ಸಮಗ್ರ ನ್ಯೂಸ್: ‘ನಮ್ಮ ಮೆಟ್ರೋ’ ಟಿಕೆಟ್ ಬೆಲೆ ಕೊಂಚ ಇಳಿಕೆಯಾಗಿದ್ದು, ಇಂದಿನಿಂದಲೇ ಪರಿಷ್ಕ್ರತ ದರ ಜಾರಿಗೆ ಬರಲಿದೆ. ಮೆಟ್ರೋ ಟಿಕೆಟ್ ದರ ಏರಿಕೆಗೆ ಜನಾಕ್ರೋಶ ವ್ಯಕ್ತವಾದ ಬೆನ್ನಲ್ಲೇ ಬಿಎಂಆರ್ ಸಿಲ್ ಜನರ ಮೂಗಿಗೆ ತುಪ್ಪ ಸವರಿದ್ದು, ಟಿಕೆಟ್ ಬೆಲೆ ಕೊಂಚ ಇಳಿಕೆ ಮಾಡಿದೆ.
ಮೆಟ್ರೋ ಟಿಕೆಟ್ ನ ಕನಿಷ್ಟ ಹಾಗೂ ಗರಿಷ್ಟ ದರ ಹಾಗೆಯೇ ಇರಲಿದೆ. ಆದರೆ ಕೆಲವು ಸ್ಟೇಷನ್ ಗಳಿಗೆ ಇರುವ ಟಿಕೆಟ್ ಬೆಲೆಯಲ್ಲಿ 10 ರೂ ಇಳಿಸಲಾಗಿದೆ.ಟಿಕೆಟ್ ದರದಲ್ಲಿ ಯಾವುದೇ ಬದಲಾವಣೆ ಇಲ್ಲ, ಕನಿಷ್ಟ ಬೆಲೆ 10 ರೂ ಹಾಗೂ ಗರಿಷ್ಠ ಬೆಲೆ 90 ರೂ ಹಾಗೆಯೇ ಇರಲಿದೆ. ಆದರೆ ಕೆಲವು ದೂರಗಳಿಗೆ ಏರಿಸಿದ್ದ ಬೆಲೆಯಲ್ಲಿ ಗರಿಷ್ಟ 10 ರೂ ಇಳಿಸಲಾಗಿದೆ.
ಮೆಜೆಸ್ಟಿಕ್ ನಿಂದ ವೈಟ್ ಫೀಲ್ಡ್ ಗೆ ಏರಿಸಲಾಗಿದ್ದ 90 ರೂ ರನ್ನು 80 ಕ್ಕೆ ಇಳಿಸಲಾಗಿದೆ. ಮೆಜೆಸ್ಟಿಕ್ ನಿಂದ ವಿಧಾನಸೌಧಕ್ಕೆ ಇದ್ದ 20 ರೂ ರನ್ನು 10 ರೂ ಗೆ ಇಳಿಸಲಾಗಿದೆ. ಚಲ್ಲಘಟ್ಟಕ್ಕೆ ಇದ್ದ 70 ರೂ ನ್ನು 60 ಕ್ಕೆ ಇಳಿಸಲಾಗಿದೆ. ಮೆಜೆಸ್ಟಿಕ್ ನಿಂದ ಬೈಯಪ್ಪನಹಳ್ಳಿಗೆ ಇದ್ದ 60 ರೂ ನ್ನು 50 ಕ್ಕೆ ಇಳಿಸಲಾಗಿದೆ. ಹಾಗೂ ಜಾಲಹಳ್ಳಿಯಿಂದ ಸಿಲ್ಕ್ ಇನ್ ಸ್ಟಿಟ್ಯೂಟ್ ಗೆ ಏರಿಸಿದ್ದ 90 ರೂ ಹಾಗೆಯೇ ಇರಲಿದೆ.