ಸಮಗ್ರ ನ್ಯೂಸ್: ಭಾರತದ ಮೇಲೆ ಪಾಕಿಸ್ತಾನ ತಡರಾತ್ರಿ ಇಂದಲೂ ಕ್ಷಿಪಣಿ ದಾಳಿ ಮತ್ತು ಡ್ರೋನ್ ದಾಳಿ ನಡೆಸುತ್ತಿದೆ ಆದರೆ ಭಾರತ ಮಾತ್ರ ಪಾಕಿಸ್ತಾನದ ಯಾವುದೇ ಡ್ರೋನ್ ಗಳನ್ನು ಗಡಿಯಿಂದ ಒಳಗಡೆ ಪ್ರವೇಶಕ್ಕೆ ಬಿಡದೆ, ಎಲ್ಲ ಡ್ರೋನ್ ಗಳನ್ನು ಹೊಡೆದುರುಳಿಸಿದೆ ಎಂದು ಭಾರತೀಯ ಸೇನೆಯಿಂದ ಮಾಹಿತಿ ಲಭ್ಯವಾಗಿದೆ.
ಭಾರತದ ಮೇಲೆ ಪಾಕಿಸ್ತಾನ ಇದುವರೆಗೂ 50 ಡ್ರೋನ್ ಗಳ ಮೂಲಕ ದಾಳಿ ಮಾಡಿತ್ತು. ಇದೀಗ ಎಲ್ಲಾ 50 ಡ್ರೋನ್ ಗಳನ್ನು ನಿಷ್ಕ್ರಿಯಗೊಳಿಸುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ.
ಪಾಕಿಸ್ತಾನದ ದಾಳಿಗೆ ಭಾರತೀಯ ಸೇನಾಪಡೆ ತಕ್ಕ ಪ್ರತ್ಯುತ್ತರ ನೀಡಿ 50 ಡ್ರೋನ್ ಗಳನ್ನು ನಿಷ್ಕ್ರಿಯಗೊಳಿಸುವಲ್ಲಿ ಯಶಸ್ವಿಯಾಗಿದೆ. ಪಾಕಿಸ್ತಾನದ ಡ್ರೋನ್ ಗಳು ಕಂಪ್ಲೀಟ್ ಆಗಿ ನಿಷ್ಕ್ರಿಯಗೊಂಡಿವೆ ಎಂದು ತಿಳಿದುಬಂದಿದೆ.