣು

ಕೊಟ್ಟಿಗೆಹಾರ: ಸಹೋದರನ ಅತ್ತೆಯನ್ನು ಕೊಲೆ ಮಾಡಿ ಶಶಿಧರ್ ಆತ್ಮಹತ್ಯೆ Read More »

ಮುಖ್ಯ ಚುನಾವಣಾ ಆಯುಕ್ತರಾಗಿ ಜ್ಞಾನೇಶ್ ಕುಮಾರ್ ನೇಮಕ

ಸಮಗ್ರ ನ್ಯೂಸ್: ಹಿರಿಯ ಅಧಿಕಾರಿ ಜ್ಞಾನೇಶ್ ಕುಮಾರ್ ಅವರನ್ನು ಮುಖ್ಯ ಚುನಾವಣಾ ಆಯುಕ್ತರನ್ನಾಗಿ ನೇಮಿಸಲಾಗಿದೆ. ನಿವೃತ್ತಿ ಹೊಂದುತ್ತಿರುವ ರಾಜೀವ್ ಕುಮಾರ್ ಅವರ ಸ್ಥಾನದಲ್ಲಿ ಹಿರಿಯ ಅಧಿಕಾರಿ ಜ್ಞಾನೇಶ್ ಕುಮಾರ್ ಅವರನ್ನು ಮುಖ್ಯ ಚುನಾವಣಾ ಆಯುಕ್ತರನ್ನಾಗಿ ನೇಮಿಸಲಾಗಿದೆ. 1988 ರ ಬ್ಯಾಚ್ ಕೇರಳ ಕೇಡರ್ ಐಎಎಸ್ ಅಧಿಕಾರಿ ಕಳೆದ ವರ್ಷ ಮಾರ್ಚ್ ನಿಂದ ಚುನಾವಣಾ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಚುನಾವಣಾ ಆಯುಕ್ತರ ನೇಮಕಾತಿ ಕುರಿತ ಹೊಸ ಕಾನೂನಿನಡಿಯಲ್ಲಿ ನೇಮಕಗೊಂಡ ಮೊದಲ ಸಿಇಸಿ ಕುಮಾರ್ ಆಗಿದ್ದಾರೆ, ಇದು ಚುನಾವಣಾ ಆಯೋಗದ

ಮುಖ್ಯ ಚುನಾವಣಾ ಆಯುಕ್ತರಾಗಿ ಜ್ಞಾನೇಶ್ ಕುಮಾರ್ ನೇಮಕ Read More »