ಸಮಗ್ರ ನ್ಯೂಸ್: ರಾಜ್ಯದ ಪ್ರತಿಷ್ಠಿತ ನ್ಯೂಸ್ ಚಾನಲ್ ರಿಪಬ್ಲಿಕ್ ಕನ್ನಡದ ಸೀನಿಯರ್ ಆ್ಯಂಕರ್ ಹಾಗೂ ಪ್ರೋಗ್ರಾಂ ಹೆಡ್ ಜಯಪ್ರಕಾಶ್ ಶೆಟ್ಟಿ ಚಾನಲ್ ನಿಂದ ಹೊರನಡೆದಿದ್ದಾರೆ.
ಚಾನಲ್ ಗೆ ನೂತನ ಸುದ್ದಿ ಸಂಪಾದಕರಾಗಿ ಹಿರಿಯ ಪತ್ರಕರ್ತೆ ಶೋಭಾ ಮಳವಳ್ಳಿ ನೇಮಕವಾದ ಬೆನ್ನಲ್ಲೇ ಜಯಪ್ರಕಾಶ್ ಶೆಟ್ಟಿ ಚಾನಲ್ ನಿಂದ ಹೊರಬಿದ್ದಿರುವುದು ತೀವ್ರ ಕುತೂಹಲ ಕೆರಳಿಸಿದೆ.
ಚಾನಲ್ ನ ಆರಂಭದಿಂದಲೂ ತಮ್ಮ ಅಗ್ರೆಸಿವ್ ವರದಿಗಾರಿಕೆ ಹಾಗೂ ನಿರೂಪಣೆಯಿಂದ ಜನರ ಮನಗೆದ್ದಿದ್ದ ಜಯಪ್ರಕಾಶ್ ಶೆಟ್ಟಿ ಕಳೆದ ಕೆಲ ದಿನಗಳ ಹಿಂದೆ ಧರ್ಮಸ್ಥಳದ ಸೌಜನ್ಯ ಕೊಲೆ ಪ್ರಕರಣದಲ್ಲಿ ನಡೆಸಿಕೊಟ್ಟ ಕಾರ್ಯಕ್ರಮದ ಮೂಲಕ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಒಳಗಾಗಿದ್ದರು.
ಜಯಪ್ರಕಾಶ್ ಶೆಟ್ಟಿ ಇದೀಗ ಹುದ್ದೆ ತೊರೆದು ಹೊರನಡೆದಿರುವುದು ಅವರ ಮುಂದಿನ ನಡೆ ಬಗ್ಗೆ ಕುತೂಹಲ ಮೂಡಿದೆ.