Ad Widget .

‘ಅತ್ತೆ ಸಾಯಿಸಲು ಮಾತ್ರೆ ಕೊಡಿ’| ವೈದ್ಯರಿಗೆ ಮೆಸೇಜ್ ಮಾಡಿದ ಸೊಸೆ!!

ಸಮಗ್ರ ನ್ಯೂಸ್: ಸೊಸೆಯೊಬ್ಬಳು ಅತ್ತೆಯನ್ನು ಕೊಲ್ಲಲು ವೈದ್ಯರ ಬಳಿಯೇ ಮಾತ್ರೆ ಕೇಳಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಅತ್ತೆಯನ್ನು ಸಾಯಿಸಬೇಕು ಎಂದು ಬೆಂಗಳೂರಿನ ಡಾಕ್ಟರ್ ಸುನೀಲ್ ಕುಮಾರ್ ಎಂಬುವವರ ಬಳಿ ಸಹಾಯ ಕೇಳಿದ್ದಾಳೆ.

Ad Widget . Ad Widget . Ad Widget . Ad Widget .

ನನ್ನ ಅತ್ತೆ ದಿನ ನನಗೆ ಹಿಂಸೆ ನೀಡುತ್ತಿದ್ದಾರೆ, ಅವರಿಗೆ ತುಂಬಾ ವಯಸ್ಸಾಗಿದೆ ಹೀಗಾಗಿ ಏನಾದ್ರೂ ಹೇಳುತ್ತೀರಾ ಅವರನ್ನು ಹೇಗೆ ಸಾಯಿಸೋದು ಅಂತ ಎಂದು ವೈದ್ಯರಿಗೆ ಮೆಸೇಜ್ ಮಾಡಿದ್ದಾರೆ.

Ad Widget . Ad Widget .

ಜೊತೆಗೆ ಒಂದೆರಡು ಮಾತ್ರೆ ತಗೊಂಡ್ರೆ ಸಾಯುತ್ತಾರೆ ಅಲ್ವಾ ಅದು ಹೇಳಿ ಎಂದು ಕೇಳಿಕೊಂಡಿದ್ದಾಳೆ. ಇದಕ್ಕೆ ವೈದ್ಯರು ನಾವು ಪ್ರಾಣ ಉಳಿಸುವ ಜನ ಆ ರೀತಿ ಮಾಡುವುದಿಲ್ಲ ಎಂದು ಹೇಳಿದಾಗ ತಕ್ಷಣ ವೈದ್ಯರಿಗೆ ಮಾಡಿದ ಮೆಸ್ಸೇಜ್ ಅನ್ನು ಡಿಲೀಟ್ ಮಾಡಿ ನಂಬರ್ ಅನ್ನು ಬ್ಲಾಕ್ ಮಾಡಿದ್ದಾಳೆ.

ಆದರೆ ಆಕೆ ಮೆಸ್ಸೇಜ್ ಡಿಲೀಟ್ ಮಾಡುವ ಮುನ್ನವೇ ಆಕೆ ಮಾಡಿದ್ದ ಮೆಸ್ಸೇಜ್ ನ ಸ್ಕ್ರೀನ್ ಶಾಟ್ ತೆಗೆದ ವೈದ್ಯ ಸುನೀಲ್ ಅವರು ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

Leave a Comment

Your email address will not be published. Required fields are marked *