ಸಮಗ್ರ ನ್ಯೂಸ್: ಕೇರಳ ಕರಾವಳಿಯಲ್ಲಿ ರವಿವಾರ ಮುಳುಗಿದ ಲೈಬೀರಿಯ ಸರಕು ಹಡಗಿನ ಕಂಟೈನರ್‌ಗಳು ಸೋಮವಾರ ಬೆಳಿಗ್ಗೆ ಕೊಲ್ಲಂ ಕರಾವಳಿಯ ವಿವಿಧ ಭಾಗಗಳಲ್ಲಿ ದಡಕ್ಕೆ ಬಂದು ಸೇರಿದೆ.
ಘಟನೆ ಬಳಿಕ ಸಂಭಾವ್ಯ ತೈಲ ಸೋರಿಕೆ ಅಥವಾ ರಾಸಾಯನಿಕ ಸೋರಿಕೆ ಭೀತಿಯ ಹಿನ್ನೆಲೆ ರಾಜ್ಯವು ತುರ್ತು ಪರಿಸ್ಥಿತಿಯನ್ನು ಘೋಷಿಸಿತ್ತು.
ಈವರೆಗೆ ಕೊಲ್ಲಂ ಕರಾವಳಿಯಲ್ಲಿ ಎಂಟು ಕಂಟೇನರ್‌ಗಳು ಪತ್ತೆಯಾಗಿವೆ ಎಂದು ವರದಿಯಾಗಿದೆ. ಮೊದಲ ಕಂಟೇನರ್ ಮಧ್ಯರಾತ್ರಿಯ ಸುಮಾರಿಗೆ ಕರುಣಗಪ್ಪಳ್ಳಿಯ ಚೆರಿಯಾಝಿಕಲ್‌ನಲ್ಲಿ ಪತ್ತೆಯಾಗಿದೆ. ಬಳಿಕ ಚವರದ ಪರಿಮಳಂ ಬೀಚ್, ಶಕ್ತಿಕುಲಂಗರ ಮತ್ತು ಮಾದಮ್ಮ ಥಾಪ್, ನೀಂದಕರ ಅಲ್ತರಮೂಡು ಪ್ರದೇಶದಲ್ಲಿಯೂ ಕಂಟೇನರ್‌ಗಳು ಪತ್ತೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜಿಲ್ಲಾಧಿಕಾರಿ ಎನ್. ದೇವಿದಾಸ್ ನೇತೃತ್ವದ ತಜ್ಞರ ತಂಡ ಕಂಟೈನರ್‌ಗಳನ್ನು ಪರಿಶೀಲಿಸಿದೆ. ಇಲ್ಲಿಯವರೆಗೆ ವಶಪಡಿಸಿಕೊಂಡ ಎಲ್ಲಾ ಕಂಟೈನರ್‌ಗಳು ಖಾಲಿಯಾಗಿ ಕಂಡುಬಂದಿವೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಭಾರತೀಯ ಕರಾವಳಿ ರಕ್ಷಣಾ ಪಡೆ ಮತ್ತು ನೌಕಾಪಡೆ ಕಟ್ಟೆಚ್ಚರ ವಿಧಿಸಿದೆ. ಸಾರ್ವಜನಿಕರು ಕರಾವಳಿ ಪ್ರದೇಶದಿಂದ ದೂರ ವಿರುವಂತೆ ಸೂಚಿಸಿದೆ.