ಸಮಗ್ರ ನ್ಯೂಸ್: ಅಶ್ಲೀಲ ವಿಡಿಯೋ ಹಾಗೂ ಅತ್ಯಾಚಾರ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಕಾರಿನ ಚಾಲಕ ಕಾರ್ತಿಕ್ ಸೋಮವಾರ(ಮೇ.26) ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮುಂದೆ ಹಾಜರಾಗಿ ಸಾಕ್ಷ್ಯ ನುಡಿದಿದ್ದಾರೆ. ಪ್ರಜ್ವಲ್ ರೇವಣ್ಣ ಮೊಬೈಲ್‌ನಲ್ಲಿ 2000ಕ್ಕೂ ಹೆಚ್ಚು ಮಹಿಳೆಯರ ಛಾಯಾಚಿತ್ರಗಳು ಮತ್ತು ಸುಮಾರು 40-50 ವೀಡಿಯೊಗಳು ಇದ್ದವು ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಜ್ವಲ್ ರೇವಣ್ಣ ತನ್ನ ಮೊಬೈಲ್ ಫೋನ್ ಅನ್ನು ಕಾರಿನಲ್ಲಿಯೇ ಬಿಟ್ಟು ಜಯನಗರದ ಗೆಳತಿ ಮನೆಯೊಳಗೆ ಹೋಗಿದ್ದ. ನನಗೆ ಮೊಬೈಲ್ ಪಾಸ್‌ವರ್ಡ್ ತಿಳಿದಾಗಿನಿಂದ ಕುತೂಹಲದಿಂದ ನಾನು ಮೊಬೈಲ್ ಫೋನ್ ಬ್ರೌಸ್ ಮಾಡಲು ಪ್ರಾರಂಭಿಸಿದ್ದೆ. ನಾನು ಮೊಬೈಲ್ ಫೋನ್ ತೆರೆದಾಗ ಪ್ರಜ್ವಲ್ ರೇವಣ್ಣ ಲೈಂಗಿಕ ಸಂಭೋಗ ನಡೆಸುತ್ತಿರುವ ವೀಡಿಯೊಗಳು ಕಂಡು ಬಂದವು. ವೀಡಿಯೊಗ್ರಾಫ್‌ಗಳು ಮತ್ತು ಫೋಟೋಗಳು ಪಕ್ಷವೊಂದರ ಕಾರ್ಯಕರ್ತರು, ಸೇವಕಿ, ಸೇವಕರು ಇತ್ಯಾದಿಗಳಿಗೆ ಸಂಬಂಧಿಸಿದ್ದಾಗಿದೆ, ಮೊಬೈಲ್ ಫೋನ್‌ನಲ್ಲಿ 2000ಕ್ಕೂ ಹೆಚ್ಚು ಮಹಿಳೆಯರ ಛಾಯಾಚಿತ್ರಗಳು ಮತ್ತು ಸುಮಾರು 40-50 ವೀಡಿಯೊಗಳು ಇದ್ದವು. ವೀಡಿಯೊಗಳು ಸುಮಾರು 30-40 ಮಹಿಳೆಯರನ್ನು ಒಳಗೊಂಡಿತ್ತು ಎಂದು ಕಾರ್ತಿಕ್ ಸಾಕ್ಷ್ಯ ನುಡಿದಿದ್ದಾರೆ.
ಈ ಸಂಬಂಧ ಭವಾನಿ ರೇವಣ್ಣರಿಗೆ ತೋರಿಸಲೆಂದು ವಿಡಿಯೋಗಳ ವರ್ಗಾಯಿಸಿಕೊಂಡು ಬುದ್ದಿ ಹೇಳಲಿ ಎಂದು ಭವಾನಿ ರೇವಣ್ಣ ಅವರಿಗೆ ಮಾಹಿತಿ ಕೊಟ್ಟಿದ್ದೆ. ಆಗ ಭವಾನಿ ರೇವಣ್ಣ ಅವರು ಫೋಟೋ, ವಿಡಿಯೋ ತಮಗೆ ಕಳುಹಿಸಲು ವಿನಂತಿಸಿದರು. ಇದನ್ನು ಎಲ್ಲೂ ಬಹಿರಂಗಪಡಿಸದಂತೆ ಮನವಿ ಮಾಡಿದ್ದರು. ವಿಡಿಯೋ ಬಗ್ಗೆ ತಿಳಿಸಿದ್ದು ಯಾರೆಂದು ಪ್ರಜ್ವಲ್ ಕೇಳಿದಾಗ ಭವಾನಿ ರೇವಣ್ಣ ನನ್ನ ಹೆಸರು ಹೇಳಿದ್ದರು. ಆಗ ಫೋನ್ ಮಾಡಿ ಪ್ರಜ್ವಲ್ ತಮಗೆ ಗದರಿದ್ದಾರೆ ಎಂದು ಕಾರ್ತಿಕ್ ನುಡಿದಿದ್ದಾರೆ ಎನ್ನಲಾಗಿದೆ.
2009ರಿಂದ ಎಚ್.ಡಿ.ರೇವಣ್ಣ ಬಳಿ ಚಾಲಕನಾಗಿ ಕೆಲಸ ಮಾಡುತ್ತಿದ್ದೆ. 2018ರಿಂದ ಪ್ರಜ್ವಲ್ ರೇವಣ್ಣ ಕಾರು ಚಾಲಕನಾಗಿದ್ದೆ. ಆ ಸಂದರ್ಭದಲ್ಲಿ ಕ್ಷೇತ್ರ ಸಂಚಾರ ಮಾಡುತ್ತಿದ್ದಾಗ ಕಾರಿನಲ್ಲೇ ಪ್ರಜ್ವಲ್ ರೇವಣ್ಣ ಮೊಬೈಲ್‌ನಲ್ಲಿ ಅಶ್ಲೀಲ ದೃಶ್ಯ ವೀಕ್ಷಿಸುತ್ತಿದ್ದರು. ನಾನು ಅವರ ಕಡೆ ನೋಡಿದಾಗ ಫೋನ್ ತಿರುಗಿಸಿಕೊಳ್ಳುತ್ತಿದ್ದರು.
ನಮ್ಮ ನಡುವೆ ಜಗಳವಾಗಿ 2022ರಲ್ಲಿ ನಾನು ಕೆಲಸ ಬಿಟ್ಟಿದ್ದೆ. ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ಪ್ರಕರಣವನ್ನೂ ದಾಖಲಿಸಿದ್ದೆ. ಆಸ್ತಿ ವಿವಾದ ಬಗೆಹರಿಸುತ್ತೇನೆ ಕೆಲಸಕ್ಕೆ ಬರುವಂತೆ ಕರೆದು, ಯಾವುದೇ ಕಾರಣಕ್ಕೂ ವಿಡಿಯೋ ಬಹಿರಂಗಪಡಿಸದಂತೆ ತಡೆಯಾಜ್ಞೆ ತಂದಿದ್ದರು. ನನ್ನನ್ನು ಪ್ರತಿವಾದಿ ಮಾಡಿದ್ದರಿಂದ ವಕೀಲ ದೇವರಾಜೇಗೌಡ ಅವರನ್ನು ಸಂಪರ್ಕಿಸಿದೆ. ಸಾಕ್ಷಿಯಾಗಿ ಫೋಟೋಗಳನ್ನು ನೀಡುವಂತೆ ಸೂಚಿಸಿದ್ದರಿಂದ ಪೆನ್‌ಡ್ರೈವ್ ನಲ್ಲಿ ನೀಡಿದೆ. ಆದರೆ, ಚುನಾವಣೆ ವೇಳೆ ಫೋಟೋ, ವಿಡಿಯೋಗಳು ಬಹಿರಂಗಗೊಂಡವು ಎಂದು ಕಾರ್ತಿಕ್ ನ್ಯಾಯಾಲಯದ ಮುಂದೆ ನುಡಿದ ಸಾಕ್ಷ್ಯದಲ್ಲಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.