ಚಿಕ್ಕಮಗಳೂರು….ಬೆಟ್ಟಗುಡ್ಡ ಪರ್ವತಗಳ ತವರೂರು. ಕಾಫಿನಾಡಿನಲ್ಲಿ ಕಾಫೀಯ ಘಮದ ಜೊತೆಗೆ ಪ್ರಕೃತಿಯ ಸೌಂದರ್ಯ ಸವಿಯೋದೇ ಅದ್ಬುತ ಅನುಭವ. ಜಿಲ್ಲೆಯ ಪ್ರತೀ ಭಾಗದಲ್ಲೂ ಒಂದಲ್ಲೊಂದು ಅನುಭವ ನೀಡುವ ರಮಣೀಯ ತಾಣಗಳಿವೆ. ಅವುಗಳಲ್ಲಿ ಒಂದು ಎತ್ತಿನ ಭುಜ.
ದೂರದಿಂದ ನೋಡಿದಾಗ ಕೊಬ್ಬಿದ ಎತ್ತು ಮಲಗಿದಂತಿದ್ದು, ಅದರ ಭುಜ ಮಾತ್ರ ಕಾಣುವಂತಿರುವ ಈ ಬೆಟ್ಟ ಇದನ್ನು ಚಾರಣಿಗರ ಬೆಟ್ಟ ಅಂತಾನೆ ಫೇಮಸ್ಸ್ . ಮೂಡಿಗೆರೆಯಿಂದ 28 ಕೀ.ಮಿ. ದೂರದಲ್ಲಿರುವ ಶಿಶಿಲ ಬೆಟ್ಟ ಚಾರಣಿಗರ ಹಾಟ್ ಸ್ಪಾಟ್. ಕಾಫಿನಾಡಲ್ಲಿ ಚಾರಣ ಮಾಡೋವಂತ ಪ್ರವಾಸಿಗರಿಗೆ ಇಲ್ಲೊಂದು ಅವರ ಮನಸ್ಸಿಗೆ ಇಡಿಸುವ ಮುದ ನೀಡುವ ಎಂದು ಮರೆದಂತಹ ಸ್ವಾಟ್ ಇದೆ. ಈ ಬೆಟ್ಟದ
ಸೌಂದರ್ಯ ಬಣ್ಣಿಸೋಕೆ ಪದಪುಂಜವೇ ಸಾಲದು. ಜಿಲ್ಲೆಯ ಮೂಡಿಗೆರೆ ತಾಲೂಕಿನ ಸಾಲುಬೆಟ್ಟಗಳ ಸಾಲಿನಲ್ಲಿರುವ ‘ಎತ್ತಿನ ಭುಜ’ ಬೆಟ್ಟವನ್ನು ಹತ್ತುವುದೇ ಮಜಾ. ಕಡಿದಾದ ಕಾಲುದಾರಿಯ ನಡುವೆ, ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುತ್ತಾ ಈ ಬೆಟ್ಟ ಹತ್ತಬೇಕು. ಬೈರಾಪುರದಿಂದ 4 ಕಿ.ಮೀ ದೂರದಲ್ಲಿರೋ ಈ ಬೆಟ್ಟವನ್ನು ನಡೆದೇ ಏರಬೇಕು. ಕಡಿದಾದ ರಸ್ತೆಯಲ್ಲಿ ಕಲ್ಲು-ಮಣ್ಣು ಎನ್ನದೇ ಗುಡ್ಡ ಹತ್ತಬೇಕು. ಸಿಕ್ಕಾಪಟ್ಟೆ ಕಷ್ಟಪಟ್ಟು ಬೆಟ್ಟ ಏರಿದರೆ ಅಪರೂಪದ ನಿಸರ್ಗ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು.
9 ಗುಡ್ಡಗಳ ಮಧ್ಯೆ ಇರೋ ಎತ್ತಿನಭುಜದ ಹತ್ತಿ ನಿಂತರೆ ಯಾವುದೋ ದ್ವೀಪದಲ್ಲಿ ನಿಂತಂತ ಅನುಭವ ನಿಮ್ಮದಾಗುತ್ತೆ. ಆಕಾಶಕ್ಕೆ ಮೂರೇ ಗೇಣು ಅನ್ನೋ ಅನುಭವ ಇಲ್ಲಿ ಬರುವ ಪ್ರಕೃತಿ ಪ್ರೇಮಿಗಳಿಗೆ ಆಗುತ್ತದೆ. ಎತ್ತಿನಭುಜದ ಮೇಲೆ ಫೋಟೋ ಕ್ಲಿಕ್ಕಿಸಿ, ಸೆಲ್ಫಿ ತಗೊಂಡರೆ ಇಲ್ಲಿ ಭೇಟಿ ಕೊಟ್ಟು ಎಂಜಾಯ್ ಮಾಡಿದ ನೆನಪು ಸದಾ ಹಸಿರಾಗಿರುತ್ತದೆ. ಬಿಸಿಲಿದ್ದಾಗ ಬೆಟ್ಟದ ವಿಹಂಗಮ ನೋಟ, ಪ್ರಕೃತಿ ತುಂಬೆಲ್ಲಾ ಹರಡೋ ಮಂಜಿನ ಮಧ್ಯೆ ನಿಂತಾಗ ಪ್ರವಾಸಿಗರಿಗೆ ಆಕಾಶದಲ್ಲೇ ತೇಲಿದ ಅನುಭವ ಆಗುತ್ತದೆ.
ಎತ್ತಿನ ಭುಜ ಏರಲು ಚಳಿಗಾಲ ಮತ್ತು ಬೇಸಿಗೆಯ ಮೊದಲ ತಿಂಗಳುಗಳು ಸೂಕ್ತ. ಮಳೆಗಾಲದಲ್ಲಿ ನಡೆವ ದಾರಿಯಲ್ಲಿ ಜಿಗಣೆಗಳು ರಕ್ತಹೀರುವ ಕಾರಣ ಅಷ್ಟು ಒಳ್ಳೆಯ ಸಮಯವಲ್ಲ. ಚಳಿಗಾಲದಲ್ಲಿ ಮಂಜುಮುಸುಕಿದ ಹಾದಿಯೊಳಗೆ ಸಾಗುತ್ತಾ, ಗೆಳೆಯರೊಂದಿಗೆ ಸಾಗುತ್ತಿದ್ದರೆ ಆ ಅನುಭವ ಹೊಸ ಅನುಭೂತಿ ಕೊಡುವುದರಲ್ಲಿ ಸಂದೇಹವಿಲ್ಲ.
ಪ್ರಕೃತಿಯ ಸೌಂದರ್ಯ ಆಸ್ವಾದಿಸುವುದಕ್ಕೆ ಮಾತ್ರ ಹಕ್ಕುಳ್ಳವರಾದ್ದರಿಂದ ಬೆಟ್ಟಕ್ಕೆ ಹೋಗುವಾಗ ಯಾವುದೇ ಪ್ಲಾಸ್ಟಿಕ್, ಟಿಶ್ಯೂ್ಸ್, ಮತ್ತಿತ್ತರ ಅನುಪಯುಕ್ತ ವಸ್ತುಗಳನ್ನು ಕೊಂಡೊಯ್ಯಬೇಡಿ. ತಿನ್ನಲು ಬೇಕಾದಷ್ಟು ಆಹಾರ ಪೊಟ್ಟಣಗಳನ್ನು ಮಾತ್ರ ತೆಗೆದುಕೊಂಡು ಹೋಗಿ, ಅಲ್ಲಲ್ಲಿ ಬಿಸಾಡದೇ ವಾಪಾಸ್ ತಗೊಂಡು ಬನ್ನಿ.
ಬೆಳ್ತಂಗಡಿಯಿಂದ ಉಜಿರೆ ಮಾರ್ಗವಾಗಿ ಶಿಶಿಲ ಬೈರಾಪುರಕ್ಕೆ ಹೋಗಿ ಬೆಟ್ಟ ಏರಬಹುದು. ಚಿಕ್ಕಮಗಳೂರು ಮಾರ್ಗವಾಗಿ ಬರುವವರು ಮೂಡಿಗೆರೆ ಮೂಲಕ ಬೈರಾಪುರ ತಲುಪಿ ಅಲ್ಲಿಂದ ಚಾರಣ ಮಾಡಬಹುದು.
ನೀವೂ ಟೈಮ್ ಸಿಕ್ಕರೆ ಒಂದ್ ಸಾರಿ ಎತ್ತಿನ ಭುಜ ಹತ್ತಿ ಬನ್ನಿ.
ಬರಹ: ರೂರಲ್ ಟೂರಿಸ್ಟರ್ ಟೀಂ.