‘ಆಪರೇಶನ್ ಸಿಂಧೂರ್’ ಬೆಂಬಲಿಸಿ‌ ರಾಜ್ಯ ಸರ್ಕಾರದಿಂದ ತಿರಂಗ ಯಾತ್ರೆ

ಸಮಗ್ರ ನ್ಯೂಸ್: ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತವು ಪಾಕ್ ವಿರುದ್ಧ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ನಡೆಸುತ್ತಿರುವ ಭಾರತೀಯ ಯೋಧರಿಗೆ ಬೆಂಬಲ ಸೂಚಿಸುವ ಹಿನ್ನಲೆ ರಾಜ್ಯ ಕಾಂಗ್ರೆಸ್ ಸರ್ಕಾರ ಬೆಂಗಳೂರು ನಗರದಾದ್ಯಂತ ತಿರಂಗಾ ಯಾತ್ರೆಯನ್ನು ನಡೆಸಿದೆ.

Ad Widget .

ಭಾರತ-ಪಾಕಿಸ್ತಾನ ಉದ್ವಿಗ್ನತೆಯ ನಡುವೆ ಭಾರತೀಯ ಸಶಸ್ತ್ರ ಪಡೆಗಳೊಂದಿಗೆ ಒಗ್ಗಟ್ಟಿನಿಂದಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣದ ಬಳಿಯ ಕೆಆರ್ ವೃತ್ತದಿಂದ ಮಿನ್ಸ್ಕ್ ಚೌಕದವರೆಗೆ ತಿರಂಗಾ ಯಾತ್ರೆ ನಡೆಸಿದ್ದಾರೆ.

Ad Widget . Ad Widget .

ಈ ಬಗ್ಗೆ ಮಾತನಾಡಿದ ಗೃಹ ಸಚಿವ ಜಿ ಪರಮೇಶ್ವರ್, ನಾವೆಲ್ಲರೂ ಭಾರತೀಯ ಸೇನೆಯೊಂದಿಗೆ ಇದ್ದೇವೆ ಎಂಬ ಸಂದೇಶವನ್ನು ಕಳುಹಿಸಲು ಬಯಸುತ್ತೇವೆ. ನೀವು ಯಾವುದೇ ಕ್ರಮ ಕೈಗೊಂಡಿದ್ದರೂ ಅದನ್ನು ಪ್ರಶಂಸಿಸಲಾಗುತ್ತದೆ ಹಾಗೂ ಬೆಂಬಲ ಸೂಚಿಸುತ್ತೇವೆ. ಅದನ್ನು ಸಾಂಕೇತಿಕವಾಗಿ ಹೇಳಲು ಈ ರ್ಯಾಲಿಯನ್ನು ಆಯೋಜಿಸಲಾಗಿದೆ ಎಂದರು.

Leave a Comment

Your email address will not be published. Required fields are marked *