Ad Widget .

ಮಂಗಳೂರು: ಶವದಿಂದಲೇ ಡೈಮಂಡ್ ರಿಂಗ್ ಕಳ್ಳತನ|ಆಸ್ಪತ್ರೆಯಲ್ಲಿದ್ದ ಸೆಕ್ಯುರಿಟಿಯ ಸುತ್ತ ಬೆಳೆದ ಅನುಮಾನದ ಹುತ್ತ…!

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

Ad Widget . Ad Widget . Ad Widget .

ಮಂಗಳೂರು: ಹೃದಯಾಘಾತಕ್ಕೊಳಗಾಗಿ ನಿಧನರಾಗಿದ್ದ ವ್ಯಕ್ತಿಯೋರ್ವರ ಮೃತದೇಹವನ್ನು ರಾತ್ರಿ ಬೆಂದೂರು ವೆಲ್ ಕೊಲೊಸೊ ಆಸ್ಪತ್ರೆಯಲ್ಲಿ ಇಡಲಾಗಿತ್ತು. ಆದರೆ, ಇಂದು ಬೆಳಗ್ಗೆ ನೋಡಿದಾಗ ಹರೀಶ್ ಶೆಟ್ಟಿ ಅವರ ಕಿವಿಯಲ್ಲಿದ್ದ ಡೈಮಂಡ್ ರಿಂಗ್ ಕಾಣೆಯಾದ ಬಗ್ಗೆ ಬೆಳಕಿಗೆ ಬಂದಿದೆ.
ಸಿಟಿ ಸೆಂಟರ್ ಮಾಲ್‍ನಲ್ಲಿ ಸೆಕ್ಯುರಿಟಿ ವಿಭಾಗದಲ್ಲಿ ಮ್ಯಾನೇಜರ್ ಆಗಿದ್ದ ಹರೀಶ್ ಶೆಟ್ಟಿ (42) ಮೃತ ಪಟ್ಟವರು.

ಇವರು ನಿನ್ನೆ ಬೆಳಗ್ಗೆ ತನ್ನ ಪತ್ನಿ, ಮಕ್ಕಳೊಂದಿಗೆ ಕುಂದಾಪುರಕ್ಕೆ ತೆರಳಿದ್ದರು. ಮಧ್ಯಾಹ್ನ ಹೊಟೇಲ್ ಒಂದರಲ್ಲಿ ಊಟ ಮಾಡುತ್ತಿದ್ದಾಗ ದಿಢೀರ್ ಆಗಿ ಕುಸಿದು ಬಿದ್ದಿದ್ದರು. ಬಳಿಕ ಅವರನ್ನು ಸ್ಥಳೀಯರು ಸೇರಿ ಅಲ್ಲಿನ ಆಸ್ಪತ್ರೆಗೆ ಒಯ್ದಿದ್ದರು. ವೈದ್ಯರು ಪರಿಶೀಲಿಸಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾಗಿ ತಿಳಿಸಿದ್ದಾರೆ.
ನಿನ್ನೆ ಸಂಜೆ ಏಳು ಗಂಟೆ ಸುಮಾರಿಗೆ ಹರೀಶ್ ಶೆಟ್ಟಿ ಮೃತದೇಹವನ್ನು ಬೆಂದೂರುವೆಲ್ ನಲ್ಲಿರುವ ಕೊಲಾಸೊ ಆಸ್ಪತ್ರೆಯ ಶವಾಗಾರಕ್ಕೆ ತಂದಿರಿಸಲಾಗಿತ್ತು. ಈ ವೇಳೆ, ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ತೆಗೆದಿರಿಸಿದ್ದು, ಎರಡೂ ಕಿವಿಯಲ್ಲಿದ್ದ ಡೈಮಂಡ್ ರಿಂಗನ್ನು ತೆಗೆದಿರಲಿಲ್ಲ. ಪತ್ನಿ ಪ್ರೀತಿಯಿಂದ ನೀಡಿದ್ದ ಕಾಣಿಕೆ ಆಗಿದ್ದರಿಂದ ಅಂತ್ಯಕ್ರಿಯೆ ವೇಳೆ ತೆಗೆಯೋಣ ಎಂದು ಹಾಗೆಯೇ ಬಿಟ್ಟಿದ್ದರು. ಅಲ್ಲದೆ, ಈ ಬಗ್ಗೆ ಶವಾಗಾರದಲ್ಲಿದ್ದ ಸೆಕ್ಯುರಿಟಿ ಸಿಬ್ಬಂದಿಗೆ ತಿಳಿಸಿಯೇ ಶವ ಇಟ್ಟಿದ್ದರು.

ಆದರೆ, ಇಂದು ಬೆಳಗ್ಗೆ ಏಳು ಗಂಟೆಗೆ ಶವ ಹೊರತೆಗೆದಾಗ ಕಿವಿಯಲ್ಲಿದ್ದ ಡೈಮಂಡ್ ರಿಂಗ್ ಇರಲಿಲ್ಲ. ಈ ಬಗ್ಗೆ ಸೆಕ್ಯುರಿಟಿ ಸ್ಟಾಫ್ ಬಳಿ ಕೇಳಿದಾಗ, ನಮಗೇನೂ ಗೊತ್ತಿಲ್ಲ. ದೇವರಾಣೆ ನಾವೇನು ತೆಗೆದಿಲ್ಲ ಎಂದಿದ್ದಾರೆ. ಅದೇ ವೇಳೆ, ಅಲ್ಲಿದ್ದ ಸೆಕ್ಯುರಿಟಿಯ ಪತ್ನಿ (ಅಲ್ಲಿಯೇ ಕೆಲಸ ಮಾಡುವುದು) ಯಾರಾದ್ರೂ ತೆಗೆದಿರಬಹುದು, ನೀವ್ಯಾಕೆ ನಮ್ಮ ಮೇಲೆ ಸಂಶಯ ಪಡುತ್ತೀರಿ. ಆಮೇಲೆ ಕೂಡ ಕೆಲವರು ಬಂದು ಶವ ನೋಡಿದ್ದಾರೆ ಎಂದಿದ್ದಾರೆ. ರಾತ್ರಿ ವೇಳೆ ಯಾರು ಕೂಡ ಶವ ನೋಡಲು ಹೋಗಿಲ್ಲವಾದರೂ, ಶವ ನೋಡಲು ಬಂದಿದ್ದಾಗಿ ಸೆಕ್ಯುರಿಟಿ ಸಿಬ್ಬಂದಿ ಸಮಜಾಯಿಷಿ ನೀಡಲು ಯತ್ನಿಸಿದ್ದಾರೆ.
ಬೆಳಗ್ಗೆ ಶವ ಹೊರ ತೆಗೆಯುವ ವೇಳೆ ಈ ಬಗ್ಗೆ ಹೆಚ್ಚು ಪ್ರಶ್ನೆ ಮಾಡಲು ಹೋಗಿಲ್ಲ. ಜೊತೆಗಿದ್ದ ಆಪ್ತನೇ ಮೃತಪಟ್ಟಿದ್ದರಿಂದ ನಾವೆಲ್ಲ ದುಃಖದಲ್ಲಿದ್ದೆವು. ಶವ ಒಯ್ಯುವ ಸಂದರ್ಭದಲ್ಲಿ ಗಲಾಟೆ ಮಾಡುವುದೂ ಸರಿಯಾಗಲ್ಲ. ಈ ಬಗ್ಗೆ ಕದ್ರಿ ಪೆÇಲೀಸ್ ಠಾಣೆಗೆ ಮಾಹಿತಿ ನೀಡಿದ್ದೇವೆ. ಶವಾಗಾರದಲ್ಲಿ ಇಟ್ಟಿದ್ದ ಹೆಣದಿಂದಲೂ ಡೈಮಂಡ್ ರಿಂಗ್ ಕದ್ದಿರುವುದು ನೋಡಿದರೆ, ಅಲ್ಲಿ ಯಾವತ್ತೂ ಇದೇ ರೀತಿ ಕಳವು ನಡೆಸಿರುವ ಸಾಧ್ಯತೆಯಿದೆ. ಶವ ಒಯ್ಯುವ ಗಡಿಬಿಡಿಯ ನಡುವೆ ಈ ವಿಚಾರವನ್ನು ಹೆಚ್ಚಾಗಿ ಮರೆತು ಬಿಡುತ್ತಾರೆ.

ಆದರೆ ಯಾರು ಕೂಡ ಈ ರೀತಿ ಮಾಡಬಾರದು ಎಂದು ಹರೀಶ್ ಶೆಟ್ಟಿಯ ಆಪ್ತರೊಬ್ಬರು ಮಾಧ್ಯಮಯೊಂದಕ್ಕೆ ಕರೆ ಮಾಡಿ, ಕೊಲಾಸೊ ಆಸ್ಪತ್ರೆಯಲ್ಲಿ ಆಗಿರುವ ಕಳ್ಳತನದ ಬಗ್ಗೆ ಮಾಹಿತಿ ನೀಡಿದ್ದಾರೆ. ಡೈಮಂಡ್ ರಿಂಗನ್ನು ಹಾಕ್ಕೊಂಡಿದ್ದರು. ಪಡೀಲಿನ ನಿವಾಸಿಯಾಗಿದ್ದ ಹರೀಶ್ ಶೆಟ್ಟಿ ಆನಂತರ ಪತ್ನಿ ಜೊತೆ ಬಲ್ಲಾಳ್ ಬಾಗ್ ನಲ್ಲಿ ಫ್ಲಾಟ್ ಒಂದರಲ್ಲಿ ನೆಲೆಸಿದ್ದರು.

Leave a Comment

Your email address will not be published. Required fields are marked *