ಸಮಗ್ರ ನ್ಯೂಸ್ : ಎರಡು ಬೈಕ್ ಗಳ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿ ನಾಲ್ವರು ಯುವಕರು ಸಾವನ್ನಪ್ಪಿರುವಂತಹ ಘಟನೆ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಆಬಾಳ (ಟಿ) ಗ್ರಾಮದ ಬಳಿ ಸಂಭವಿಸಿದೆ.
ಸಿದ್ದು, ಸರೇಶ್ ರೆಡ್ಡಿ, ಮಲ್ಲು ಪೂಜಾರಿ ಮತ್ತು ಪ್ರಕಾಶ್ ಪೂಜಾರಿ ಮೃತರು. ಸೇಡಂನಿಂದ ಆಬಾಳ್ ಕಡೆ ಹೊರಟಿದ್ದ ಒಂದು ಬೈಕ್ಗೆ ಎದುರಿಗೆ ಬಂದ ಮತ್ತೊಂದು ಬೈಕ್ ಡಿಕ್ಕಿ ಹೊಡೆದಿವೆ. ಸದ್ಯ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಸೇಡಂ ಠಾಣೆಯ ಪೊಲೀಸರು ಪರಿಶೀಲನೆ ಮಾಡಿದ್ದು, ಪ್ರಕರಣ ದಾಖಸಿಕೊಂಡಿದ್ದಾರೆ.