ಧರ್ಮಸ್ಥಳ: ಪ್ರತಿಯೊಂದು ಹೆಜ್ಜೆಯಲ್ಲೂ ತನ್ನನ್ನು ತಾನು ತೊಡಗಿಸಿಕೊಳ್ಳುವುದರ ಜೊತೆಗೆ ಹಲವು ಮನಸುಗಳು ಆತನನ್ನು ಕೈ ಜೋಡಿಸಿ ಅಭಿನಂದಿಸಿದಾಗ ಕಂಡ ಕನಸುಗಳು ಮರೆಯಲಾರದಷ್ಟು ಖುಷಿ ನೀಡುತ್ತವೆ. ಇರುವ ಒಂದು ಜೀವನವನ್ನು ಖುಷಿಯಾಗಿ ಸಾಗಿಸುತ್ತಿರುವುದರ ಜೊತೆಗೆ ತನ್ನೊಳಗೆಯಿದ್ದ ಕಲೆಯನ್ನು ಎಲ್ಲರ ಮುಂದೆ ಎತ್ತಿ ತೋರಿಸಬೇಕು. ಎಲ್ಲರಿಗೂ ಒಂದೊಂದು ಕಲೆ ಇದ್ದೆ ಇರುತ್ತದೆ. ಅದನ್ನು ಒರೆಗೆ ಹಚ್ಚಿ ಮುಂದೆ ತಂದಾಗ ಜಗತ್ತಿನಲ್ಲಿ ತಾನೊಂದು ಮರ ಎಂಬುದು ದಿಟವಾಗುತ್ತದೆ. ಈ ಆಶಯದೊಂದಿಗೆ ಬಾಲ್ಯದಿಂದಲೇ ಹತ್ತಾರು ಕನಸುಗಳನ್ನು ಕಾಣುತ್ತಾ, ಏನಾದರು ಸಾಧನೆ ಮಾಡಬೇಕು ಎಂಬ ಹಂಬಲ ಹೊಂದಿದ್ದು ಸುನಿಲ್ ದೇವಾಡಿಗ. ಅದಕ್ಕಾಗಿ ಇವರ ಆಯ್ಕೆ ಸಂಗೀತ.
ಧರ್ಮಸ್ಥಳ ಕಾಶಿಬೆಟ್ಟುವಿನ ದಿನೇಶ್ ದೇವಾಡಿಗ ಹಾಗೂ ಸುಲೋಚನಾ ರವರ ಪುತ್ರ ಸುನಿಲ್ ಗ ಸಣ್ಣದಿಂದಲೇ ಸಂಗೀತದಲ್ಲಿ ಬಹಳ ಒಲವು. ಎಳೆವಯಸ್ಸಿನಲ್ಲೇ ಸಣ್ಣ ಪುಟ್ಟ ಹಾಡುಗಳನ್ನು ಹಾಡುತ್ತ ಜಾನಪದ ಗೀತೆಯೊಂದಿಗೆ ಮೊದಲಾಗಿ ವೇದಿಕೆಗೆ ಹತ್ತಿದರು. ಆರಂಭದ ದಿನಗಳಲ್ಲಿ ಪ್ರಥಮ ಸ್ಥಾನ ದೊರೆತ ಕಾರಣ ಇವರ ಪ್ರತಿಭೆಗೆ ನೀರೆರೆಯಲು ಕಾರಣವಾಯಿತು. ಬಳಿಕ ಸುನಿಲ್ ಸಂಗೀತಕ್ಕೆ ಗಟ್ಟಿಯಾಗಿ ಅಡಿಪಾಯ ಹಾಕಲು ನಿರ್ಧರಿಸಿದ್ದು, ನಂತರದ ದಿನಗಳಲ್ಲಿ ಭಜನೆಯನ್ನು ಅಭ್ಯಾಸ ಮಾಡುತ್ತಿರಲು ಹರೀಶ್ ಧರ್ಮಸ್ಥಳರವರ ಪರಿಚಯವಾಗಿ ಅವರ ಪ್ರೀತಿ, ಪ್ರೋತ್ಸಾಹದಿಂದ ಒಂದೊಂದು ಹೆಜ್ಜೆಯಿಡಲು ಪ್ರಾರಂಭಿಸಿದರು.
ಜೀವನ ತುಂಬಾ ಕಷ್ಟ ಇದ್ದಿದರಿಂದ ತನ್ನ ಶಿಕ್ಷಣವನ್ನು ಪದವಿಯಗುವಾಗ ನಿಲ್ಲಿಸಬೇಕಾಗಿ ಬಂತು. ಆದರೆ ಸಂಗೀತ & ಚಿತ್ರ ಕಲೆಯಲ್ಲಿ ಹೆಚ್ಚಿನ ಆಸಕ್ತಿ ಇರುವ ಕಾರಣ ಅದನ್ನು ನಿಲ್ಲಿಸದೆ ತನ್ನಷ್ಟಕ್ಕೆ ತಾನೇ ಅಭ್ಯಾಸ ಮಾಡುತ್ತಿದರು.
ಸುನಿಲ್ಕೈಯಲ್ಲಿ ಮೂಡಿದ ಬಾಬಾ
ಕಾವಲಿ, ಜಾನಪದ ಗೀತೆಯಲ್ಲಿ ಬಹುಮಾನ ಪಡೆದ ಇವರು, ಹಲವಾರು ವಾಹಿನಿಗಳಲ್ಲಿ ನಡೆದ ಸ್ಪರ್ಧೆಯಲ್ಲೂ ಭಾಗವಹಿಸುವುದರ ಜೊತೆಗೆ ನಾಟಕ ಕ್ಷೇತ್ರದಲ್ಲೂ ಅಭಿನಯಿಸುತ್ತಾರೆ. ಇದೆಲ್ಲವುದರ ಜೊತೆಗೆ ತಾನು ಅರ್ಧಕ್ಕೆ ನಿಲ್ಲಿಸಿದ ವಿದ್ಯಾಭ್ಯಾಸವನ್ನು ಮುಂದುವರೆಸಲು ತೀರ್ಮಾನಿಸಿ ಇದೀಗ ಉಜಿರೆಯಲ್ಲಿ ಮೊದಲ ವರ್ಷದ ಬಿ ಎ ಪದವಿಯನ್ನು ಮಾಡುತ್ತಿದ್ದಾರೆ.
ಅಪ್ಪ ಅಮ್ಮ ಅಕ್ಕ,ಅಜ್ಜಿ, ಹರೀಶ್ ಅಣ್ಣ, ಹಾಗೂ ಊರುನವರ ಸಹಕಾರ, ಗೆಳೆಯರ ಪ್ರೋತ್ಸಾಹದಿಂದ ಇಷ್ಟು ಎತ್ತರಕ್ಕೆ ಬೆಳಯಲು ಕಾರಣವಾಯಿತು ಎನ್ನುವ ಸುನಿಲ್ ರವರು ಒಬ್ಬ ಒಳ್ಳೆಯ ಕಲಾವಿದನಾಗಿ ಹೊರ ಹೊಮ್ಮಲಿ, ಕಂಚಿನ ಕಂಠನಾದದಿಂದ ಇಡೀ ಪರಿಸರಕ್ಕೆ ಇoಪು ನೀಡಿ ಉತ್ತಮ ಗಾಯಕನಾಗಿ ಬೆಳೆಯಲಿ.