ಸಮಗ್ರ ನ್ಯೂಸ್: ಬೆಳಗಾವಿಯ ರಾಯಬಾಗದಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಮೂವರು ಮಕ್ಕಳೊಂದಿಗೆ ಕೃಷ್ಣಾ ನದಿಗೆ ಹಾರಿ ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ ಬಳಿ ನಡೆದಿದೆ. ತಾಯಿ ಶಾರದಾ (32), ಮಕ್ಕಳಾದ ಅಮೃತಾ, ಆದರ್ಶ ಹಾಗೂ ಅನುಷ್ಕಾ ಮೃತ ದುರ್ದೈವಿಗಳು.
ತಾಯಿ, ಮಕ್ಕಳು ನದಿಗೆ ಹಾರಿದ್ದನ್ನು ನೋಡಿದ ಸ್ಥಳೀಯರು ನೀರಿನಲ್ಲಿ ಮುಳುಗುತ್ತಿದ್ದ ಅನುಕ್ಷಾಳನ್ನು ರಕ್ಷಣೆ ಮಾಡಿದ್ದರು. ನಂತರ ಆಕೆಯನ್ನು ರಾಯಬಾಗ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಆದರೂ ಚಿಕಿತ್ಸೆಗೆ ಸ್ಪಂದಿಸದೆ ಆಕೆಯೂ ಸಾವಿಗೀಡಾಗಿದ್ದಾಳೆ.
ಪತಿ ಅಶೋಕ್ ನಿತ್ಯ ಕುಡಿದು ಬಂದು ಕಿರುಕುಳ ನೀಡುತ್ತಿದ್ದ , ಇದರಿಂದ ಬೇಸತ್ತು ಶಾರದಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಕುಡಚಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.