ಶಿಲಾಂಗ್: ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಅಪರಾಧದ ಮೇಲೆ ಮೇಘಾಲಯದ ಮಾಜಿ ಶಾಸಕ ಜೂಲಿಯಸ್ ಡಾರ್‍ಫಾಂಗ್ ಅವರಿಗೆ ಬರೋಬ್ಬರಿ 25 ವರ್ಷ ಜೈಲುಶಿಕ್ಷೆ ಸಿಕ್ಕಿದೆ.
ಮೇಘಾಲಯದ ರೀ-ಭೋಯ್ ಜಿಲ್ಲೆಯ ಪೆÇೀಕ್ಸೋ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ಎಫ್‍ಎಸ್ ಸಾಂಗ್ಮಾ ಅವರು ನಿನ್ನೆ ಮಂಗಳವಾರ ಈ ವಿಶೇಷ ತೀರ್ಪು ನೀಡಿದ್ದಾರೆ. ಆದರೆ, ಮಾಜಿ ಶಾಸಕನ ಪರ ವಕೀಲರು ಈ ತೀರ್ಪನ್ನ ಪ್ರಶ್ನಿಸಿ ಮೇಘಾಲಯದ ಹೈಕೋರ್ಟ್ ಬಾಗಿಲು ಬಡಿಯಲು ನಿರ್ಧರಿಸಿದ್ದಾರೆ. “ಹೌದು ಜೂಲಿಯಸ್ ಡಾರ್‍ಫಾಂಗ್ ಅವರನ್ನ ದೋಷಿ ಎಂದು ತೀರ್ಪು ನೀಡಲಾಗಿದೆ. ಮೇಘಾಲಯ ಹೈಕೋರ್ಟ್‍ಗೆ ನಾನು ಮೇಲ್ಮನವಿ ಹಾಕುತ್ತೇನೆ. ಟ್ರಯಲ್ ಕೋರ್ಟ್‍ನ ಅಭಿಪ್ರಾಯಗಳನ್ನ ನಾನು ಒಪ್ಪುವುದಿಲ್ಲ” ಎಂದು ಜೂಲಿಯಸ್ ಡಾರ್‍ಫಾಂಗ್ ಪರ ವಕೀಲ ಕಿಶೋರ್ ಗೌತಮ್ ಹೇಳಿದ್ದಾರೆ.
ನಾಲ್ಕು ವರ್ಷಗಳ ಹಿಂದೆ (2017ರಲ್ಲಿ) ಜೂಲಿಯಸ್ ಅವರು ಶಾಸಕರಾಗಿದ್ದ ವೇಳೆ 14 ವರ್ಷದ ಬಾಲಕಿಯೊಬ್ಬಳನ್ನ ರೇಪ್ ಮಾಡಿದ ಆರೋಪ ಕೇಳಿಬಂದಿತ್ತು. ಅದಾದ ಬೆನ್ನಲ್ಲೇ ಅವರು ನಾಪತ್ತೆಯಾಗಿದ್ದರು. ಬಳಿಕ ಅವರನ್ನ ಗುವಾಹಟಿಯಲ್ಲಿ ಪತ್ತೆ ಮಾಡಿ ಬಂಧಿಸಲಾಯಿತು. ಲೈಂಗಿಕ ಹಲ್ಲೆಗಳಿಂದ ಮಕ್ಕಳಿಗೆ ರಕ್ಷಣೆ ಕಾಯ್ದೆ ಹಾಗೂ ಅನೈತಿಕ ಸಾಗಣೆ ನಿಯಂತ್ರಣ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಅವರನ್ನ ಬಂಧನಕ್ಕೊಳಪಡಿಸಲಾಯಿತು. ಬಳಿಕ ಅವರನ್ನ ಮೇಘಾಲಯದ ನಾಂಗ್ ಪೆÇೀ ಜಿಲ್ಲಾ ಕಾರಾಗೃಹದಲ್ಲಿರಿಸಲಾಯಿತಾದರೂ 2020ರಲ್ಲಿ ವೈದ್ಯಕೀಯ ಕಾರಣಕ್ಕಾಗಿ ಮೇಘಾಲಯ ಹೈಕೋರ್ಟ್‍ನಿಂದ ಅವರಿಗೆ ಜಾಮೀನು ಸಿಕ್ಕಿತು. ಬಳಿಕ ಇದೇ ಆಗಸ್ಟ್ 13ರಂದು ಅವರನ್ನ ಮತ್ತೊಮ್ಮೆ ಬಂಧಿಸಿ ಪೆÇೀಕ್ಸೋ ನ್ಯಾಯಾಲಯದಲ್ಲಿ ವಿಚಾರಣೆಗೊಳಪಡಿಸಲಾಯಿತು. ಇದೀಗ ಅವರು ಆ ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂಬುದು ಸಾಬೀತಾಗಿ 25 ವರ್ಷ ಕಾರಾಗೃಹ ಶಿಕ್ಷೆ ಪಡೆದಿದ್ದಾರೆ.