ಮಂಗಳೂರು: ಇಲ್ಲಿ ಹರಿಯುವ ನೇತ್ರಾವತಿ ನೀರನ್ನು ಮಲಿನ ಮಾಡಿದ ಆರೋಪದ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ 4 ಮಂದಿಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ.
ಉಪ್ಪಿನಂಗಡಿ ನಿರಲ ಬಾರ್ ಆ್ಯಂಡ್ ರೆಸ್ಟೋರೆಂಟ್ ಮಾಲಕಿ ನವೀನ ರೈ, ಗೌರಿ ವೆಂಕಟೇಶ್ ವಸತಿ ಸಮುಚ್ಚಯದ ಮಾಲಕ ಪ್ರಕಾಶ್ ಭಟ್, ಹೊಟೇಲ್ ಲಕ್ಷ್ಮೀ ನಿವಾಸ ಸಂಸ್ಥೆಯ ಶೇಖರ್ ಮತ್ತು ಇಳಂತಿಲ ಗ್ರಾಮದ ಅಂಡೆತ್ತಡ್ಕ ನಿವಾಸಿ ಸದಾನಂದ ಪ್ರಕರಣದ ಆರೋಪಿಗಳು. ಇವರು ನದಿಗೆ ಮಲಿನ ನೀರು ಬಿಡುವ ಮತ್ತು ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಇಂಗುಗುಂಡಿ ನಿರ್ಮಾಣ ಮಾಡಿರುವ ಬಗ್ಗೆ ಪುತ್ತೂರು ತಹಶೀಲ್ದಾರ್ ದೂರು ನೀಡಿದ್ದರು. ಈ ಹಿನ್ನಲೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಐಪಿಸಿ. 1860 (ಯು/ಎಸ್-269, 277), ಕರ್ನಾಟಕ ಕಂದಾಯ ಇಲಾಖಾ ಕಾಯ್ದೆ-164, (ಯು/ಎಸ್-192(ಎ)(1) ರಂತೆ ಪ್ರಕರಣ ದಾಖಲಾಗಿದೆ.