ಸಮಗ್ರ ನ್ಯೂಸ್: ಭಾರತ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಭಾರತ ಹೊರಹೊಮ್ಮಿದೆ.ಜಪಾನ್ ದೇಶವನ್ನು ಹಿಂದಿಕ್ಕಿದೆ ಎಂದು ನೀತಿ ಆಯೋಗದ ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿ (ಸಿಇಒ) ಬಿ.ವಿ.ಆರ್ ಸುಬ್ರಹ್ಮಣ್ಯಂ ಘೋಷಣೆ ಮಾಡಿದ್ಧಾರೆ.
ಅಂತರರಾಷ್ಟ್ರೀಯ ಹಣಕಾಸು ನಿಧಿಯ (IMF) ದತ್ತಾಂಶವನ್ನು ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ನೀತಿ ಆಯೋಗದ ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿ (ಸಿಇಒ) ಬಿ.ವಿ.ಆರ್ ಸುಬ್ರಹ್ಮಣ್ಯಂ ದೇಶದಲ್ಲಿ ದೊಡ್ಡ ಜಿಡಿಪಿಯಲ್ಲಿ ಅಮೆರಿಕಾ ಮೊದಲ ಸ್ಥಾನವನ್ನು ಗಿಟ್ಟಿಸಿಕೊಂಡಿದೆ. ನಾವು ನಾಲ್ಕನೇ ಅತಿದೊಡ್ಡ ಆರ್ಥಿಕತೆಯಲ್ಲಿ ಇದ್ದವೆ ನಮ್ಮ ಆರ್ಥಿಕತೆ 4 ಟ್ರಿಲಿಯನ್ ಡಾಲರ್ ಇದು ನನ್ನ ದತ್ತಾಂಶವಲ್ಲ. ಇದು ಐಎಂಎಫ್ ದತ್ತಾಂಶ. ಭಾರತ ಇಂದು ಜಪಾನ್‌ಗಿಂತ ದೊಡ್ಡದಾಗಿದೆ ಎಂದು ಬಿವಿಆರ್ ಸುಬ್ರಹ್ಮಣ್ಯಂ ಭಾನುವಾರ ನಡೆದ 10 ನೇ ನೀತಿ ಆಯೋಗ ಆಡಳಿತ ಮಂಡಳಿ ಸಭೆಯಲ್ಲಿ ಮಾಹಿತಿಯನ್ನು ತಿಳಿಸಿದ್ದಾರೆ.
ಭಾರತ ಶೀಘ್ರದಲ್ಲೇ ಜರ್ಮನಿಯನ್ನು ಹಿಂದಕ್ಕೆ ಹಾಕಿ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಬಹುದು ಎಂದು ಸುಬ್ರಹ್ಮಣ್ಯಂ ಭರವಸೆಯನ್ನು ವ್ಯಕ್ತಪಡಿಸಿದ್ಧಾರೆ. ನಾವು ಏನು ಯೋಚಿಸಲಾಗುತ್ತಿದೆ ಎಂಬುದರ ಮೇಲೆ ನಮ್ಮ ಆರ್ಥಿಕತೆ ಅವಲಂಬಿತರಾಗಿದ್ದಾರೆ.ಇನ್ನೂ 2, 2.5 ರಿಂದ 3 ವರ್ಷಗಳ ವಿಷಯವಾಗಿದೆ ನಾವು ಮೂರನೇ ಅತಿದೊಡ್ಡ ಆರ್ಥಿಕತೆಯಾಗುತ್ತೇವೆ ಎಂದು ಹೇಳಿದ್ದಾರೆ.
ಜಿಡಿಪಿಯಲ್ಲಿ ಅಮೇರಿಕಾ ಮೊದಲನೇ ಸ್ಥಾನ ಪಡೆದಿದ್ದರೆ, ನಂತರದ ಸ್ಥಾನದಲ್ಲಿ ಚೀನಾ ಇದೆ. ಜರ್ಮನಿ , ಭಾರತ, ಜಪಾನ್, ಯು.ಕೆ, ಪ್ರಾನ್ಸ್, ಇಟಲಿ, ಕೆನಡಾ, ಬ್ರೆಜಿಲ್ ಕ್ರಮವಾಗಿ ನಂತರದ ಸ್ಥಾನಗಳಲ್ಲಿ ಇವೆ ಎಂದು ವರದಿ ಹೇಳಿದೆ.