ಕನ್ನಡದ ಹಿರಿಯ ಸಾಹಿತಿ ಬಾನು ಮುಷ್ತಾಕ್ ರ ”ಹಾರ್ಟ್ ಲ್ಯಾಂಪ್” ಕೃತಿಗೆ ಪ್ರತಿಷ್ಠಿತ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ

ಸಮಗ್ರ ನ್ಯೂಸ್: ಕನ್ನಡದ ಖ್ಯಾತ ಹಿರಿಯ ಸಾಹಿತಿ ಬಾನು ಮುಷ್ತಾಕ್‌ ಅವರ ಸಣ್ಣ ಕಥಾ ಸಂಕಲನ ‘ಹಾರ್ಟ್ ಲ್ಯಾಂಪ್’ ಕೃತಿಯು 2025ರ ಪ್ರತಿಷ್ಠಿತ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಆಯ್ಕೆಯಾಗಿದೆ. ಅನುವಾದಿತ ಕಾದಂಬರಿ ವಿಭಾಗದ ಅಡಿಯಲ್ಲಿ ಈ ಗೌರವಕ್ಕೆ ಭಾಜನವಾಗಿದ್ದು, ಈ ಪ್ರಶಸ್ತಿಯನ್ನು ಪಡೆದ ಮೊದಲ ಸಣ್ಣ ಕಥೆಯಾಗಿದೆ.

Ad Widget .

ಮುಷ್ತಾಕ್ ಅವರ ಹಾರ್ಟ್​ ಲ್ಯಾಂಪ್​ ಕೃತಿಯು ದಕ್ಷಿಣ ಭಾರತದ ಪಿತೃಪ್ರಧಾನ ಸಮುದಾಯಗಳಲ್ಲಿನ ಮಹಿಳೆಯರ ಜೀವನವನ್ನು ನಿರೂಪಿಸುವ 12 ಕಥೆಗಳನ್ನು ಹೊಂದಿದೆ. ತೀರ್ಪುಗಾರರ ಅಧ್ಯಕ್ಷರಾದ ಮ್ಯಾಕ್ಸ್ ಪೋರ್ಟರ್ ಅವರು ಈ ಪುಸ್ತಕವನ್ನು ಒಂದು ಸುಂದರ, ಕಾರ್ಯನಿರತ, ಜೀವನವನ್ನು ದೃಢೀಕರಿಸುವ ಕಥೆಗಳು ಎಂದಿದ್ದಾರೆ. ಅಲ್ಲದೆ, ಇಂಗ್ಲಿಷ್ ಓದುಗರಿಗೆ ನಿಜವಾಗಿಯೂ ಇದು ಹೊಸದು. ಇದೊಂದು ಆಮೂಲಾಗ್ರ ಅನುವಾದ ಎಂದು ಬಣ್ಣಿಸಿದ್ದಾರೆ ಎಂದು ದಿ ಗಾರ್ಡಿಯನ್ ವರದಿ ಮಾಡಿದೆ.

Ad Widget . Ad Widget .

ಇನ್ನು ಈ ಕೃತಿಯನ್ನು ಕನ್ನಡದಿಂದ ಇಂಗ್ಲಿಷ್​ಗೆ ಅನುವಾದ ಮಾಡಿದ ಕೀರ್ತಿ ಮಡಿಕೇರಿ ಮೂಲದ ಅನುವಾದಕಿ ದೀಪಾ ಬಸ್ತಿ ಅವರಿಗೆ ಸಲ್ಲುತ್ತದೆ. ದೀಪಾ ಭಸ್ತಿ ಅವರು ಬಹುಮಾನವನ್ನು ಪಡೆಯಲು ಲಂಡನ್​ನ ಟೇಟ್ ಮಾಡರ್ನ್‌ನಲ್ಲಿ ಮುಷ್ತಾಕ್ ಅವರೊಂದಿಗೆ ಹಾಜರಿದ್ದರು.

ಮೇ.21ರಂದು ಲಂಡನ್‌ನಲ್ಲಿ ನಡೆದ ಸಮಾರಂಭದಲ್ಲಿ ಈ ಕುರಿತ ಅಧಿಕೃತ ಘೋಷಣೆ ಹೊರಬಿದ್ದಿತು. ವಿಜೇತರಿಗೆ 50,000 ಪೌಂಡ್‌ ಬಹುಮಾನ ಸಿಗಲಿದೆ. ಇದನ್ನು ಲೇಖಕರು ಹಾಗೂ ಅನುವಾದಕರ ನಡುವೆ ಸಮನಾಗಿ ಹಂಚಲಾಗುತ್ತದೆ. ಶಾರ್ಟ್ ಲಿಸ್ಟ್‌ನಲ್ಲಿ ಆಯ್ಕೆಯಾಗಿದ್ದ ಎಲ್ಲರನ್ನೂ ಲಂಡನನ್​ನಲ್ಲಿ ನಡೆದ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು.

ವೃತ್ತಿಯಲ್ಲಿ ವಕೀಲೆ ಮತ್ತು ಪತ್ರಕರ್ತೆಯಾಗಿರುವ ಬಾನು ಮುಷ್ತಾಕ್, ಕಥೆಗಾರ್ತಿ, ಕವಿ, ಕಾದಂಬರಿಕಾರ ಮತ್ತು ಸಾಮಾಜಿಕ ಕಾರ್ಯಕರ್ತೆಯಾಗಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿಯನ್ನು ಗೆದ್ದ ಮೊದಲ ಕನ್ನಡ ಲೇಖಕಿ ಎಂಬ ಹೆಗ್ಗಳಿಕೆಗೆ ಬಾನು ಮುಷ್ತಾಕ್ ಪಾತ್ರರಾಗಿದ್ದಾರೆ. ತಮ್ಮ ಖುಷಿಯನ್ನು ಹಂಚಿಕೊಂಡಿರುವ ಮುಷ್ತಾಕ್​, ಈ ಬಹುಮಾನವು ಕನ್ನಡ ಭಾಷೆಯ ನಿಜವಾದ ಸಾಮರ್ಥ್ಯವನ್ನು ತೋರಿಸಿದೆ. ಕನ್ನಡದ ಸಾಹಿತ್ಯ ಮತ್ತು ಹೆಚ್ಚಿನ ಕೃತಿಗಳನ್ನು ಇತರ ಭಾಷೆಗಳಿಗೆ, ಅದರಲ್ಲೂ ವಿಶೇಷವಾಗಿ ಇಂಗ್ಲಿಷ್‌ಗೆ ಅನುವಾದಿಸಿದರೆ ಏನೆಲ್ಲ ಗೌರವ ಸಿಗಬಹುದು ಎಂಬುದನ್ನು ಈ ಪ್ರಶಸ್ತಿ ನಿರೂಪಿಸಿದೆ ಎಂದರು.

Leave a Comment

Your email address will not be published. Required fields are marked *