ನವದೆಹಲಿ : ಕೊರೋನಾ ಕಾರಣದಿಂದ ಜನಸಾಮಾನ್ಯರು ತತ್ತರಿಸಿರುವ ಹೊತ್ತಲ್ಲೇ ಶ್ರೀಮಂತರ ಸಂಖ್ಯೆಯಲ್ಲೂ ಭಾರೀ ಏರಿಕೆ ದಾಖಲಾಗಿದೆ. ಅದಾನಿ ಸಮೂಹದ ಮುಖ್ಯಸ್ಥ ಗೌತಮ್ ಅದಾನಿ ಅವರ ಕುಟುಂಬದ ಸಂಪತ್ತು ಕಳೆದ ಒಂದೇ ವರ್ಷದಲ್ಲಿ 3.65 ಲಕ್ಷ ಕೋಟಿ ರೂ.ನಷ್ಟು ಹೆಚ್ಚಾಗಿದೆ ಎಂದು ಹುರೂನ್ ಇಂಡಿಯಾ ಸಂಸ್ಥೆ ಬಿಡುಗಡೆ ಮಾಡಿರುವ ಭಾರತದ ಅಗರ್ಭ ಶೀಮಂತರ ವರದಿ ಹೇಳಿದೆ.
ಹುರೂನ್ ಇಂಡಿಯಾ ಸಂಸ್ಥೆ ಬಿಡುಗಡೆ ಮಾಡಿರುವ ವರದಿ ಪ್ರಕಾರ, 7.18 ಲಕ್ಷ ಕೋಟಿ ರೂ. ಆಸ್ತಿಯೊಂದಿಗೆ ಮುಕೇಶ್ ಅಂಬಾನಿ ಕುಟುಂಬ ದೇಶದ ನಂ.1 ಶ್ರೀಮಂತ ಎಂಬ ಹಿರಿಮೆ ಉಳಿಸಿಕೊಂಡಿದೆ.
ಕಳೆದ ವರ್ಷಕ್ಕಿಂತ ಕುಟುಂಬದ ಆಸ್ತಿ ಶೇ. 9ರಷ್ಟು ಮಾತ್ರ ಹೆಚ್ಚಾಗಿದೆ. 2 ನೇ ಸ್ಥಾನಕ್ಕೆ ಏರಿರುವ ಗೌತಮ್ ಅದಾನಿ ಕುಟುಂಬದ ಆಸ್ತಿ ಕಳೆದೊಂದು ವರ್ಷದಲ್ಲಿ ಭಾರೀ ಏರಿಕೆಯಾಗಿದ್ದು, ಕಳೆದ ವರ್ಷ1.40 ಲಕ್ಷ ಕೋಟಿ ರೂ. ನಷ್ಟಿದ ಆಸ್ತಿ ಈ ವರ್ಷ 5.09 ಕೋಟಿ ರೂ.ಗೆ ಏರಿಕದೆ ಅಂದರೆ ಕುಟುಂಬದ ನಿತ್ಯದ ಆದಾಯ 1000 ಕೋಟಿ ರೂ. ಮೀರಿದೆ.
ಇನ್ನು ಕಳೆದ ವರ್ಷದಲ್ಲಿ 179 ಭಾರತೀಯರು ಅಗರ್ಭ ಶ್ರೀಮಂತರಾಗಿದ್ದು, ಈ ಮೂಲಕ ಮೊದಲ ಬಾರಿಗೆ 1000 ಕೋಟಿ ರೂ. ಗಿಂತ ಹೆಚ್ಚು ಸಂಪುತ್ತು ಹೊಂದಿರುವ ಭಾರತೀಯರ ಸಂಖ್ಯೆ 1000 ದ ಗಡಿ ದಾಟಿದೆ ಎಂದು ವರದಿ ತಿಳಿಸಿದೆ.