ವಿಜಯನಗರ: ಇಲ್ಲಿನ ಕೂಡ್ಲಿಗಿ ತಾಲೂಕು ತುಪ್ಪಕನಹಳ್ಳಿ ಗ್ರಾಮದ, ಹೊರವಲಯ ಅರಣ್ಯ ಪ್ರದೇಶದ ಮಾಗಡಿಕಲ್ಲು ಕಟ್ಟೆ ಎಂಬಲ್ಲಿ ಅಪರೂಪದ ಗೊಂಬೆ ಕಂಡುಬಂದಿದ್ದು, ವಾಮಾಚಾರ ಪ್ರಯೋಗಕ್ಕಾಗಿ ಅದನ್ನು ವಿಧಿವತ್ತಾಗಿ ಪ್ರತಿಷ್ಠಾಪಿಸಲಾಗಿದೆ ಎಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.
ಸಕಾಲಕ್ಕೆ ಮಳೆ ಬಾರದಿದ್ದಾಗ ಅಥವಾ ಗ್ರಾಮಕ್ಕೆ ಯಾವುದೋ ದುಷ್ಠ ಶಕ್ತಿಯ ಉಪಟಳ ಇದ್ದಾಗ, ಈ ರೀತಿಯಲ್ಲಿ ವಾಮಾಚಾರ ಪ್ರಯೋಗದ ಮೂಲಕ ಗ್ರಾಮದಿಂದ ಹೊರಹಾಕಿ ದಿಗ್ಭಂದನ ಹಾಕಲಾಗುತ್ತದೆ ಎಂದು ಕೆಲ ಹಿರಿಯ ಗ್ರಾಮಸ್ಥರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಈ ಗೊಂಬೆ ಪ್ರತಿಷ್ಠಾಪನೆಯನ್ನು ಯಾರು.!?ಯಾವ ಉದ್ದೇಶಕ್ಕಾಗಿ ಇಲ್ಲಿ ಪ್ರತಿಷ್ಠಾಪಿಸಿದ್ದಾರೆ..!? ಎಂಬುದು ಇಡೀ ತುಪ್ಪಕ್ಕನಹಳ್ಳಿ ಗ್ರಾಮಸ್ಥರಲ್ಲಿ ಯಕ್ಷ ಪ್ರೆಶ್ನೆಯಾಗಿ ಮನೆ ಮಾಡಿದೆ. ಗೊಂಬೆ ಇರುವಲ್ಲಿಗೆ ತುಪ್ಪಕ್ಕನಹಳ್ಳಿ ಗ್ರಾಮಸ್ಥರು ತೀವ್ರ ಕುತೂಹಲ ಹಾಗೂ ದುಗುಡದೊಂದಿಗೆ, ಗುಂಪು ಗುಂಪಾಗಿ ದೌಡಾಯಿಸಿ ಗೊಂಬೆ ಯನ್ನು ಕಂಡು ಕೌತುಕ ಕಥೆಗಳನ್ನ ಎಣೆಯುತ್ತಿದ್ದಾರೆ. ಅಲ್ಲದೇ ಸುದ್ದಿ ತಿಳಿದ ನೆರೆ ಹೊರೆಯ ಗ್ರಾಮಸ್ಥರು ಗುಂಪು ಗುಂಪಾಗಿ, ಗೊಂಬೆ ಪ್ರತಿಷ್ಠಾಪಿಸಿರುವ ಸ್ಥಳಕ್ಕೆ ಮುತ್ತಿಗೆ ಹಾಕುತ್ತಿದ್ದಾರೆ. ಒಟ್ಟಾರೆಯಾಗಿ ಈ ಗೊಂಬೆ ನೋಡುಗರಲ್ಲಿ ಕೌತುಕ ಹಾಗೂ ದುಗುಡ ಸೃಷ್ಟಿಸುತ್ತಿದೆ.