ಸಮಗ್ರ ನ್ಯೂಸ್: ಉತ್ತರ ಪ್ರದೇಶದ ಪ್ರಯಾಗ್ ರಾಜ್ ತ್ರಿವೇಣಿ ಸಂಗಮದಲ್ಲಿ ನಡೆದ ವಿಶ್ವದಲ್ಲೇ ಅತಿ ದೊಡ್ಡ ಧಾರ್ಮಿಕ ಕಾರ್ಯಕ್ರಮ ಎಂದು ಖ್ಯಾತಿ ಪಡೆದಿರುವ ಮಹಾಕುಂಭ ಮೇಳಕ್ಕೆ ಮಹಾಶಿವರಾತ್ರಿ ದಿನವಾದ ಇಂದು ತೆರೆ ಬಿದ್ದಿದೆ.
ಬುಧವಾರ ತ್ರಿವೇಣಿ ಸಂಗಮದಲ್ಲಿ ಕೊನೆಯ ಅಮೃತ ಸ್ನಾನ ನಡೆದಿದೆ. 45 ದಿನಗಳ ಕಾಲ ನಡೆದ ಮಹಾಕುಂಭ ಮೇಳಕ್ಕೆ ತೆರೆ ಬಿದ್ದಿದೆ. ಕೊನೆಯ ದಿನವಾದ ಇಂದು 1.44 ಕೋಟಿ ಜನ ಪುಣ್ಯ ಸ್ನಾನ ಮಾಡಿದ್ದಾರೆ. ಜನವರಿ 13ರಂದು ಶುರುವಾದ ಮಹಾಕುಂಭಮೇಳದಲ್ಲಿ ಇದುವರೆಗೆ 66 ಕೋಟಿ ಜನರು ಪುಣ್ಯ ಸ್ನಾನ ಮಾಡಿದ್ದಾರೆ.
“ಪ್ರಧಾನಿ ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲಿ ಆಯೋಜಿಸಲಾದ ಮಾನವೀಯತೆಯ ‘ಮಹಾ ಯಜ್ಞ’, ನಂಬಿಕೆ, ಏಕತೆ ಮತ್ತು ಸಮಾನತೆಯ ಮಹಾ ಉತ್ಸವ ‘ಮಹಾಕುಂಭ 2025’ ಇಂದು ಮಹಾಶಿವರಾತ್ರಿಯ ಪವಿತ್ರ ಸ್ನಾನದೊಂದಿಗೆ ಪರಾಕಾಷ್ಠೆಯತ್ತ ಸಾಗುತ್ತಿದೆ. ಜನವರಿ 13 ಪೌಷ ಪೂರ್ಣಿಮೆಯಿಂದ ಪ್ರಾರಂಭವಾಗಿ ಫೆಬ್ರವರಿ 26 ಇಂದು ಮಹಾಶಿವರಾತ್ರಿಯವರೆಗೆ 45 ದಿನಗಳಲ್ಲಿ 66 ಕೋಟಿ 21 ಲಕ್ಷಕ್ಕೂ ಹೆಚ್ಚು ಭಕ್ತರು ಪವಿತ್ರ ತ್ರಿವೇಣಿಯಲ್ಲಿ ಸ್ನಾನದ ಪ್ರಯೋಜನವನ್ನು ಪಡೆದಿದ್ದಾರೆ. ಇದು ವಿಶ್ವ ಇತಿಹಾಸದಲ್ಲಿ ಅಭೂತಪೂರ್ವ – ಅವಿಸ್ಮರಣೀಯ…” ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಟ್ವೀಟ್ ಮಾಡಿದ್ದಾರೆ.