Ad Widget .

ದ್ವಾದಶ ರಾಶಿಗಳ ವಾರಭವಿಷ್ಯ

ಈ ಜಗತ್ತಿನಲ್ಲಿ ನಡೆಯುವ ಪ್ರತಿಯೊಂದು ಚಲನೆಗೂ ನವ ಗ್ರಹಗಳು, ರಾಶಿಗಳು ಹಾಗೂ ನಕ್ಷತ್ರಗಳ ಚಲನೆಗಳು ಕಾರಣವಾಗಿರುತ್ತವೆ ಎಂಬುದು ಭಾರತೀಯ ಸಂಸ್ಕೃತಿಯ ನಂಬಿಕೆ. ನಮ್ಮ ಪೂರ್ವಜರು ಈ ಕುರಿತಂತೆ ಪಂಚಾಂಗ, ರಾಶಿ ಭವಿಷ್ಯ ಹಾಗೂ ಇನ್ನಿತರ ಪೂರ್ವ ಆಲೋಚನೆ ಮಾಡಿ ಹಲವು ಗ್ರಂಥಗಳನ್ನು ಬರೆದಿದ್ದಾರೆ. ರಾಶಿಗಳ ಚಲನೆಯನ್ನು ಆಧರಿಸಿ ನಮ್ಮ ಜೀವನದ ಆಗುಹೋಗುಗಳನ್ನು ಅಂದಾಜಿಸಲಾಗುತ್ತದೆ. ರಾಶಿಗಳ ಭವಿಷ್ಯ ತಿಳಿದು ನಮ್ಮ ‌ಕಾರ್ಯಗಳು ನಡೆಯುತ್ತವೆ. ಈ ವಾರ ಯಾವ ರಾಶಿಗಳಿಗೆ ಶುಭ, ದೋಷ ಪರಿಹಾರಗಳೇನು ಎಂಬುದನ್ನು ಇಲ್ಲಿ ನೀಡಲಾಗಿದೆ. ಅವುಗಳನ್ನು ತಿಳಿದು ಯಶಸ್ವಿ ದಿನಗಳನ್ನು ಕಳೆಯಿರಿ. ಶುಭವಾಗಲಿ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಮೇಷ

Ad Widget . Ad Widget . Ad Widget .

ಈ ವಾರವೇ ಮೇಷ ರಾಶಿಯವರಿಗೆ ಶುಭವನ್ನು ತರುವುದು. ರಾಶ್ಯಾಧಿಪತಿ ಸುಬ್ರಹ್ಮಣ್ಯ ದೇವರನ್ನು ಅನಂತವಾಗಿ ಪೂಜಿಸಿ ಬೇಕಾದ್ದನ್ನು ಪಡೆಯಬಹುದು. ಯಾವುದೇ ವಾದ-ವಿವಾದಕ್ಕೆ ಇಳಿಯಬೇಡಿ.

ನಿಮ್ಮ ಚಿತ್ತವನ್ನು ಸಮತೋಲನದಲ್ಲಿ ಇರಿಸಿಕೊಂಡು ವ್ಯವಹರಿಸಿದರೆ ಶುಭವಾಗುತ್ತದೆ. ನಿರ್ಣಯ ತೆಗೆದುಕೊಳ್ಳುವ ಮುನ್ನ ಸಮಾಲೋಚಿಸಿ, ಆತುರ ಬೇಡ.

ವೃಷಭ

ಬೃಹಸ್ಪತಿ ಗ್ರಹಕ್ಕೆ ದೈವಸಾಮರ್ಥ್ಯವಿದ್ದರೆ, ಶುಕ್ರಾಚಾರ್ಯ ರಿಗೆ ಮಂತ್ರಶಕ್ತಿಯ ಬಲ. ದೇವರು ವರ ಕೊಟ್ಟರೂ ಅದನ್ನೇ ಇಲ್ಲದಂತೆ ಮಾಡುತ್ತಿದ್ದರು. ಮತ್ತೆ ಭಕ್ತರು ಅವರ ಮಂತ್ರ ಸಾಮರ್ಥ್ಯ ಕುಗ್ಗಿಸಲು ಇಂದ್ರನನ್ನೇ ಪ್ರಾರ್ಥಿಸಬೇಕಾಯಿತು. ಶುಕ್ರಾಚಾರ್ಯರು ದೈತ್ಯ ಗುರು. ಆದ್ದರಿಂದ ಕೆಟ್ಟವರಲ್ಲೂ ಒಳ್ಳೆಯದಿರುತ್ತದೆ. ಅತಿಯಾದ ವಿಶ್ವಾಸ ಯಾರಲ್ಲೂ ಬೇಡ. ಪರಮಾತ್ಮನೇ ದಾರಿತೋರಿಸುತ್ತಾನೆ.

ಮಿಥುನ

ಈ ರಾಶಿಗೆ 9ರ ಗುರುವು ಅಷ್ಟಮಕ್ಕೆ ಬಂದು ಶನಿ ಅಷ್ಟಮದಲ್ಲಿ ಇರುವುದಿರಂದ, ನಿಮ್ಮ ಕಾಲವು ಸುಖಕ್ಕಾಗಿ ಪ್ರಾರ್ಥಿಸಬಾರದು. ದೇವರ ಅನುಗ್ರಹ ಪಡೆದು ಶತ್ರುಗಳನ್ನು ದಾಟಿನಿಂತು ದೈವಬಲದಿಂದ ವಹಿವಾಟು ನಡೆಸಿದರೆ ಸ್ವಲ್ಪಮಟ್ಟಿಗೆ ಯಶಸ್ಸು ಕಾಣುತ್ತೀರ. ಕೆಲಸ ಆಗದಿದ್ದರೆ ನಿರಾಸೆ ಬೇಡ. ಮಹಾವಿಷ್ಣುವನ್ನು ನಿರಂತರ ಪ್ರಾರ್ಥಿಸಿ.

ಕಟಕ

ಈ ರಾಶಿಯ ಅಧಿಪತಿ ಚಂದ್ರನಿಗೆ ಸಪ್ತಮ ಗುರುವು, ಶನಿಯನ್ನು ಬಂದು ಸೇರುತ್ತಾನೆ. ಕೈ ಕೆಸರಾದರೆ ಬಾಯಿ ಮೊಸರು. ಚಂದ್ರಚೂಡನಾದ ಶಿವಪಾರ್ವತಿಯನ್ನು ಪೂಜಿಸಿ. ಉದ್ವೇಗ ಬೇಡ. ಚಿತ್ತಚಾಂಚಲ್ಯ ಆವರಿಸಿಕೊಳ್ಳಬಹುದು. ಹಾಗಾಗಿ ದಣಿವಾರಿಸಿಕೊಂಡು ಕೆಲಸವನ್ನು ಸ್ವಲ್ಪ ಸ್ವಲ್ಪವಾಗಿ ಮಾಡುವುದು ಒಳಿತು.

ಸಿಂಹ

ದೇಶ-ಕಾಲ, ವರ್ತಮಾನದಂತೆ ನಡೆಯಬೇಕು. ನೀರಿನಲ್ಲಿ ಇಳಿದಾಗ ಅದರ ರಭಸ, ಪ್ರವಾಹಶಕ್ತಿ ಕಡೆ ಯೋಚಿಸಿ. ಪ್ರವಾಹದ ದಿಕ್ಕು ಅರಿಯದೇ ಮುನ್ನುಗ್ಗಬೇಡಿ. ಈ ಸಂದರ್ಭದಲ್ಲಿ ಆತುರದ ನಿರ್ಣಯ ಬೇಡ. ಕಾದು ನೋಡಿ, ಕೆಲಸ ಮಾಡಿ. ಯಶಸ್ಸು ಗಳಿಸಿ. ಕೆಲವೊಂದು ವ್ಯವಹಾರದಲ್ಲಿ ಧನವೂ, ಸುಖವೂ ಸಿಗುತ್ತದೆ. ಪರಮಾತ್ಮನ ಸ್ಮರಣೆ ನಿರಂತರವಾಗಿರಲಿ.

ಕನ್ಯಾ

ಷಷ್ಠಿ ಗುರು ಪಂಚಮಕ್ಕೆ ಬಂದು ಮನಸ್ಸಿಗೆ ಅಲ್ಪಒತ್ತಡವನ್ನೂ, ಸಂತಸವನ್ನೂ ತಂದು ಕೊಡುತ್ತಾನೆ. ಒಂದು ಮನೆಯಿಂದ ಒಂದು ಮನೆಗೆ ಸಂಚಾರ 2 ವರ್ಷ 8 ತಿಂಗಳು. ಅಂದರೆ ಮಂದಗತಿಯಲ್ಲಿ ಸಾಗುತ್ತಾನೆ. ಒಟ್ಟಾರೆ ಆತುರ ಪಡದೆ ಅನವಶ್ಯಕ ವಿಚಾರಗಳಲ್ಲಿ ತಲೆಕೆಡಿಸಿಕೊಳ್ಳದೆ ಕಾರ್ಯೋನ್ಮುಖರಾಗಿ. ಶಿವನೇ ನಾನಾರೂಪಧಾರಣೆ ಮಾಡಿ ಜಗತ್ತನೇ ಕಾಪಾಡುತ್ತಿದ್ದಾನೆ. ರುದ್ರ ಪಾರಾಯಣ ಮಾಡಿ.

ತುಲಾ

ಎಲ್ಲರೂ ಕೆಟ್ಟವರಲ್ಲ. ಕೆಟ್ಟವರಲ್ಲೂ ಒಳ್ಳೆಯ ಗುಣವಿರುತ್ತದೆ. ರಾವಣ ತನ್ನ ದಶತಲೆಗಳನ್ನು ತಂಬೂರಿಯನ್ನಾಗಿ ಮಾಡಿ ಶಿವನನ್ನು ಒಲಿಸಿಕೊಂಡ. ಭಕ್ತಿಪಾಠವನ್ನು ಅವನಿಂದ ಕಲಿಯಬೇಕು. ಗುರುಬಲ ವೃದ್ಧಿಸಿಕೊಳ್ಳಲು ಮನಸಾ ನಿಮ್ಮ ಗುರುವನ್ನು ಭಜಿಸಿ-ಪೂಜಿಸಿ. ಗುರುಬಲದಿಂದಲೇ ಸಕಲ ಸಂಕಷ್ಟಗಳ ಕಾಮೋಡವನ್ನು ಕರಗಿಸಬಹುದು.

ವೃಶ್ಚಿಕ

ಸೂರ್ಯಷಷ್ಠಿ ಎಂಬುದು ಭಾದ್ರಪದ ಮಾಸದ ವಿಶೇಷವಾದ ವ್ರತ. ನಂತರದಲ್ಲಿ ಚಂಪಾ ಷಷ್ಠಿ ಬರುತ್ತದೆ. ನಿಮ್ಮ ಮನೆಯನ್ನು ಚೆನ್ನಾಗಿಟ್ಟುಕೊಳ್ಳುವುದು, ಮನೆದೇವರನ್ನು ಪೂಜಿಸುವುದು ನಿಮ್ಮ ಆದ್ಯ ಕರ್ತವ್ಯ. ಅನಂತಪದ್ಮನಾಭನನ್ನು ಭಕ್ತಿಯಿಂದ ಪೂಜಿಸಿ. ಮಾತಿನಲ್ಲಿ ನಿಯಂತ್ರಣವಿರಲಿ.

ಧನು

ಗಣಿತಶಾಸ್ತ್ರದಲ್ಲಿ ಕೂಡಿ ಕಳೆದು ಗುಣಿಸಿ ಭಾಗಿಸುವುದು, ಅದಕ್ಕೆ ಅಧಿಪತಿಯೇ ಗಣನಾಯಕನು. ಕಳೆದ ವಾರ ಬೇಡವಾದ ವಿಚಾರಗಳು ಮನಸ್ಸಿನ ಮೇಲೆ ಪರಿಣಾಮ ಬೀರಿವೆ. ಅದರಿಂದ ಸಾಕಷ್ಟು ವ್ಯಥೆ ಅನುಭವಿಸಿದ್ದೀರಿ. ಅದನ್ನು ದಾಟಿ ಸ್ವಶಕ್ತಿಯ ಮೇಲೆ ನಿಂತಲ್ಲಿ ನಿಮಗೆ ಯಾರೂ ಬಾಧಿಸುವುದಿಲ್ಲ. ಅನಂತವಾಗಿ ಗಣೇಶನನ್ನು ಭಜಿಸಿ, ಪೂಜಿಸಿ.

ಮಕರ

ದ್ವಿತೀಯ ಗುರುವು ಜನ್ಮಕ್ಕೆ ಬಂದು ಕೆಲವೊಂದು ಕೆಲಸಗಳಿಗೆ ತಾತ್ಕಾಲಿಕ ತಡೆ ಬರಬಹುದು. ಅದರ ನಿವಾರಣೆಗೆ ಈಶ್ವರನಿಗೆ ಬಿಲ್ವಪತ್ರೆ, ಶಮೀಪತ್ರ, ತುಳಸಿ ಹಾಗೂ ತುಂಬೆ ಹೂವಿಂದ ಪೂಜಿಸಿ. ಶಿವನು ಶಾಂತನಾದರೆ ನಿಮ್ಮ ಅಶಾಂತಿ ದೂರವಾಗುವುದು. ಕಾರ್ಯವೈಖರಿಗೆ ದಾರಿಸಿಕ್ಕಿ ಯಶಸ್ಸು ಕಾಣುತ್ತೀರ. ಆದರೂ ಆರೋಗ್ಯದ ಬಗ್ಗೆ ಎಚ್ಚರವಿರಲಿ. ನಿಮ್ಮ ಕುಲದೇವರನ್ನು ಪೂಜಿಸಿ, ಸಂಕಷ್ಟದಿಂದ ಆಚೆ ಬನ್ನಿ.

ಕುಂಭ

ಜನ್ಮರಾಶಿಯಿಂದ ಗುರುವು ಹಿಮ್ಮುಖವಾಗಿ ಸಾಗುತ್ತಾನೆ. ಅಂದರೆ ಮುಂದೆ ಬಂದ ಗುರುವು ಹಿಂದೆ ನಡೆದಿದ್ದಾನೆ. ಮನುಷ್ಯನು ಹಿಮ್ಮುಖವಾಗಿ ನಡೆದರೆ ದಾರಿ ತಪುಪತ್ತಾನೆ. ಆದ್ದರಿಂದ ಲೋಕಕ್ಕೆ ಗುರುವಾದ ಗಣೇಶ-ದತ್ತನನ್ನು ವಿಶೇಷವಾಗಿ ಪೂಜಿಸಿ. ನಿಮ್ಮ ದೈವಬಲವೇ ರಕ್ಷಿಸಿ ಕೆಲಸಗಳು ಮುಂದೆ ಸಾಗಲು ಅನುಕೂಲವಾಗುತ್ತದೆ. ಮಹಾಲಕ್ಷ್ಮೀ ಸಹಸ್ರನಾಮ ಪಾರಾಯಣ ಮಾಡಿ.

ಮೀನ

ಎರಡು ಮಾಸಗಳ ಕಾಲ ನಿರಂತರವಾಗಿ ಶನಿ-ಗುರು 11ನೇ ಮನೆಯಲ್ಲಿದ್ದು, ನಿಮ್ಮನ್ನು ರಕ್ಷಿಸುವುದರಲ್ಲಿ ಸಂದೇಹವಿಲ್ಲ. ನೀವು ಯಾರಿಗೂ ಮನಸ್ಸಿಗೆ ನೋವುಂಟು ಮಾಡದಿದ್ದರೆ ದೇವರೇ ನಿಮಗೆ ಒಳ್ಳೆಯದನ್ನು ಮಾಡುತ್ತಾನೆ. ಚಿತ್ತವು ದೈವದ ಕಡೆ ಇರಲಿ. ಕಾಲಭೈರವನ್ನು ಪೂಜಿಸಿ. ಸೋಮವಾರ ರಾತ್ರಿಯಲ್ಲಿ ಈಶ್ವರನ ಮುಂದೆ ತುಪ್ಪದ ದೀಪವನ್ನು ಬೆಳಗಿಸಿ, ಸಂತಸ ಸಿಗುತ್ತದೆ.

Leave a Comment

Your email address will not be published. Required fields are marked *