ಸಮಗ್ರ ನ್ಯೂಸ್: ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ದೇಶಕ್ಕಾಗಿ ತಮ್ಮ ರಂಜಾನ್ ಉಪವಾಸ ಮುರಿದಿದ್ದಾರೆ. ಹೌದು, ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಉತ್ತಮ ಪ್ರದರ್ಶನ ನೀಡಲು ಉಪವಾಸ ಮುರಿದಿದ್ದಾರೆ. ದೇಶಕ್ಕಾಗಿ ಶಮಿ ತೆಗೆದುಕೊಂಡ ನಿರ್ಧಾರಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಸೋಶಿಯಲ್ ಮೀಡಿಯಾದಲ್ಲಿ ಮೊಹಮ್ಮದ್ ಶಮಿ ನಡೆಯನ್ನು ಕೊಂಡಾಡಿದ್ದಾರೆ. ಪಂದ್ಯದ ನಡುವೆ ಮೊಹಮ್ಮದ್ ಶಮಿ ಎನರ್ಜಿ ಜ್ಯೂಸ್ ಕುಡಿಯುತ್ತಿರುವ ವಿಡಿಯೋಗಳು ಹರಿದಾಡುತ್ತಿದೆ. ಇದೇ ವಿಡಿಯೋಗೆ ಕಮೆಂಟ್ ಮಾಡುತ್ತಿದ್ದಾರೆ.
ಸದ್ಯ ಪವಿತ್ರ ರಂಜಾನ್ ತಿಂಗಳ ಉಪವಾಸ. ಎಲ್ಲಾ ಮುಸ್ಲಿಮರು ಉಪವಾಸ ಮಾಡುತ್ತಾರೆ. ಪ್ರವಾದಿ ಮೊಹಮ್ಮದರ ಆಶಯ, ಹಾಗೂ ಇಸ್ಲಾಂ ಆಚರಣೆಯಂತೆ ಅಷ್ಟೇ ಕಟ್ಟುನಿಟ್ಟಾಗಿ ಉಪವಾಸ ಮಾಡುತ್ತಾರೆ. ಹೀಗಿದ್ದರೂ ಮೊಹಮ್ಮದ್ ಶಮಿ ದೇಶಕ್ಕಾಗಿ ಉಪವಾಸ ಮುರಿದಿದ್ದಾರೆ. ಟೀಂ ಇಂಡಿಯಾದ ಪ್ರಮುಖ ವೇಗಿಯಾಗಿರುವ ಮೊಹಮ್ಮದ್ ಶಮಿ ಮೇಲೆ ಜವಾಬ್ದಾರಿ ಹೆಚ್ಚಿದೆ. ಹೀಗಾಗಿ ಶಮಿ ಉಪವಾಸ ಮುರಿದು ಟೀಂ ಇಂಡಿಯಾಾಗಿ ಉತ್ತಮ ದಾಳಿ ಸಂಘಟಿಸಿದ್ದಾರೆ.