ಸುಳ್ಯ: ಮಾರ್ನಿಂಗ್ ಕ್ರಿಕೆಟ್ ಕ್ಲಬ್(ಎಂ.ಸಿ.ಸಿ)ನ ಇದರ ನೂತನ ಪದಾಧಿಕಾರಿಗಳ ನೇಮಕ ಆಯ್ಕೆ ಹಾಗೂ ಮಹಾಸಭೆ ಫೆ.23 ರಂದು ನಡಯಿತು.
ಹಾಲಿ ಅಧ್ಯಕ್ಷ ರಂಜಿತ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಲೆಕ್ಕ ಪತ್ರ ಮಂಡನೆ ಮಾಡಿ ನೂತನ ಯೋಜನೆಗಳ ಬಗ್ಗೆ ಚರ್ಚಿಸಲಾಯಿತು. ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ಅದ್ಯಕ್ಷರಾಗಿ ರಂಜಿತ್ ಕುಮಾರ್ ಪುನರಾಯ್ಕೆ ಮಾಡಲಾಯಿತು.
ಕಾರ್ಯದರ್ಶಿಯಾಗಿ ಬಾಲಕುಮಾರನ್, ಕೋಶಾಧಿಕಾರಿ ಯಾಗಿ ಆಸೀಫ್ ಜಯನಗರ, ಉಪಾಧ್ಯಕ್ಷ ಹನೀಫ್ ಅವರನ್ನು ಆಯ್ಕೆ ಮಾಡಲಾಯಿತು.
ವೇದಿಕೆಯಲ್ಲಿ ಅಧ್ಯಕ್ಷ ರಂಜಿತ್, ಕಾರ್ಯದರ್ಶಿ ಜುಬೀರ್ (ಉಬ್ಬಿ) ಗೌರವಾಧ್ಯಕ್ಷ ಗಿರೀಶ್ ಅಡ್ಪಂಗಾಯ, ಕ್ರೀಡಾ ಕಾರ್ಯದರ್ಶಿ ಅಸೀಫ್ ಜಯನಗರ, ಸ್ಥಾಪಕಾಧ್ಯಕ್ಷರಾದ ಹಂಝ ಕಾತೂನ್ ಮೊದಲಾದವರು ಉಪಸ್ಥಿತರಿದ್ದರು.