Ad Widget .

ಜಸ್ಪ್ರೀತ್ ಬುಮ್ರಾ ಐಸಿಸಿ ಚಾಂಪಿಯನ್ಸ್ ನಿಂದ ಹೊರಕ್ಕೆ

ಸಮಗ್ರ ನ್ಯೂಸ್: ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಬೆನ್ನು ನೋವಿನ ಕಾರಣದಿಂದ ಮುಂಬರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿಯಲಿದ್ದಾರೆ ಎಂದು ಮಂಗಳವಾರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ದೃಢಪಡಿಸಿದೆ.

Ad Widget . Ad Widget . Ad Widget . Ad Widget .

ಬುಮ್ರಾ ಅವರ ಅಲಭ್ಯತೆಯ ಕಾರಣ, ಹಿರಿಯ ಪುರುಷರ ತಂಡದ ಆಯ್ಕೆ ಸಮಿತಿಯು ಟೂರ್ನಮೆಂಟ್‌ಗಾಗಿ ಹರ್ಷಿತ್ ರಾಣಗೆ ಬುಲಾವ್ ಕೊಟ್ಟಿದೆ.

Ad Widget . Ad Widget .

ಟೂರ್ನಿ ಫೆಬ್ರವರಿ 19 ರಂದು ಪಾಕಿಸ್ತಾನದ ಆತಿಥ್ಯದಲ್ಲಿ ಆರಂಭವಾಗಲಿದೆ. ಬದಲಾದ ತಂಡದಲ್ಲಿ ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿಯೂ ಸ್ಥಾನ ಪಡೆದಿದ್ದಾರೆ. ಆರಂಭಿಕ ಬ್ಯಾಟರ್​ ಯಶಸ್ವಿ ಜೈಸ್ವಾಲ್ ಬದಲಿಗೆ ವರುಣ್ ಆಯ್ಕೆಯಾಗಿದ್ದಾರೆ.

ಬುಮ್ರಾ ಅಲಭ್ಯತೆ ಭಾರತ ತಂಡಕ್ಕೆ ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯಲ್ಲಿ ದೊಡ್ಡ ಹಿನ್ನಡೆಯಾಗಿದೆ. ಭಾರತ ಈ ಟೂರ್ನಮೆಂಟ್ ಅನ್ನು ಎರಡು ಬಾರಿ (2002 ಮತ್ತು 2013ರಲ್ಲಿ) ಗೆದ್ದಿದೆ. ಬುಮ್ರಾ ಪ್ರಸ್ತುತ ಎಲ್ಲಾ ಫಾರ್ಮ್ಯಾಟ್‌ಗಳಲ್ಲಿ ಅತ್ಯುತ್ತಮ ಫಾರ್ಮ್​ನಲ್ಲಿದ್ದರು. 31 ವರ್ಷದ ಬುಮ್ರಾ ಭಾರತದ 2024ರ ಟಿ20 ವಿಶ್ವಕಪ್ ಟ್ರೋಫಿ ವಿಜಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲಿ ಅವರು 15 ವಿಕೆಟ್ ಪಡೆದು 8.26 ಸರಾಸರಿಯಲ್ಲಿ ಬೌಲಿಂಗ್ ಮಾಡಿದ್ದರು.

Leave a Comment

Your email address will not be published. Required fields are marked *