9 ತಿಂಗಳುಗಳ ಬಳಿಕ ಭೂಮಿಗೆ ಬಂದ ಸುನಿತಾ ವಿಲಿಯಮ್ಸ್

ಸಮಗ್ರ ನ್ಯೂಸ್ : ಒಂಭತ್ತು ತಿಂಗಳಿನಿಂದ ಬಾಹ್ಯಾಕಾಶ ನಿಲ್ದಾಣ(ಐಎಸ್ಎಸ್)ದಲ್ಲಿ ಸಿಲುಕಿಕೊಂಡಿದ್ದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಸೇರಿದಂತೆ ನಾಲ್ವರು ಗಗನಯಾತ್ರಿಗಳು ಭಾರತೀಯ ಕಾಲಮಾನ ಬುಧವಾರ ಮುಂಜಾನೆ 3.27ಕ್ಕೆ ಫ್ಲಾರಿಡಾದ ಕಡಲ ತೀರಕ್ಕೆ ಬಂದಿಳಿದಿದ್ದಾರೆ.

Ad Widget .

ಇಬ್ಬರೂ ಕಳೆದ ವರ್ಷ ಜೂನ್‌ನಲ್ಲಿ ಬಾಹ್ಯಾಕಾಶಕ್ಕೆ ಪಯಣಿಸಿದ್ದರು. ತಾಂತ್ರಿಕ ತೊಂದರೆಗಳು ಮತ್ತು ವೇಳಾಪಟ್ಟಿಯಲ್ಲಿನ ಬದಲಾವಣೆಗಳಿಂದಾಗಿ ಅವರ ಮರಳುವಿಕೆ ವಿಳಂಬವಾಗಿತ್ತು. ಕೆಲವೇ ದಿನಗಳ ಈ ಕಾರ್ಯಾಚರಣೆ 9 ತಿಂಗಳಿಗೆ ವಿಸ್ತರಣೆಗೊಂಡಿತ್ತು. ಕೇವಲ ಒಂದು ವಾರದ ಮಟ್ಟಿಗೆ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರು ಅಲ್ಲಿಗೆ ಪ್ರಯಾಣಿಸಿದ್ದರು. ಆದರೆ, ಅವರಿದ್ದ ಬೋಯಿಂಗ್ ಸ್ಟಾರ್‌ಲೈನರ್ ನೌಕೆಯಲ್ಲಿ ದೋಷ ಕಂಡುಬಂದಿತ್ತು. ಇದರಿಂದಾಗಿ ಸುನೀತಾ ಮತ್ತವರ ಸಹ ಗಗನಯಾತ್ರಿಗಳು ನೌಕೆಯ ಮೂಲಕ ಹಿಂತಿರುಗುವುದು ಅಪಾಯ ಎಂದು ನಾಸಾ ತಿಳಿಸಿತ್ತು. ಇದೀಗ ಎಲ್ಲವೂ ಸಕ್ಸಸ್ ಆಗಿದ್ದು. ಇವರಿಬ್ಬರೂ ಮರಳಿದ್ದಾರೆ.

Ad Widget . Ad Widget .

ಸುನಿತಾ ವಿಲಿಯಮ್ಸ್ ಹಿನ್ನೆಲೆ

ಸುನೀತಾ ಅವರು ಭಾರತದ ಮೂಲದವರೇ. 60 ವರ್ಷದ ಸುನಿತಾ ಅವರ ಮೊದಲ ಹೆಸರು ಸುನೀತಾ ಪಾಂಡ್ಯ. ಅವರ ತಂದೆ ಭಾರತದ ಗುಜರಾತ್‌ ಮೂಲದವರು. ಬಹುತೇಕ ಶತಮಾನದ ಹಿಂದೆಯೇ ಅವರು ಭಾರತದಿಂದ ಅಮೆರಿಕಕ್ಕೆ ಹೋದವರು. ಅಮೆರಿಕದವರನ್ನೇ ಮದುವೆಯಾಗಿ ಅಲ್ಲಿನ ನಿವಾಸಿಯೇ ಆಗಿಬಿಟ್ಟರು. ಅಮೆರಿಕದಲ್ಲಿಯೇ ಜನಿಸಿ ಅಲ್ಲಿಯೇ ಇದು ದೊಡ್ಡ ಹೆಸರು ಮಾಡಿದ ಸುನೀತಾ ಭಾರತ ಮೂಲದವರೆಂಬ ಹೆಮ್ಮೆ. ಬಾಹ್ಯಾಕಾಶಕ್ಕೆ ಹೋದ ಭಾರತೀಯ ಹಿನ್ನೆಲೆಯ ಎರಡನೇ ಅಮೆರಿಕ ಗಗನಯಾತ್ರಿ. ಕಲ್ಪನಾ ಚಾವ್ಲಾ ಮೊದಲಿಗರು. 2003ರಲ್ಲಿ ಬಾಹ್ಯಾಕಾಶದಿಂದ ಭೂಮಿಗೆ ಹಿಂತಿರುಗುತ್ತಿದ್ದಾಗ ಕೊಲಂಬಿಯಾ ಬಾಹ್ಯಾಕಾಶ ನೌಕೆ ಮುರಿದು ಬಿದ್ದು ಅವರು ನಿಧನರಾದರು. ವಿಲಿಯಮ್ಸ್ 2006 ಮತ್ತು 2012 ರಲ್ಲಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ISS) ತನ್ನ ಎರಡು ಬಾರಿಯ ಯಶಸ್ವಿ ಭೇಟಿಯ ದಾಖಲೆಗಳನ್ನು ನಿರ್ಮಿಸಿದ್ದಾರೆ.

Leave a Comment

Your email address will not be published. Required fields are marked *