ನವದೆಹಲಿ: ಜಗತ್ತಿನ ಪ್ರಭಾವಿ ನಾಯಕರ ಪಟ್ಟಿಯನ್ನು ಟೈಮ್ಸ್ ನಿಯತಕಾಲಿಕೆ ಪ್ರಕಟಿಸಿದ್ದು, ಭಾರತದ ಮೂವರು ಪ್ರಮುಖ ಸ್ಖಾನದಲ್ಲಿ ಗುರುತಿಸಿಕೊಂಡಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದ ಮುಖ್ಯಸ್ಥ ಅದರ್ ಪೂನಾವಾಲಾ ಹೆಸರು ಪಟ್ಟಿಯಲ್ಲಿ ಕಾಣಿಸಿಕೊಂಡಿದೆ.
ಸಿಎನ್‌ಎನ್ ಪತ್ರಕರ್ತ ಫರೀದ್ ಜಕಾರಿಯಾ ಬರೆದಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವ್ಯಕ್ತಿಚಿತ್ರದ ಪ್ರಕಾರ, ಸ್ವಾತಂತ್ರ್ಯದ ನಂತರ ಭಾರತದ ಮೂವರು ಪ್ರಮುಖ ನಾಯಕರು ಈ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದಾರೆ. ಮೊದಲಿಗೆ ಜವಾಹರಲಾಲ್ ನೆಹರು, ಎರಡು ಇಂದಿರಾ ಗಾಂಧಿ ಮತ್ತು ಮೂರನೇಯದಾಗಿ ನರೇಂದ್ರ ಮೋದಿ ಆಗಿದ್ದಾರೆ. ಈ ಮೂವರು ನಾಯಕರು ರಾಜಕೀಯ ವಲಯದಲ್ಲಿ ಅತ್ಯಂತ ಪ್ರಭಾವಶಾಲಿ ಎನಿಸಿದ್ದಾರೆ, ಎಂದು ಬರೆದುಕೊಂಡಿದ್ದಾರೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವ್ಯಕ್ತಿಚಿತ್ರದಲ್ಲಿ “ಭಾರತೀಯ ರಾಜಕೀಯದಲ್ಲಿ ಉಗ್ರತೆಯ ಮುಖ” ಎಂದು ಹೇಳಲಾಗುತ್ತಿದೆ. 66 ವರ್ಷದ ಮಮತಾ ಬ್ಯಾನರ್ಜಿಯವರಿಂದ ತೃಣಮೂಲ ಕಾಂಗ್ರೆಸ್ ಪಕ್ಷ ಬೆಳವಣಿಗೆಯಾಗಿದೆ ಎಂಬ ಅರ್ಥದಲ್ಲಿ ಉಲ್ಲೇಖಿಸಲಾಗಿದೆ.