Ad Widget .

ಚಲಿಸುತ್ತಿದ್ದ ಕಾರಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾದ ವಿವಾಹಿತೆ| ಅನಾಮಿಕ ಕರೆಗೆ ಬಲಿಯಾದ ಸಂತ್ರಸ್ತೆ|

Ad Widget . Ad Widget .

ನವದೆಹಲಿ: ಚಲಿಸುತ್ತಿದ್ದ ಕಾರಿನಲ್ಲಿ ವಿವಾಹಿತ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಅಮಾನವೀಯ ಕೃತ್ಯ ದೇಶದ ರಾಜಧಾನಿಯಲ್ಲಿ ನಡೆದಿದೆ.
ಕೆಲಸ ಕೊಡಿಸುವುದಾಗಿ ಹೇಳಿ ಕಾರಿನೊಳಗೆ ಹತ್ತಿಸಿಕೊಂಡ ಇಬ್ಬರು ಕಾಮುಕರು ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ. ಈಶಾನ್ಯ ದೆಹಲಿಯ ಶಾಸ್ತ್ರಿ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಯುವತಿ ದೂರು ನೀಡಿದ್ದು, ದುಷ್ಕೃತ್ಯದ ಬಗ್ಗೆ ಬಾಯ್ಬಿಟ್ಟರೆ ಕೊಲೆ ಮಾಡುವ ಬೆದರಿಕೆಯನ್ನೂ ಹಾಕಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದಾಳೆ. ಸಂತ್ರಸ್ತೆ ತನ್ನ ಪತಿಯೊಂದಿಗೆ ಗಾಜಿಯಾಬಾದ್ ಪ್ರದೇಶದಲ್ಲಿ ವಾಸವಾಗಿದ್ದು ಕೆಲವು ದಿನಗಳ ಹಿಂದೆ ಅಪರಿಚಿತ ವ್ಯಕ್ತಿಯಿಂದ ಫೋನ್‌ ಕರೆ ಬಂದಿತ್ತು.

Ad Widget . Ad Widget .

ತನ್ನ ಹೆಸರು ರೋಹಿತ್ ಎಂದು ಹೇಳಿದ ಆತ ಕೆಲಸದ ಬಗ್ಗೆ ಮಾಹಿತಿ ಕೇಳಿದ್ದಾನೆ. ಹೀಗೆ ಮಾತನಾಡುತ್ತಾ ಉದ್ಯೋಗ ಕೊಡಿಸುವುದಾಗಿ ನಂಬಿಸಿದ್ದಾನೆ. ಆಗಸ್ಟ್‌ 16 ರಂದು ಆತನನ್ನು ಭೇಟಿ ಮಾಡಲು ಮಹಿಳೆ ಹೋಗಿದ್ದಾಳೆ. ಆರೋಪಿ ರೋಹಿತ್‌ ಮಹಿಳೆ ಭೇಟಿಗಾಗಿ ಗಾಜಿಯಾಬಾದ್‌ನ ಲಾಲ್ ಕೌನ್ ಪ್ರದೇಶಕ್ಕೆ ಬಂದವನು ಅಲ್ಲಿಂದ ನೇರವಾಗಿ ದೆಹಲಿಗೆ ಆಕೆಯನ್ನು ಕರೆ ತಂದಿದ್ದಾನೆ. ಆತನೊಂದಿಗೆ ಮತ್ತೋರ್ವ ವ್ಯಕ್ತಿಯೂ ಇದ್ದು, ಚಲಿಸುತ್ತಿದ್ದ ಕಾರಿನಲ್ಲೇ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಾರೆ. ಕೃತ್ಯದ ಬಗ್ಗೆ ಯಾರಿಗಾದರೂ ಬಾಯಿ ಬಿಟ್ಟರೆ ಹತ್ಯೆ ಮಾಡುವ ಬೆದರಿಕೆ ಹಾಕಿದ ಆರೋಪಿಗಳು ಬಳಿಕ ಶಾಸ್ತ್ರಿ ಪಾರ್ಕ್‌ ಬಳಿ ಆಕೆಯನ್ನು ಬಿಟ್ಟು ಪರಾರಿಯಾಗಿದ್ದಾರೆ.

Leave a Comment

Your email address will not be published. Required fields are marked *