ಸಮಗ್ರ ನ್ಯೂಸ್: ಬಲೂಚಿಸ್ತಾನದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂ ಸಮುದಾಯದ ಕಶಿಶ್ ಚೌಧರಿ ಸಹಾಯಕ ಆಯುಕ್ತರಾಗಿ (ಅಸಿಸ್ಟೆಂಟ್ ಕಮಿಷನರ್ -ಎಸಿ) ನೇಮಕಗೊಳ್ಳುವ ಮೂಲಕ ದಾಖಲೆ ಮಾಡಿದ್ದಾರೆ. ಬಲೂಚ್ನಲ್ಲಿ ಈ ಸ್ಥಾನಕ್ಕೆ ನೇಮಕಗೊಂಡ ಮೊದಲ ಹಿಂದೂ ಮಹಿಳೆಯಾಗಿದ್ದಾರೆ.
ಬಲೂಚ್ನ ಚಗೈ ಎಂಬ ಜಿಲ್ಲೆಯ ನೋಶ್ಕಿಯವರಾದ 25 ವರ್ಷದ ಕಶಿಶ್, ಬಲೂಚಿಸ್ತಾನ ಸಾರ್ವಜನಿಕ ಸೇವಾ ಆಯೋಗ (ಬಿಪಿಎಸ್ಸಿ) ಪರೀಕ್ಷೆಯಲ್ಲಿ ಅರ್ಹತೆ ಪಡೆದಿದ್ದಾರೆ.
ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಕಶಿಶ್, ತನ್ನ ತಂದೆ ಗಿರ್ಧಾರಿ ಲಾಲ್ ಅವರ ಜೊತೆಗೂಡಿ ಬಲೂಚ್ ಸಿಎಂ ಸರ್ಫರಾಜ್ ಬುಗ್ತಿ ಅವರನ್ನು ಸೋಮವಾರ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಕಶಿಶ್ ಮಹಿಳೆ ಹಾಗೂ ಅಲ್ಪಸಂಖ್ಯಾತರ ಸಬಲೀಕರಣಕ್ಕಾಗಿ ಶ್ರಮಿಸುವುದಾಗಿ ಹೇಳಿದ್ದಾರೆ.
2022ರ ಜುಲೈನಲ್ಲಿ ಮನೇಶ್ ರೋಪೆಟಾ ಪಾಕಿಸ್ತಾನದ ಕರಾಚಿಯಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕವಾಗಿರುವ ಮೊದಲ ಹಿಂದೂ ಮಹಿಳೆಯಾಗಿದ್ದಾರೆ. ಅವರು ಈಗಲೂ ತಮ್ಮ ಕರ್ತವ್ಯಗಳಲ್ಲಿ ನಿರತರಾಗಿದ್ದಾರೆ.