ಸಮಗ್ರ ನ್ಯೂಸ್: ಶಾಲೆಯಲ್ಲಿ ಪ್ರಾರ್ಥನೆ ಮಾಡುತ್ತಿದ್ದ ಮಕ್ಕಳ ಮೇಲೆ ಹೆಜ್ಜೇನು ದಾಳಿ ನಡೆಸಿದ್ದು, 15 ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಕ್ಕಿಂಜೆ ಗ್ರಾಮದಲ್ಲಿ ನಡೆದಿದೆ.
ವಿದ್ಯಾರ್ಥಿಗಳು ಪ್ರಾರ್ಥನೆ ಮುಗಿಸಿ ಶಾಲೆಯ ಒಳಗೆ ತೆರಳುತ್ತಿದ್ದರು. ಈ ವೇಳೆ ಏಕಾಏಕಿ ಹೆಜ್ಜೇನುಗಳು ದಾಳಿ ನಡೆಸಿವೆ. 15 ವಿದ್ಯಾರ್ಥಿಗಳು ಗಾಯಗೊಂಡಿದ್ದು, ಅವರಲ್ಲಿ ಮೂವರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ.
ವಿದ್ಯಾರ್ಥಿಗಳಾದ ಅವಸಿನಾ (6), ಅಫೀಜ್ (12), ಶಾಬಿತ್ (11), ರಫಾ (7), ನಿಧಾ (13), ಶಾಬೆಲ್ (13), ಇದ್ದೀಶ್ (13), ಫಾಸಿತ್ (11), ಮುಬಾಶಿರ್ (6), ಇಸ್ಮಾಯಿಲ್ (12), ಸುಲೇಮಾನ್ (12), ರಿಹಾನ್ (13), ಸವಾದ್ (13), ಝಿಯಾದ್ (13) ಹಾಗೂ ವಿದ್ಯಾರ್ಥಿಗಳನ್ನು ರಕ್ಷಿಸಲು ಬಂದ ಅಡುಗೆ ಸಹಾಯಕಿ ವಾರಿಜಾ ಅವರ ಮೇಲು ಹೆಜ್ಜೆàನುಗಳು ದಾಳಿ ಮಾಡಿವೆ.
ಇವರೆಲ್ಲರಿಗೂ ಕಕ್ಕಿಂಜೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
1ರಿಂದ 8ನೇ ತರಗತಿವರೆಗೆ ಈ ಶಾಲೆಯಲ್ಲಿ 97 ವಿದ್ಯಾರ್ಥಿಗಳಿದ್ದು, ಸೋಮವಾರ ಕೂಡ ಹೆಜ್ಜೇನುಗಳು ಗಾಳಿ ನಡೆಸಿವೆ. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಅಬ್ದುಲ್ ಖಾದರ್ ಕಡಿತಕ್ಕೊಳಗಾಗಿದ್ದರು. ಬಳಿಕ ಮುನ್ನೆಚ್ಚರಿಕೆ ಕ್ರಮವಾಗಿ ಶಾಲೆಗೆ ರಜೆ ನೀಡಲಾಗಿತ್ತು. ಮಂಗಳವಾರ ಹೆಜ್ಜೇನು ದಾಳಿ ಬಳಿಕ ಶಾಲೆಗೆ ರಜೆ ನೀಡಲಾಯಿತು.
ಅರಣ್ಯ ಇಲಾಖೆ ಡಿಆರ್‌ಎಫ್‌ಒ ನಾಗೇಶ್ ಸಹಿತ ಹಳೇ ವಿದ್ಯಾರ್ಥಿಗಳು ಪೋಷಕರು ಶಾಲೆಗೆ ಧಾವಿಸಿ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ಸೇರಿಸಲು ನೆರವಾದರು.