ಪಾಕ್ ಗೆ ಸಮನ್ಸ್ ನೀಡಿದ ಚೀನಾ? ಭಾರತದ ಮೇಲೆ ತನ ದೇಶದ ಕ್ಷಿಪಣಿ ಬಳಸಿದ್ದಕ್ಕೆ ಕಿವಿ ಹಿಂಡಿದ ಡ್ಯ್ರಾಗನ್

ಸಮಗ್ರ ನ್ಯೂಸ್: ತಮ್ಮ ದೇಶದ ಪಿಎಸ್‌15 ಕ್ಷಿಪಣಿ, ಜೆ17 ಫೈಟರ್‌ ಜೆಟ್‌ಗಳನ್ನು ಯುದ್ಧಕ್ಕೆ ಬಳಸಬಾರದು ಎನ್ನುವ ಷರತ್ತನ್ನು ಹಾಕಿದ್ದರೂ ಅದನ್ನು ಧಿಕ್ಕರಿಸಿದ ಪಾಕ್‌ಗೆ ಚೀನಾ ಸಮನ್ಸ್‌ ನೀಡಿದೆ. ಮತ್ತೊಂದೆಡೆ ಎಫ್‌-16 ವಿಮಾನ ಬಳಕೆಯಲ್ಲಿಯೂ ಪಾಕ್ ಅಮೆರಿಕದ ನಿಯಮ ಉಲ್ಲಂಘಿಸಿದೆ ಎಂಬ ಆರೋಪ ಕೇಳಿಬಂದಿದೆ.

Ad Widget .

ಪಾಕಿಸ್ತಾನದ ಹಾರಿಸಿಬಿಟ್ಟ ಪಿಎಸ್‌15 ಕ್ಷಿಪಣಿಗಳನ್ನು ಭಾರತ ಹೊಡೆದುರುಳಿಸಿತ್ತು. ಜೊತೆಗೆ ಜೆ17 ಯುದ್ಧ ವಿಮಾನಗಳು, ಪಿಎಲ್‌15 ಕ್ಷಿಪಣಿಗಳು, ಜೆ 17 ವಿಮಾನಗಳನ್ನು ಭಾರತ ಹೊಡೆದುರುಳಿಸಿತ್ತು. ಇದರಿಂದಾಗಿ ಜಾಗತಿಕ ಮಟ್ಟದಲ್ಲಿ ಚೀನಾದ ಶಸ್ತ್ರಾಸ್ತ್ರಗಳ ಘನತೆಗೆ ಧಕ್ಕೆ ಬಂಧಿದೆ. ಆಫ್ರಿಕಾ ದೇಶಗಳು ಈಗಾಗಲೇ ಮಾಡಿಕೊಂಡಿದ್ದ ಖರೀದಿ ಒಪ್ಪಂದದಿಂದ ಹಿಂದೆ ಸರಿಯಬಹುದು ಎಂಬ ಆತಂಕ ಹಿನ್ನೆಲೆಯಲ್ಲಿ, ಪಾಕ್‌ಗೆ ಚೀನಾ ಸಮ್ಸನ್‌ ನೀಡಿದೆ ಎನ್ನಲಾಗಿದೆ.

Ad Widget . Ad Widget .

ಭಾರತದ ವಿರುದ್ಧ ಎಫ್‌ 16 ವಿಮಾನ ಬಳಕೆ ಮೂಲಕ ಅಮೆರಿಕದ ಪೂರೈಕೆ ಒಪ್ಪಂದವನ್ನು ಪಾಕಿಸ್ತಾನ ಉಲ್ಲಂಘನೆ ಮಾಡಿದೆ. ಈ ವಿಮಾನ ಪೂರೈಕೆ ವೇಳೆ ಅದನ್ನು ಉಗ್ರರ ವಿರುದ್ಧ ಮಾತ್ರ ಬಳಸಬೇಕು, ತಾನು ಎಫ್‌ 16 ಪೂರೈಸಿರುವ ಮತ್ತೊಂದು ದೇಶದ ವಿರುದ್ಧ ಅದನ್ನು ಬಳಸಬಾರದು, ಅನಿವಾರ್ಯವಾಗಿ ಬಳಸುವುದೇ ಆದಲ್ಲಿ ತನ್ನ ಪೂರ್ವಾನುಮತಿ ಪಡೆಯಬೇಕು ಎಂಬ ಷರತ್ತನ್ನು ಅಮೆರಿಕ ವಿಧಿಸಿತ್ತು. ಆದರೆ ಇದ್ಯಾವುದನ್ನೂ ಪಾಕಿಸ್ತಾನ ಪೂರೈಸದೇ ಇರುವುದು ಅಮೆರಿಕವನ್ನು ಸಿಟ್ಟಿಗೆಬ್ಬಿಸಿದೆ ಎನ್ನಲಾಗಿದೆ.

Leave a Comment

Your email address will not be published. Required fields are marked *