ಸಮಗ್ರ ನ್ಯೂಸ್ : ನಟಿ ಶುಭ ಪೂಂಜಾ ತಾಯಿ ಇನ್ನಿಲ್ಲ. ಮಾರ್ಚ್ 6ರಂದು ಅವರು ತಾಯಿ ಅಗಲಿದ್ದಾರೆ. ‘ಅಮ್ಮ ನನ್ನ ನೀನು ಯಾಕೆ ಬಿಟ್ಟು ಹೋದೆ, ನೀನು ಇಲ್ಲದೇ ನನಗೆ ಜೀವನವಿಲ್ಲ’ ಎಂದು ಶುಭ ಪೂಂಜಾ ಭಾವುಕವಾಗಿ ಬರೆದುಕೊಂಡಿದ್ದಾರೆ.
ನಿನ್ನ ಬಿಟ್ಟು ನನಗೆ ಬದುಕಲು ಸಾಧ್ಯವಿಲ್ಲ. 24 ಗಂಟೆ ನಿನ್ನ ಜೊತೆ ಇರುತ್ತಿದ್ದೆ. ಈಗ ನಾನು ಏನು ಮಾಡಲಿ? ಎಲ್ಲಿ ಹೋಗಲಿ? ಯಾರಿಗೋಸ್ಕರ ವಾಪಸ್ಸು ಮನೆಗೆ ಬರಲಿ’ ಎಂದು ಶುಭಾ ಪೂಂಜಾ ಅವರು ಪೋಸ್ಟ್ ಮಾಡಿದ್ದಾರೆ. ನೀನು ನನ್ನ ಯಾಕೆ ಬಿಟ್ಟು ಹೋದೆ? ನನ್ನ ಇಡೀ ಜೀವನಕ್ಕೆ ಅರ್ಥವಿಲ್ಲದೆ ಆಯ್ತು. ನನ್ನ ಇಡೀ ಜೀವನವೇ ನೀನಾಗಿದ್ದೆ. ನನ್ನ ಯಾಕೆ ಬಿಟ್ಟು ಹೋದೆ’ ಎಂದು ಇನ್ಸ್ಟಾಗ್ರಾಮ್ನಲ್ಲಿ ಶುಭಾ ಪೂಂಜಾ ಬರೆದುಕೊಂಡಿದ್ದಾರೆ.
ಶುಭಾ ಪೂಂಜಾ ತಾಯಿಯವರಿಗೆ ನ್ಯುಮೋನಿಯಾ ಅಟ್ಯಾಕ್ ಆಗಿ ಲಂಗ್ಸ್ನಲ್ಲಿ ನೀರು ತುಂಬಿದ್ದ ಕಾರಣ ಆರೋಗ್ಯದಲ್ಲಿ ಏರುಪೇರಾಗಿತ್ತು. 70ನೇ ವಯಸ್ಸಿಗೆ ಶುಭಾ ಪೂಜಾ ತಾಯಿ ನಿಧನರಾಗಿದ್ದಾರೆ. ಅವರ ಆತ್ಮಕ್ಕೆ ಎಲ್ಲರೂ ಶಾಂತಿ ಕೋರುತ್ತಿದ್ದಾರೆ.