ಸಮಗ್ರ ನ್ಯೂಸ್: ನೈಟ್ ಕ್ಲಬ್ ವೊಂದರ ಮೇಲ್ಛಾವಣಿ ಕುಸಿದ ಪರಿಣಾಮ 79ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದು, ನೂರೈವತ್ತು ಕ್ಕೂ ಹೆಚ್ಚು ಜನರಿಗೆ ಗಾಯಗಳಾದ ಘಟನೆ ನ್ಯೂಯಾರ್ಕ್ ನ ಡೊಮಿನಿಕನ್ ರಿಪಬ್ಲಿಕ್ ನಲ್ಲಿ ನಡೆದಿದೆ.
ರಾಜಧಾನಿ ಸ್ಯಾಂಟೊ ಡೊಮಿಂಗೊದ ನೈಟ್ ಕ್ಲಬ್ ನಲ್ಲಿ ಸಂಗೀತ ಪ್ರದರ್ಶನದ ವೇಳೆ ಕ್ಲಬ್ ನ ಮೇಲ್ಛಾವಣಿ ಏಕಾಏಕಿ ಕುಸಿದು ಬಂದಿದ್ದು, ಈ ವೇಳೆ ಕ್ಲಬ್ ನಲ್ಲಿ ಸುಮಾರು 300 ಜನರಿದ್ದರು ಎನ್ನಲಾಗಿದೆ.
ಸದ್ಯ 150ಕ್ಕೂ ಹೆಚ್ಚು ಗಾಯಗೊಂಡವರನ್ನು ಆಸ್ಪತ್ರೆಗೆ ಸ್ಥಳಾಂತರಿಸಿದ್ದು, 79 ಜನರ ಮೃತದೇಹವನ್ನು ಹೊರಕ್ಕೆ ತೆಗೆಯಲಾಗಿದೆ.
ಇವೊಂದು ಸಂಗೀತ ಕಾರ್ಯಕ್ರಮದಲ್ಲಿ ಕ್ರೀಡಾಪಟುಗಳು, ರಾಜಕಾರಣಿಗಳು ಸೇರಿದಂತೆ ಮುನ್ನೂರಕ್ಕೂ ಹೆಚ್ಚು ಜನ ಸೇರಿದ್ದರು ಎನ್ನಲಾಗಿದ್ದು, ಇನ್ನು ಕೂಡ ಅವಶೇಷಗಳ ಅಡಿಯಲ್ಲಿ ಸಿಕ್ಕಿಕೊಂಡವರಿಗಾಗಿ ಶೋಧ ಕಾರ್ಯ ನಡೆಯುತ್ತಲೇ ಇದೆ.
ಈ ಬಗ್ಗೆ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದು, ಈ ದುರಂತದಲ್ಲಿ ಇನ್ನ ಕೂಡ ಹಲವಾರು ಮಂದಿ ಜೀವಂತವಾಗಿದ್ದಾರೆ ಎಂದು ನಾವು ಭಾವಿಸುತ್ತೇವೆ, ಮತ್ತು ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಪ್ರತಿಯೊಬ್ಬರನ್ನೂ ಕೂಡ ರಕ್ಷಣೆ ಮಾಡಿ ಹೊರತೆಗೆಯುತ್ತೇವೆ ಎಂದು ಹೇಳಿದರು.