ಸಮಗ್ರ ನ್ಯೂಸ್: ಮಚ್ಚು ಹಿಡಿದು ರೀಲ್ಸ್ ಮಾಡಿ ಜೈಲಿಗೆ ಹೋಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಬಾಸ್ ಮಾಜಿ ಸ್ಪರ್ಧಿ ರಜತ್ ಕಿಶನ್ ನನ್ನು ಪೊಲೀಸರು ಮತ್ತೆ ಬಂಧಿಸಿರುವ ಬೆನ್ನಲ್ಲೇ ವಿನಯ್ ಗೌಡಗೂ ಸಂಕಷ್ಟ ಎದುರಾಗಿದೆ.
ಮಚ್ಚು ಹಿಡಿದು ರೀಲ್ಸ್ ಮಾಡಿದ್ದ ಪ್ರಕರಣದಲ್ಲಿ ಕೋರ್ಟ್ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರೂ ವಿನಯ್ ಗೌಡ ಕೂಡ ಕೋರ್ಟ್ ಗೆ ಹಾಜರಾಗದೇ ಗೈರಾಗಿದ್ದಾರೆ.
ಮಚ್ಚು ಹಿಡಿದು ರೀಲ್ಸ್ ಮಾಡಿ ಜೈಲು ಸೇರಿದ್ದ ವಿನಯ್ ಗೌಡ ಹಾಗೂ ರಜತ್ ಜಾಮೀನು ಮೇಲೆ ಬಿಡುಗಡೆಯಾಗಿದ್ದರು. ಜಾಮೀನು ವೇಳೆ ನ್ಯಾಯಾಲಯ ಇಬ್ಬರಿಗೂ ವಿಚಾರಣೆಗೆ ಹಾಜರಾಗಲು ಷರತ್ತು ವಿಧಿಸಿತ್ತು. ಕೋರ್ಟ್ ಷರತ್ತು ಉಲ್ಲಂಘನೆ ಮಾಡಿ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ನ್ಯಾಯಾಲಯ ಇಬ್ಬರ ವಿರುದ್ಧ ಬಂಧನ ವಾರೆಂಟ್ ಜಾರಿ ಮಾಡಿದೆ.
ಕೋರ್ಟ್ ಆದೇಶದಮೇರೆಗೆ ಪೊಲೀಸರು ಮತ್ತೊಮ್ಮೆ ರಜತ್ನ ಬಂಧಿಸಿದ್ದಾರೆ. ಅವರನ್ನು 24ನೇ ಎಸಿಜೆಎಂ ಕೋರ್ಟ್ಗೆ ಪೊಲೀಸರು ಹಾಜರುಪಡಿಸಲಿದ್ದಾರೆ. ಈ ಬಗ್ಗೆ ಕೋರ್ಟ್ ಯಾವ ರೀತಿಯ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ನೋಡಬೇಕಿದೆ.
ಈ ಪ್ರಕರಣದಲ್ಲಿ ವಿನಯ್ ಅವರನ್ನು ಕೂಡ ಬಂಧಿಸೋ ಸಾಧ್ಯತೆ ಇದೆ. ಸದ್ಯ ವಿನಯ್ ಮನೆಗೆ ತೆರಳಿದ್ದು, ಶೀಘ್ರವೇ ಅವರನ್ನು ಕೂಡ ಬಂಧಿಸೋ ಸಾಧ್ಯತೆ ಇದೆ.