ಸಮಗ್ರ ನ್ಯೂಸ್: ಕರ್ನಾಟಕ ಸರ್ಕಾರದ ಸಾಧನೆಯ ಸರಮಾಲೆ ಮುಂದುವರೆದಿದೆ. ಕರ್ನಾಟಕದ ಹಿರಿಮೆಗೆ ಮತ್ತೊಂದು ಗರಿ ಲಭಿಸಿದ್ದು ಹಣಕಾಸು ನಿರ್ವಹಣೆ, ಹಣಕಾಸು ಅಭಿವೃದ್ಧಿ, ಆಡಳಿತ ಮತ್ತು ಸಾಮಾಜಿಕ ಅಭಿವೃದ್ಧಿಯಲ್ಲಿ ದೇಶದಲ್ಲೇ ಕರ್ನಾಟಕಕ್ಕೆ ಮೂರನೇ ಸ್ಥಾನ ದೊರೆತಿದೆ.
ರಾಜ್ಯ ಸರ್ಕಾರದ ದಕ್ಷ ಮತ್ತು ದೂರದೃಷ್ಟಿಯ ಆಡಳಿತದಿಂದಾಗಿ ಕರ್ನಾಟಕದ ಹಿರಿಮೆಗೆ ಮತ್ತೊಂದು ಗರಿ ಸೇರ್ಪಡೆಗೊಂಡಿದೆ.
ರಾಜ್ಯಗಳ ಅಭಿವೃದ್ಧಿ ಸಾಮರ್ಥ್ಯ ಆಧಾರದ ಮೇಲೆ ಕ್ರೆಡಿಟ್ ರೇಟಿಂಗ್ ಏಜೆನ್ಸಿಯಾದ ಕೇರ್‌ಎಡ್ಜ್ ರೇಟಿಂಗ್ಸ್ ಸಿದ್ಧಪಡಿಸಿರುವ ಶ್ರೇಯಾಂಕ ಪಟ್ಟಿಯಲ್ಲಿ ದೇಶದಲ್ಲೇ ಕರ್ನಾಟಕವು ಮೂರನೇ ಸ್ಥಾನ ಪಡೆದುಕೊಂಡಿದೆ. ಹಣಕಾಸು ನಿರ್ವಹಣೆ, ಹಣಕಾಸು ಅಭಿವೃದ್ಧಿ, ಆಡಳಿತ ಮತ್ತು ಸಾಮಾಜಿಕ ಅಭಿವೃದ್ಧಿಯಲ್ಲಿ ಉತ್ತಮ ಸಾಧನೆ ತೋರಿದೆ.