Ad Widget .

ರಾಜ್ಯದ ಜನತೆಗೆ ಮತ್ತೊಂದು ಶಾಕ್.. ಹಾಲಿನ ದರ ಏರಿಕೆಗೆ ಸರ್ಕಾರ ಚಿಂತನೆ..!

ಸಮಗ್ರ ನ್ಯೂಸ್: ಇತ್ತೀಚೆಗೆ ಎಲ್ಲದರಲ್ಲೂ ಬೆಲೆ ಏರಿಕೆ ಬಿಸಿ ಆಯ್ತು. ಬಸ್ ಟಿಕೆಟ್ ದರ, ಮೆಟ್ರೊ ಪ್ರಯಾಣ ದರ  ಏರಿಕೆಯಿಂದ ಕಂಗಾಲಾಗಿರುವ ಜನರಿಗೆ ರಾಜ್ಯ ಸರ್ಕಾರ ಮತ್ತೊಂದು ಶಾಕ್ ನೀಡಲು ಮುಂದಾಗಿದೆ. ಅಧಿವೇಶನ ಮುಗಿದ ಬಳಿಕ ಹಾಲಿನ ದರ ಏರಿಕೆ ಆಗಲಿದೆ ಎಂಬ ಚರ್ಚೆ ಈಗಾಗಲೇ ಕೇಳಿ ಬರುತ್ತಿದೆ. ಅದರಂತೆ ವಿಧಾನ ಪರಿಷತ್ತಿನಲ್ಲಿ  ಹಾಲಿನ ದರ ಏರಿಕೆ ಬಗ್ಗೆ ಪ್ರಸ್ತಾಪವಾಗಿದೆ.

Ad Widget . Ad Widget . Ad Widget . Ad Widget .

ಹಾಲು ಉತ್ಪಾದಕರಿಗೆ ಸರ್ಕಾರ 656.07 ಕೋಟಿ ಪ್ರೋತ್ಸಾಹ ಧನ ಬಾಕಿ ಉಳಿಸಿಕೊಂಡಿದೆ. ಇದರ ವಿಚಾರವಾಗಿ ಸದನದಲ್ಲಿ ಆಕ್ಷೇಪ ಶುರುವಾಯಿತು. ಕರ್ನಾಟಕದಲ್ಲಿ ಒಟ್ಟು 9,04,547 ಫಲಾನುಭವಿ ರೈತರಿಗೆ ಹಾಲು ಉತ್ಪಾದನಾ ಪ್ರೋತ್ಸಾಹ ಧನ ತಲುಪಬೇಕಿದೆ. ಕಳೆದ ಅಕ್ಟೋಬರ್ ತಿಂಗಳಿಂದ ಪ್ರೋತ್ಸಾಹ ಧನ ನೀಡದೇ ಸರ್ಕಾರ ತಡೆಹಿಡಿದಿದೆ. ಈ ಬಗ್ಗೆ ವಿಧಾನ ಪರಿಷತ್ ಕಲಾಪದಲ್ಲಿ ಪರಿಷತ್ ಸದಸ್ಯೆ ಉಮಾಶ್ರೀ ಹಾಗೂ ಎಂಜಿ ಮುಳೆ ಪ್ರಶ್ನೆ ಮಾಡಿದರು. ಈ ವೇಳೆ ಹಾಲಿನ ದರ ಏರಿಕೆಯ ಸುಳಿವನ್ನ ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಪುನರುಚ್ಚರಿಸಿದ್ದಾರೆ.

Ad Widget . Ad Widget .

ಹಾಲಿನ ದರ ಹೆಚ್ಚಳ ಮಾಡಬೇಕು ಎಂಬ ಬೇಡಿಕೆ ರೈತರಿಂದ ಇದೆ. ಈ ವೇಳೆ ಮಧ್ಯ ಪ್ರವೇಶಿಸಿದ ಪರಿಷತ್ ಸದಸ್ಯ ಭೋಜೇಗೌಡ, ಹಾಲಿನ ರೇಟ್ ಜಾಸ್ತಿ ಮಾಡುವಾಗ ಗ್ರಾಹಕರನ್ನೂ ಗಮನದಲ್ಲಿಟ್ಟುಕೊಂಡು ಮಾಡಿ ಅಂತ ಕುಟುಕಿದ್ದಾರೆ.
ಇದೀಗ ಹಾಲು‌ ಒಕ್ಕೂಟಗಳ ರೈತರಿಗೆ ಪ್ರೋತ್ಸಾಹ ಧನ ಕೊಡಬೇಕು ಅಂತ ದರ ಏರಿಕೆಗೆ ಮುಂದಾಗಿದೆ. ಪ್ರತಿ ಲೀಟರ್ಗೆ 5 ಏರಿಕೆಗೆ ಒತ್ತಡವಿದ್ದು, 2 ಅಥವಾ 3 ರೂ. ಏರಿಕೆ ಬಗ್ಗೆ  ಇದೀಗ ಚರ್ಚೆ ಆಗುತ್ತಿದೆ.

Leave a Comment

Your email address will not be published. Required fields are marked *