ಸಮಗ್ರ ನ್ಯೂಸ್: ನವ ವಿವಾಹಿತ ಯುವಕನೊಬ್ಬ ಮದುವೆಯಾಗಿ ಮೂರೇ ದಿನಕ್ಕೆ ಹೃದಯಾಘಾತದಿಂದ ಮೃತಪಟ್ಟ ಘಟನೆ ಮಂಡ್ಯದ ಕೆ.ಆರ್ ಪೇಟೆಯಲ್ಲಿ ನಡೆದಿದೆ. ಪುರಸಭೆಯ ಸದಸ್ಯ ಕೆ.ಸಿ ಮಂಜುನಾಥ್ ಪುತ್ರ ಶಶಾಂಕ್ ಮೃತ ದುರ್ದೈವಿ.

ಬೆಂಗಳೂರಿನ ಐಟಿ ಸಂಸ್ಥೆಯೊಂದರಲ್ಲಿ ಸಾಫ್ಟ್ವೇರ್ ಇಂಜಿನೀಯರ್ ಆಗಿ ಕೆಲಸ ಮಾಡುತ್ತಿದ್ದ ಶಶಾಂಕ್ ಜಾರ್ಖಂಡ್ ಮೂಲದ ಅಷ್ಣಾ ಹೆಸರಿನ ಯುವತಿಯನ್ನು ಪ್ರೀತಿಸಿ ಕಳೆದ ಭಾನುವಾರವಷ್ಟೇ ಮೈಸೂರಲ್ಲಿ ಬಹಳ ಅದ್ದೂರಿಯಾಗಿ ಮದುವೆಯಾಗಿದ್ದರು. ಮದುವೆಯ ದಿನ ಸ್ವಲ್ಪ ಜ್ವರ ಕಾಣಿಸಿಕೊಂಡಿದ್ದು, ಇದನ್ನು ಸ್ನೇಹಿತರ ಮುಂದೆ ಹೇಳಿಕೊಂಡಿದ್ದಾನೆ. ಆದರೆ ಮದುವೆಯ ಗಡಿಬಿಡಿ ಮಧ್ಯೆ ಸ್ನೇಹಿತರು ಇದನ್ನ ಗಂಭೀರವಾಗಿ ಪರಿಗಣಿಸಿಲ್ಲ. ಮದುವೆ ಮುಗಿದ ಮೇಲೆ ಶಶಾಂಕ್ ಬೆಂಗಳೂರಿನ ನಿವಾಸಕ್ಕೆ ಆಗಮಿಸಿದ್ದಾರೆ. ನಂತರ ಕುಟುಂಬದವರು ಬೆಂಗಳೂರಿಗೆ ಬಂದು ವಾಸವಿದ್ದರು. ನಿನ್ನೆ ಶಶಾಂಕ್ ಗೆ ಮನೆಯಲ್ಲಿ ಎದೆ ನೋವು ಕಾಣಿಸಿಕೊಂಡಿತ್ತು ಆದರೆ ಹತ್ತಿರದ ಆಸ್ಪತ್ರೆಗೆ ದಾಖಲಿಸುವಾಗ ಶಶಾಂಕ್ ಮೃತಪಟ್ಟಿದರು.