ಸಮಗ್ರ ನ್ಯೂಸ್: ಉರಿ ಬಿಸಿಲು, ವಿಪರೀತ ತಾಪಮಾನದಿಂದ ಕಂಗೆಟ್ಟಿದ್ದ ಜನತೆಗೆ ಮಳೆರಾಯ ತಂಪೆರೆದಿದ್ದಾನೆ. ಆದರೆ ಒಂದೇ ಬಾರಿಗೆ ಭಾರಿಗೆ ಬಿರಾಗಾಳಿ ಸಹಿತ ಮಳೆಯಿಂದ ಹಲವು ಅವಾಂತರಗಳು ಸೃಷ್ಟಿಯಾಗಿದೆ. ಕರ್ನಾಟಕದ ಹಲವು ಭಾಗದಲ್ಲಿ ಭಾರಿ ಮಳೆಯಾಗಿದೆ. ಗುಡುಗು, ಬಿರುಗಾಳಿ ಸಹಿತ ಮಳೆಗೆ ಹಲವು ಮರಗಳು ಧರೆಗುರುಳಿದೆ.
ವಿದ್ಯುತ್ ಕಂಬಗಳು ಧರೆಗುಳಿ ಹಲವು ತಾಲೂಕುಗಳು ಕತ್ತಲಲ್ಲಿ ಮುಳುಗಿದೆ. ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ತುಮಕೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ.
ದಕ್ಷಿಣ ಕನ್ನಡದ ಬೆಳ್ತಂಗಡಿ ತಾಲೂಕು ಸೇರಿದಂತೆ ಹಲವು ತಾಲುಕುಗಳಲ್ಲಿ ಭಾರಿ ಮಳೆಯಾಗಿ ಮರಗಳು ಧರೆಗುರುಳಿದೆ. ಇದರ ಪರಿಣಾಮ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ರಸ್ತೆಯಲ್ಲಿ ನೀರು ತುಂಬಿ ಹರಿಯುತ್ತಿದೆ. ಇನ್ನು ಹಲವು ಮರಗಳು ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಇದರ ಪರಿಣಾಮ ವಾಹನ ಸವಾರರು ಪರದಾಡುವಂತಾಗಿದೆ. ಸಂಜೆ ಏಕಾಏಕಿ ಸುರಿದ ಮಳೆಯಿಂದ ತಯಾರಿ ಇಲ್ಲದೆ ಸಾಗುತ್ತಿದ್ದ ವಾಹನ ಸವಾರರು ಮಳೆಯಲ್ಲಿ ಸಿಲುಕಿಕೊಂಡಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸುರಿದ ಭಾರಿ ಮಳೆಗೆ ಅವಾಂತರ ಸೃಷ್ಟಿಯಾಗಿದೆ ಕಳಸ ತಾಲೂಕಿನ ಹಿರೇಬೈಲ್ ಗ್ರಾಮದ ಬಳಿ ಕಾರಿನ ಮೇಲೆ ಮರ ಬಿದ್ದಿದೆ. ಕಳಸದಿಂದ ಬೆಂಗಳೂರಿಗೆ ತೆರಳುತ್ತಿದ್ದ ಕಾರಿನ ಮೇಲೆ ಮರ ಬಿದ್ದಿದೆ. ಅದೃಷ್ಠವಶಾತ್ ಕಾರು ಚಾಲಕ ಪ್ರಾಣಾಪಾಯದಿಂದ ಪಾರಾಗದ್ದಾನೆ. ಕಾರಿನ ಹಿಂದಿನ ಗ್ಲಾಸ್ ಸಂಪೂರ್ಣ ಪುಡಿಯಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ತುಮಕೂರಿನಲ್ಲಿ ಭಾರಿ ಮಳೆಯಿಂದ ರಸ್ತೆಗಳು ತುಂಬಿದೆ. ತುಮಕೂರಿನ ಔಟರ್ ರಿಂಗ್ ರೋಡ್ ಬ್ರಿಡ್ಜ್ ಕೆಳಗೆ ಸಂಚರಿಸಲು ಸಾರ್ವಜನಿಕರು ಪರದಾಡಿದ್ದಾರೆ. ಮಳೆಯಿಂದಾಗ ಬ್ರಿಡ್ಜ್ ಕೆಳಗೆ ತುಂಬಿಕೊಂಡಿರುವ ನೀರು. ಈ ರಸ್ತೆಯಲ್ಲಿ ಸಾಗಿದ ಹಲವು ವಾಹನಗಳು ಕೆಟ್ಟು ನಿಂತಿದೆ. ಇದರಿಂದ ಭಾರಿ ಟ್ರಾಫಿಕ್ ಜಾಮ್ ಸಂಭವಿಸಿದೆ.
ಹಾಸನ ಜಿಲ್ಲೆಯ ವಿವಿಧೆಡೆ ಬಿರುಗಾಳಿ ಸಹಿತ ಧಾರಾಕಾಳ ಮಳೆಯಾಗಿದೆ. ಬಿರುಗಾಳಿಗೆ ಹಲವು ಮರಗಳು ಧರೆಗುರುಳಿದೆ. ಹಾಸನ ನಗರ, ಶಂಕರಮಠ ಸೇರಿದಂತೆ ಹಲವೆಡೆ ಮಳೆಯಿಂದಾಗಿ ಮರಗಳು ಬಿದ್ದಿದೆ. ಆದರೆ ಅನಾಹುತವಾಗಿರುವುದ ವರದಿಯಾಗಿಲ್ಲ.