ಧಾರವಾಡ: ಒಂದು ನಾಯಿಯಿಂದ ಮತ್ತೊಂದು ನಾಯಿಗೆ ರಕ್ತದಾನ ಮಾಡಿದ ಪ್ರಸಂಗ ಧಾರವಾಡದಲ್ಲಿ ನಡೆದಿದೆ.
ವಿಜಯಪುರ ಮೂಲದ 7 ತಿಂಗಳ ರಾಟ್ ವಿಲ್ಲರ್ ತಳಿ ನಾಯಿಗೆ ಹೊಟ್ಟೆ ನೋವಿನ ಸಮಸ್ಯೆ ಇದ್ದ ಕಾರಣ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು. ಈ ವೇಳೆ ಆ ನಾಯಿದ ಹೊಟ್ಟೆಯಲ್ಲಿ ರಕ್ತ ಸ್ರಾವವಾಗಿದ್ದರಿಂದ ಬದುಕುಳಿಯುವ ಸಾಧ್ಯತೆ ಕಡಿಮೆ ಇತ್ತು. ಹೀಗಾಗಿ ರಾಟ್ ವಿಲ್ಲರ್ ಮಾಲಿಕ ಧಾರವಾಡ ಕೃಷಿ ವಿವಿಯಲ್ಲಿರುವ ಪಶು ಆಸ್ಪತ್ರೆಗೆ ತಂದಿದ್ದರು. ಕೃಷಿ ವಿವಿಯ ಪಶು ಆಸ್ಪತ್ರೆ ವೈದ್ಯ ಅನಿಲ್ ಪಾಟೀಲ್ ರಾಟ್ ವಿಲ್ಲರ್ ಗೆ ಒಂದು ಯುನಿಟ್ ರಕ್ತ ಹಾಕಿದರೆ ಉಳಿಯುತ್ತೆ ಎಂದಿದ್ದಕ್ಕೆ ಧಾರವಾಡದ ಸೋಮಶೇಖರ್ ಅವರ ಜರ್ಮನ್ ಶೆಫರ್ಡ್ ನಾಯಿಯಿಂದ ರಕ್ತದಾನ ಮಾಡಿಸಿದ್ದಾರೆ.
ಸೋಮಶೇಖರ್ ಕೂಡ ಮೊದಲು ರಾಟ್ ವಿಲ್ಲರ್ ಗಾಗಿ ಹಲವು ಕಡೆ ರಕ್ತ ಹುಡುಕಾಟ ನಡೆಸಿದ್ದರು. ಆದರೆ ಎರಡೂ ನಾಯಿಗಳ ರಕ್ತ ಮಾದರಿ ಹೊಲಿಕೆಯಾಗದ ಕಾರಣ, ಕೊನೆಗೆ ತನ್ನ ಬಳಿ ಇದ್ದ ನಾಯಿಯ ರಕ್ತದ ಮಾದರಿ ತಪಾಸಣೆ ಮಾಡಿಸಿದ್ದಾರೆ. ಈ ಎರಡೂ ನಾಯಿಗಳ ರಕ್ತದ ಮಾದರಿ ಒಂದೇ ಇದ್ದ ಕಾರಣ ರಕ್ತ ದಾನ ಮಾಡಿಸಿದರು. ಸದ್ಯ ನಾಯಿಗೆ ರಕ್ತದಾನ ಮಾಡುವ ಮೂಲಕ ಜೀವ ಉಳಿಸಿದ್ದಾರೆ.