ಸಮಗ್ರ ನ್ಯೂಸ್: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಜೀವ ಬೆದರಿಕೆ ಹಾಕಿ ಇ-ಮೇಲ್ ಕಳುಹಿಸಿದ್ದ ಕಿಡಿಗೇಡಿಯನ್ನು ವಿಧಾನಸೌಧ ಠಾಣೆ ಪೋಲೀಸರು ಮಂಗಳವಾರ ವಶಕ್ಕೆ ಪಡೆದುಕೊಂಡಿದ್ದಾರೆ.
ಸಿಂಧೂರ್ ರಜಪೂತ್ ಹೆಸರಿನಲ್ಲಿ ಮಂಗಳವಾರ ಆರೋಪಿ ಇ-ಮೇಲ್ ಕಳುಹಿಸಿದ್ದು, ತಾಂತ್ರಿಕ ಮಾಹಿತಿ ಆಧರಿಸಿ ಆತನನ್ನು ಪತ್ತೆ ಮಾಡಿದ ಪೊಲೀಸರು ಠಾಣೆಗೆ ಕರೆತಂದಿದ್ದಾರೆ.
ಹೆಚ್ಚಿನ ವಿವರಗಳನ್ನು ಪೊಲೀಸರು ಬಹಿರಂಗಪಡಿಸಿಲ್ಲ. ಹಣಕಾಸು ವಿಚಾರವಾಗಿ ಸ್ನೇಹಿತನೊಂದಿಗೆ ಮನಸ್ತಾಪ ಹೊಂದಿದ್ದ ಆರೋಪಿ ಇದರಿಂದ ಬೇಸತ್ತು ಸಿಎಂ ಮತ್ತು ಡಿಸಿಎಂಗೆ ಜೀವ ಬೆದರಿಕೆ ಇ-ಮೇಲ್ ಕಳುಹಿಸಿ ಕುಚೋದ್ಯ ಮಾಡಿದ್ದಾನೆ. ಸಿಎಂ ಮತ್ತು ಡಿಸಿಎಂ ಅವರನ್ನು ತುಂಡು ತುಂಡಾಗಿ ಕತ್ತರಿಸಿ ಟ್ರ್ಯಾಲಿ ಬ್ಯಾಗಿನಲ್ಲಿ ತುಂಬಿ ಫ್ರಿಜ್ ನಲ್ಲಿ ಇಡುವುದಾಗಿ ಆರೋಪಿ ಬೆದರಿಸಿದ್ದ ಎಂದು ಹೇಳಲಾಗಿತ್ತು.