ನವದೆಹಲಿ : ಕೊರೊನಾವೈರಸ್ ಕಾಯಿಲೆಯ ವಿರುದ್ಧ ಭಾರತದ ಕೋವಿಡ್ ವ್ಯಾಕ್ಸಿನೇಷನ್ ಸೋಮವಾರ 75 ಕೋಟಿ-ಗಡಿ ದಾಟಿದ್ದು , ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್ಒ) ಆಗ್ನೇಯ ಏಷ್ಯಾ ಪ್ರಾದೇಶಿಕ ನಿರ್ದೇಶಕಿ ಡಾ.ಪೂನಂ ಖೇತ್ರಪಾಲ್ ಸಿಂಗ್ ಅವರು ‘ಅಭೂತಪೂರ್ವ ವೇಗದಲ್ಲಿ’ ಸಾಧನೆ ಮಾಡಿದ ಭಾರತವನ್ನು ಅಭಿನಂದಿಸಿದ್ದಾರೆ.
‘ಮೊದಲ 100 ಮಿಲಿಯನ್ (10 ಕೋಟಿ) ಡೋಸ್ ಗಳನ್ನು ನಿರ್ವಹಿಸಲು 85 ದಿನಗಳನ್ನು ತೆಗೆದುಕೊಂಡರೆ, ಭಾರತ ಕೇವಲ 13 ದಿನಗಳಲ್ಲಿ 650 ಮಿಲಿಯನ್ (65 ಕೋಟಿ) ನಿಂದ 750 ಮಿಲಿಯನ್ (75 ಕೋಟಿ) ಡೋಸ್ ಗಳನ್ನು ತಲುಪಿದೆ’ ಎಂದು ಅವರು WHO ಅಧಿಕೃತ ಟ್ವೀಟ್ ನಲ್ಲಿ ಉಲ್ಲೇಖಿಸಿದ್ದಾರೆ. ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಕೂಡ ಟ್ವೀಟ್ ಮಾಡಿ ‘ ಪ್ರಧಾನಿ ನರೇಂದ್ರ ಮೋದಿಯವರ ‘ಸಬ್ಕಾ ಸಾಥ್, ಸಬ್ಕಾ ಪ್ರಯಾಸ್’ ಮಂತ್ರದ ಸಹಾಯದಿಂದ, ‘ವಿಶ್ವದ ಅತಿದೊಡ್ಡ ಲಸಿಕೆ ಅಭಿಯಾನ ನಿರಂತರವಾಗಿ ಹೊಸ ಆಯಾಮಗಳನ್ನು ಸೃಷ್ಟಿಸುತ್ತಿದೆ’ ಎಂದು ಅವರು ಬರೆದಿದ್ದಾರೆ.