ಸಮಗ್ರ ನ್ಯೂಸ್: ‘ನೀನು ಚನ್ನಾಗಿದ್ದೀಯಾ. ಗುಡ್ಡೆಗೆ ಬರುತ್ತೀಯ?’ ಎಂದು ಅಪ್ರಾಪ್ತೆ ವಯಸ್ಸಿನ ಬಾಲಕಿ ಜೊತೆ ಅನುಚಿತ ವರ್ತನೆ ಮಾಡಿದವನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ. 15 ವರ್ಷದ ಬಾಲಕಿ ಜೊತೆ ಅನುಚಿತ ವರ್ತಿಸಿದ ಮಹೇಶ್ ಭಟ್ ಎನ್ನುವಾತನ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ವಿಟ್ಲ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಹಾಗೂ ಜಾತಿನಿಂದನೆ ದೂರು ದಾಖಲಾಗಿದೆ. ಜನವರಿ 12ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಿಕಿಗೆ ಬಂದಿದೆ.
ಜನವರಿ 12ರಂದು ತಂದೆ ಕೆಲಸ ಮಾಡುವ ತೋಟಕ್ಕೆ ಹೋಗಿದ್ದ ಬಾಲಕಿ ಸಹ ಹೋಗಿದ್ದಳು. ಆ ವೇಳೆ ತೋಟದ ಮಾಲೀಕ ಮಹೇಶ್ ಭಟ್ ‘ನೀನು ಚನ್ನಾಗಿದ್ದಿಯಾ. ನಾನು ಇಷ್ಟ ಇದ್ದೀನಾ. ಗುಡ್ಡೆಗೆ ಬರ್ತೀಯಾ’ ಎಂದು ಬಾಲಕಿಗೆ ಕೇಳಿದ್ದಾನೆ. ಆದ್ರೆ, ಬಾಲಕಿ ಇದಕ್ಕೆ ನಿರಾಕರಿಸಿ ಮನೆಗೆ ಹೋಗಿದ್ದಾಳೆ. ಬಳಿಕ ತೋಟದ ಮಾಲೀಕ ಮಹೇಶ್ ಭಟ್ನ ಅನುಚಿತ ವರ್ತನೆ ಬಗ್ಗೆ ಬಾಲಕಿ ತನ್ನ ಪೋಷಕರಿಗೆ ತಿಳಿಸಿದ್ದಾಳೆ. ಬಳಿಕ ಪೋಷಕರು ಪೊಲೀಸ್ ಮೆಟ್ಟಿಲೇರಿದ್ದಾರೆ.
ಇದೀಗ ಈ ಸಂಬಂಧ ತೋಟದ ಮಾಲೀಕ ಮಹೇಶ್ ಭಟ್ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಹಾಗೂ ಜಾತಿನಿಂದನೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.