ಸಮಗ್ರ ನ್ಯೂಸ್ : ಹಣಕ್ಕಾಗಿ ಪತ್ನಿ ಮತ್ತು ಆಕೆಯ ಕುಟುಂಬಸ್ಥರು ನನಗೆ ಮಾನಸಿಕವಾಗಿ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದಾರೆ ಎಂದು ಟೆಕ್ಕಿ ಶ್ರೀಕಾಂತ್ ಎಂಬವರು ಆರೋಪ ಮಾಡಿದ್ದಾರೆ. ಪತಿ ಶ್ರೀಕಾಂತ್ ಪತ್ನಿ ಬಿಂದುಶ್ರೀ ವಿರುದ್ಧ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.
ಬಿಂದುಶ್ರೀಯನ್ನು 2022ರ ಆಗಸ್ಟ್ನಲ್ಲಿ ವಿವಾಹವಾಗಿದ್ದೇನೆ. ಮದುವೆಯಾಗಿ ಎರಡು ವರ್ಷಗಳಾದರೂ ಸಹ ಒಂದು ದಿನ ಸರಿಯಾಗಿ ಸಂಸಾರ ಮಾಡಿಲ್ಲ. ಬಲವಂತವಾಗಿ ಮುಟ್ಟಿದರೆ ಡೆತ್ನೋಟ್ ಬರೆದಿಟ್ಟು ಸಾಯುತ್ತೇನೆ ಅಂತ ಬ್ಲಾಕ್ ಮೇಲ್ ಮಾಡುತ್ತಾರೆ. ಹಣಕ್ಕಾಗಿ ದೈಹಿಕವಾಗಿ ಹಲ್ಲೆ ಮಾಡಿದ್ದಾರೆ. ಮತ್ತು ಮರ್ಮಾಂಗಕ್ಕೆ ಒದ್ದು ಕೊಲ್ಲಲು ಪ್ರಯತ್ನಿಸಿದ್ದಾರೆ. ಪತ್ನಿ ಮನೆಯವರು ಮನೆ ಕೊಂಡುಕೊಳ್ಳಲು ಲಕ್ಷಾಂತರ ರೂ. ಹಣ ಕೇಳಿದ್ದರು. ಹಣ ನೀಡದಿದ್ದಕ್ಕೆ ಪತ್ನಿ ಕಡೆಯಿಂದ ಕಿರುಕುಳ ಕೊಡುಸುತ್ತಿದ್ದಾರೆ. ನೀನು ಸರಿ ಹೋಗುವವರೆಗೂ ನಿನ್ನ ಪಕ್ಕ ಬರಲ್ಲ. ಹೀಗಾಗಿ, 60 ವರ್ಷ ಆದ್ಮೇಲೆ ಮಕ್ಕಳು ಮಾಡಿಕೊಳ್ಳೋಣ” ಎಂದು ಶ್ರೀಕಾಂತ ಪತ್ನಿ ಬಿಂದುಶ್ರೀ ಮತ್ತು ಅವರ ಕುಟುಂಬಸ್ಥರ ವಿರುದ್ಧ ಆರೋಪ ಮಾಡಿದ್ದಾರೆ.
ಶ್ರೀಕಾಂತ್ ಖಾಸಗಿ ಕಂಪನಿವೊಂದರಲ್ಲಿ ಸಾಫ್ಟವೇರ್ ಉದ್ಯೋಗಿಯಾಗಿದ್ದರು ಇವರಿಗೆ ವರ್ಕ್ ಫ್ರಮ್ ಹೋಮ್ ವೇಳೆ ಪತ್ನಿಯ ಕಿರುಕುಳದಿಂದ ಶ್ರೀಕಾಂತ್ ಕೆಲಸ ಕಳೆದುಕೊಂಡಿದ್ದಾರಂತೆ. ಮೀಟಿಂಗ್ ವೇಳೆ ಬಂದು ಜಗಳ, ಡ್ಯಾನ್ಸ್ ಮಾಡುತ್ತಾಳೆ. ವಿಚ್ಛೇದನ ಕೇಳಿದರೆ 45 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಶ್ರೀಕಾಂತ್ ಪತ್ನಿ ವಿರುದ್ಧ ಆರೋಪಿಸಿದ್ದಾರೆ. ಪೊಲೀಸರು ಬಿಂದುಶ್ರೀ ಹೇಳಿಕೆ ಪಡೆದುಕೊಂಡಿದ್ದು, “ಆತನ ಜೊತೆ ಬಾಳಲು ಇಷ್ಟ ಇಲ್ಲ, ಇಬ್ಬರಿಗೂ ಸರಿಹೊಂದಲ್ಲ ಎಂದು ಹೇಳಿದ್ದಾರೆ. ಇದೀಗ ಪ್ರಕರಣ ತನಿಖೆಯಲ್ಲಿದೆ.